Advertisement

ಗುತ್ತಿಗೆ ಶಿಕ್ಷಕರನ್ನು ಖಾಯಂಗೊಳಿಸುವಂತೆ ಆಗ್ರಹ

05:32 PM Nov 03, 2021 | Team Udayavani |

ಪಣಜಿ: ಗುತ್ತಿಗೆಯ ಮೇಲೆ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಪಣಜಿಯ ಆಜಾದ ಮೈದಾನದಲ್ಲಿ ಪ್ರತಿಭಟನೆ ಆರಂಭಗೊಂಡು 7 ದಿನಗಳು ಪೂರ್ಣಗೊಂಡಿದೆ.

Advertisement

ಸರ್ಕಾರವು ಶಿಕ್ಷಕರ ಸೇವೆ ಖಾಯಂಗೊಳಿಸುವ ಕುರಿತಂತೆ ಯಾವುದೇ ನಿರ್ಣಯ ತೆಗೆದುಕೊಳ್ಳದ ಕಾರಣ ಪ್ರತಿಭಟನಾ ನಿರತ ಸ್ಥಳದಲ್ಲೇ ದೀಪಾವಳಿ ಹಬ್ಬವನ್ನು ಆಚರಿಸುವ ನಿರ್ಣಯ ತೆಗೆದುಕೊಂಡಿರುವುದಾಗಿ ಶಿಕ್ಷಕ ಗಂಗಾರಾಮ ಲಾಂಬೋರೆ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 27 ರಿಂದ ಗುತ್ತಿಗೆ ಆಧಾರಿತ 54 ಜನ ಶಿಕ್ಷಕರು ಆಂದೋಲನ ನಡೆಸುತ್ತಿದ್ದಾರೆ. ಪ್ರತಿಭಟನೆ ಆರಂಭಿಸಿದ ಎರಡನೇಯ ದಿನವೇ ಶಿಕ್ಷಕರೊಬ್ಬರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.

ಇದನ್ನೂ ಓದಿ:- ಐಎಸ್‌ಐ ನಂಟಿನ ಅಖಿಲೇಶ್ ಮತಾಂತರಕ್ಕೂ ಸಿದ್ಧ: ಸಚಿವ ಶುಕ್ಲಾ ಆರೋಪ

ಈ ಪ್ರತಿಭಟನಾ ನಿರತ ಶಿಕ್ಷಕರಿಗೆ ಪ್ರತಿಪಕ್ಷಗಳು ಬೆಂಬಲ ನೀಡಿವೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಈ ಶಿಕ್ಷಕರಿಗೆ ಒಂದು ವರ್ಷಗಳ ವರೆಗೆ ಗುತ್ತಿಗೆ ಆಧಾರದಲ್ಲಿ ಸೇವೆ ಮುಂದುವರೆಸುವ ಭರವಸೆ ನೀಡಿದ್ದಾರೆ. ಆದರೆ ಸೇವೆ ಖಾಯಂಗೊಳಿಸಬೇಕು ಎಂದು ಈ ಶಿಕ್ಷಕರು ಪಟ್ಟುಹಿಡಿದಿದ್ದು , ದೀಪಾವಳಿ ಹಬ್ಬವನ್ನು ಕೂಡ ಅಲ್ಲಿಯೇ ಆಚರಿಸುವ ನಿರ್ಣಯ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next