ಮೊನ್ನೆಮೊನ್ನೆಯವರೆಗೂ, ಬೈಕಿದ್ದವನಿಗೆ ಕಾರುಕೊಳ್ಳುವ ಆಸೆ,ಕಾರಿದ್ದವನಿಗೆ ಮತ್ತಷ್ಟು ದೊಡ್ಡ, ಹಡಗಿನಂಥ ದುಬಾರಿ ಕಾರುಕೊಳ್ಳುವ ಹುಚ್ಚು, ಮೂರು ಮಂದಿಯಿರುವ ಮನೆಗೆ ನಾಲ್ಕೈದು ಗಾಡಿಗಳನ್ನಿಟ್ಟುಕೊಳ್ಳುವ ಶೋಕಿ ಹೆಚ್ಚಿತ್ತು. ಆದರೀಗ ಕೋವಿಡ್ ಕಾರಣಕ್ಕೆ ಒಬ್ಬಿಬ್ಬರಲ್ಲ, ಸಾವಿರಾರು ಮಂದಿಗೆ ನೌಕರಿಗಳು ಹೋಗಿಬಿಟ್ಟಿವೆ. ಹಾಗೂ ಹೀಗೂ ಕೆಲಸ ಉಳಿದರೂ ಅರ್ಧ ಸಂಬಳ ಮಾತ್ರ ಗ್ಯಾರಂಟಿ ಅನ್ನುವಂಥ ಸಂದರ್ಭ ಜೊತೆಯಾಗಿದೆ.
ಪರಿಣಾಮ,ಕಾರು ಸಾಕುವುದು ಆನೆ ಸಾಕಿದಂತೆ ಅನ್ನಿಸತೊಡಗಿದೆ. ಈ ಮಧ್ಯೆ, ಲಾಕ್‌ಡೌನ್ ಅವಧಿ ಮುಗಿದು ಆಫೀಸ್‌ಗೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಬಸ್,ಕ್ಯಾಬ್ ಅಥವಾ ಮೆಟ್ರೋ ರೈಲು ಹತ್ತಲು ಜನ ಹೆದರುತ್ತಿದ್ದಾರೆ. ಪಕ್ಕದಲ್ಲಿ ಇದ್ದವರಿಗೆ
ಕೋವಿಡ್ ಇದ್ದರೆ ಎಂಬುದೇ ಈ ಆತಂಕಕ್ಕೆಕಾರಣ. ಹಾಗಂತ,ಕಚೇರಿಗೆ ಹೋಗುವುದನ್ನು ತಪ್ಪಿಸಲು ಆಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳಿಗೆ ಡಿಮ್ಯಾಂಡ್ ಶುರುವಾಗಿದೆ. “ಒಳ್ಳೆ ಮೈಲೇಜ್ ಇರುವ ಸೆಕೆಂಡ್ ಹ್ಯಾಂಡ್ ಟೂ ವ್ಹೀಲರ್ ಎಲ್ಲಾದರೂ ಇದ್ದರೆ ತಿಳಿಸಿ’ ಎಂಬ ಮೆಸೇಜುಗಳು ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಹರಿದಾಡುತ್ತಿವೆ. ಶೋರೂಮುಗಳಲ್ಲಿ, ಮೆಕ್ಯಾನಿಕ್ ಅಂಗಡಿಗಳಲ್ಲಿಕೆಲಸ ಮಾಡುತ್ತಿರುವರಿಗೆ ಜನ ದುಂಬಾಲು ಬೀಳುತ್ತಿದ್ದಾರೆ. ಸೆಕೆಂಡ್ ಹ್ಯಾಂಡ್
ಬೈಕುಗಳಿಗೆ ಡಿಮ್ಯಾಂಡ್ ಇದೆ ಎಂಬ ವಿಚಾರ ತಿಳಿಯುತ್ತಿದ್ದಂತೆ, ಆನ್‌ಲೈನ್/ಆಫ್ ಲೈನ್ ಪ್ಲಾಟ್ ಫಾರ್ಮ್ಗಳು ಅಲ್ಲಲ್ಲಿ ತಲೆ ಏಳುತ್ತಿವೆ. ಬೌನ್ಸ್, ಡ್ರೈವ್‌ಜಿ ಮತ್ತು ವೊಗೊಗಳಂತಹ ಬಾಡಿಗೆ ವಾಹನಗಳನ್ನು ಪೂರೈಸುವಕಂಪನಿಗಳೂ ತಮ್ಮಲ್ಲಿರುವ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಮುಂದಾಗಿವೆ. ಸ್ವಂತ ವಾಹನಗಳನ್ನು ಖರೀದಿಸುವ ಆಸೆಯೇನೋ ಎಲ್ಲರಿಗೂ ಇದೆ. ಆದರೆಕೈಲಿ ದುಡ್ಡಿಲ್ಲ. ಹೊಸ ದ್ವಿಚಕ್ರ ವಾಹನಕೊಳ್ಳಬೇಕೆಂದರೆ60 ಸಾವಿರಕ್ಕಿಂತ ಹೆಚ್ಚೇ ವ್ಯಯಿಸಬೇಕು. ಇರುವ ದುಡ್ಡಲ್ಲೇ ಅಡ್ಜೆಸ್ಟ್ ಮಾಡಿಕೊಂಡು, ತುರ್ತು ಬಳಕೆಗೆಂದು ಸೆಕೆಂಡ್ ಹ್ಯಾಂಡ್ ಗಾಡಿಗಳನ್ನುಕೊಳ್ಳುವುದೇ ಉತ್ತಮವೆಂಬ ಯೋಚನೆ ಎಲ್ಲರದ್ದೂ ಆಗಿದೆ. ಹಾಗಾಗಿ,25ರಿಂದ30 ಸಾವಿರ ರೂ.ಗೆ ಸಿಗುವ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಹೆಚ್ಚಿನವರು,150 ಸಿಸಿ ವರೆಗಿನ ಹಳೆಯ ಬೈಕುಗಳಿಗೆ ಮೊರೆ ಹೋಗುತ್ತಿದ್ದಾರೆ. ಸುಲಭವಾಗಿ ಮೈಂಟೇನ್ ಮಾಡಬಲ್ಲ, ದುಂದುವೆಚ್ಚಕ್ಕೆಕಡಿವಾಣ ಹಾಕುವ ವಾಹನ ಖರೀದಿಸುವುದು ಎಲ್ಲರ ಆಯ್ಕೆ ಆಗಿದೆ.
ಹೋಂಡ ಆ್ಯಕಿcವಾಗೆ ಭಾರಿ ಡಿಮ್ಯಾಂಡ್ : 10,000 ಕೀ.ಮಿ.ವರೆಗೆ ಓಡಿದ ಹೋಂಡ ಆ್ಯಕ್ಟಿವಾಗಳಿಗೆ40,000 ರೂ. ಡಿಮ್ಯಾಂಡ್ ಇದೆ. ಫಸ್ಟ್ ಹ್ಯಾಂಡ್ ಓನರ್ ಗಾಡಿಯನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ ಎಂಬುದು ಗಮನಕ್ಕೆ ಬಂದಂತೆ, ಸ್ವಲ್ಪ ಹೆಚ್ಚೇ ದುಡ್ಡು ಹೋದರೂ ಖರೀದಿಸಿಬಿಡೋಣ. ಆ್ಯಕ್ಟೀವಾ ಒಳ್ಳೆಯ ಗಾಡಿ ಎಂಬ ಅಭಿಪ್ರಾಯ ಹಲವರದ್ದು. ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ದಿಢೀರನೆ ಮಾರ್ಕೆಟ್ ಸಿಕ್ಕಿರುವುದರಿಂದ ಬೌನ್ಸ್ ಕಂಪನಿಗೆ ಹೆಚ್ಚಿನ ಲಾಭವಾಗಿದೆ ಅನ್ನಬೇಕು. ಅವರು, ಬಳಕೆಯಾದ ದ್ವಿಚಕ್ರ ವಾಹನಗಳನ್ನು 20-40 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಖರೀದಿಗೆ ಮುನ್ನ ಪರೀಕ್ಷಿಸಲೇಬೇಕಾದ ಸಂಗತಿಗಳು ಪ್ರಮುಖವಾಗಿ ಎರಡು ಸಂಗತಿಗಳಿಗೆ ಮಹತ್ವ ನೀಡಿ.
- ಮೆಕ್ಯಾನಿಕಲ್ ಟೆಸ್ಟ್
- ದಾಖಲೆ ಪತ್ರಗಳ ಪರೀಕ್ಷೆ
ಮೆಕ್ಯಾನಿಕಲ್ ಟೆಸ್ಟ್ :
ಆಯಿಲ್ ಸೋರಿಕೆ: ಬೈಕ್ ತೊಳೆಯದೆ ಇದ್ದರೆ ಆಯಿಲ್ ಸೋರಿಕೆಯನ್ನು ಬೇಗ ಪತ್ತೆ ಮಾಡಬಹುದು. ವಾಶ್ ಮಾಡಿದ್ದರೆ ಸೂಕ್ಷ್ಮವಾಗಿ ಇಂಜಿನ್‌ನ ಸುತ್ತಲೂ ಕಣ್ಣಾಡಿಸಿ.
ತುಕ್ಕು: ಬೈಕಿನ ಭಾಗಗಳು ತುಕ್ಕು ಹಿಡಿದಿವೆಯೇ ಎಂದು ಪರೀಕ್ಷಿಸಿ. ಸಣ್ಣಪುಟ್ಟ ರಸ್ಟ್ ಸಮಸ್ಯೆ ಇದ್ದರೆ ಓಕೆ, ಹೆಚ್ಚಿದ್ದರೆ ಖರೀದಿಸಬೇಡಿ. ಹೊಸ ಬಿಡಿಭಾಗಗಳನ್ನು ಸೇರಿಸಲು ಹೆಚ್ಚುವರಿಯಾಗಿ ಹಣ ವ್ಯಯಿಸಬೇಕಾಗುತ್ತದೆ.
ಗೆರೆ: ಸಣ್ಣಪುಟ್ಟ ಗೆರೆಗಳು ಸಾಮಾನ್ಯವಾಗಿ ಬಿದ್ದಿರುತ್ತವೆ. ನಗರದ ಟ್ರಾಫಿಕ್ಕುಗಳಲ್ಲಿ ಗಾಡಿ ಓಡಿಸುವಾಗ, ಇಕ್ಕಟ್ಟಾದ ಜಾಗದಲ್ಲಿ ನಿಲ್ಲಿಸುವಾಗಗೆರೆಗಳು ಬೀಳುವುದು ಸಹಜ. ಆದರೆ ದಟ್ಟವಾಗಿ ಬಿದ್ದಿದ್ದರೆ ಸ್ವಲ್ಪ ಯೋಚನೆ ಮಾಡಿ.
ಅಪಘಾತದಿಂದಾದ ಡ್ಯಾಮೇಜ್: ಹೆಚ್ಚಿನವರು ತಮ್ಮ ಗಾಡಿಯನ್ನು ಮಾರಲು ಮುಂದಾಗಲು ಪ್ರಮುಖ ಕಾರಣವೇ ಅಪಘಾತದಿಂದ ಬೈಕಿಗಾದ ಸಾಕಷ್ಟು ಪ್ರಮಾಣದ ಡ್ಯಾಮೇಜ್ ಎಂಬುದು ಗಮನದಲ್ಲಿರಲಿ. ಅಪಘಾತದಕುರುಹುಗಳಾಗಿ ವೆಲ್ಡ್ ಮಾಡಿರುವುದು, ಹೊಸ ಬಿಡಿಭಾಗಗಳನ್ನು ಜೋಡಿಸಿರುವುದು, ಹ್ಯಾಂಡಲಿನಲ್ಲಿ ವ್ಯತ್ಯಾಸಕಂಡು ಬರುತ್ತದೆ. ಟಯರಿನ ರಿಮ್ ಅನ್ನು ಚೆಕ್ ಮಾಡಿ. ಗಂಭೀರ ಪ್ರಮಾಣದ ಹಾನಿಯಾಗಿ, ರಿಪೇರಿ ಮಾಡಿಸಿದ್ದರೆಂದು ಗಮನಕ್ಕೆ ಬಂದಲ್ಲಿ ಖರೀದಿಸಬೇಡಿ.
ಇಂಜಿನ್ ಟೆಸ್ಟ್: ಇಗ್ನಿಷನ್ ಆನ್ ಮಾಡಿ ಹೊಗೆ ಅಥವಾ ಸುಟ್ಟ ವಾಸನೆ ಬರುತ್ತಿದೆಯೇ ಪರೀಕ್ಷಿಸಿ. ಗಾಡಿ ಸ್ಟಾರ್ಟ್ ಮಾಡಿದಾಗ ಇಂಜಿನ್ ಸದ್ದನ್ನು ಸೂಕ್ಷ್ಮವಾಗಿ ಆಲಿಸಿ. ವ್ಯತ್ಯಾಸಕಂಡುಬಂದರೆ ಇಂಜಿನ ಬಾಳಿಕೆ ಬಗ್ಗೆ ವಿಚಾರಿಸಿ.
ಆಯಿಲ್ ಟೆಸ್ಟ್: ಡಿಪ್ ಸ್ಟಿಕ್) ತೆಗೆದು ಇಂಜಿನ್ ಆಯಿಲ್ ಪರೀಕ್ಷೆ ಮಾಡಿ. ಆಯಿಲ್ ದಟ್ಟ ಕಂದು ಬಣ್ಣಕ್ಕೆ ತಿರುಗಿದ್ದರೆ ತಕ್ಷಣ ಆಯಿಲ್ ಬದಲಿಸಬೇಕು.
ಡಿಪ್‌ಸ್ಟಿಕ್‌ನ ಆಯಿಲ್ ಲೆವೆಲ್ ಸರಿಯಾಗಿರಬೇಕು. ಸ್ಪಾರ್ಕ್ ಪ್ಲಗ್, ಏರ್ ಕ್ಲೀನರ್, ಬ್ಯಾಟರಿ, ಬ್ರೇಕ್, ಕ್ಲಚ್ ಮತ್ತು ಗೇರ್ ಗಳನ್ನೂ ಪರೀಕ್ಷಿಸಲು ಮರೆಯಬಾರದು. ಮೈಲೇಜ್ ಮೀಟರ್ ಬದಲಿಸಿ ಕಡಿಮೆಕಿ. ಮೀ. ಓಡಿರುವಂತೆ ತೋರಿಸಿ ಮೋಸ ಮಾಡುವವರು ಇದ್ದಾರೆ. ಓಡಿರುವಕಿ. ಮೀ.ಗೂ ಬೈಕಿನ ಅವಸ್ಥೆಗೂ ಹೊಂದಿಕೆಯಾಗುತ್ತದೆಯೇ ಎಂದು ಗಮನಿಸಿ. ಟೈರ್‌ಗಳು ಎಷ್ಟು ಸವೆದಿವೆ ಎಂಬುದರ ಮೇಲೂ ಅಂದಾಜಿಸಬಹುದು. ಟೆಸ್ಟ್ ಡ್ರೈವ್ ಮಾಡದೆ ಖರೀದಿಸಲೇ ಬೇಡಿ. ಟೆಸ್ಟ್ ರೈಡಿನಲ್ಲಿ ತಮಗೆ ಓಡಿಸಲು ಸೂಕ್ತವಿದೆಯೇ, ಇಂಜಿನ್‌ನ ಸೌಂಡು,ಕ್ಲಚ್, ಬ್ರೇಕ್, ಗೇರ್ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದೂ ಪತ್ತೆ ಮಾಡಬಹುದು.
ದಾಖಲೆ ಪತ್ರಗಳ ಪರೀಕ್ಷೆ : ಮೆಕ್ಯಾನಿಕಲ್ ಟೆಸ್ಟ್ ವೇಳೆ ಎಲ್ಲವೂ ತೃಪ್ತಿದಾಯಕವಾಗಿವೆ ಎಂದಾದರೆ ದಾಖಲೆ ಪತ್ರಗಳನ್ನು ಸರಿಯಾಗಿ ಪರೀಕ್ಷಿಸಿ.ಕಳವು ಮಾಡಿದಗಾಡಿಗಳನ್ನು ಮಾರುವ ಜಾಲ ಸಕ್ರಿಯವಾಗಿದೆ ಎಂಬುದು ತಲೆಯಲ್ಲಿರಲಿ. ಆರ್‌ಸಿ ಬುಕ್ಕಲ್ಲಿ ಇರುವುದೆಲ್ಲವೂ ವ್ಯಾಲಿಡ್ ಆಗಿದೆಯೇ ಗಮನಿಸಿ. ಎಂಜಿನ್ ಮತ್ತು ಚಾಸಿಸ್ ಸಂಖ್ಯೆ ತಾಳೆಯಾಗುತ್ತಿದೆಯೇ ನೋಡಿ. ಆರ್‌ಸಿ ಬುಕ್ಕಲ್ಲಿರುವಂತೆ ಗಾಡಿಯ ಬಣ್ಣ, ಮಾಲೀಕರ ಮಾಹಿತಿ ಎಲ್ಲವನ್ನು ಸೂಕ್ಷ್ಮವಾಗಿ ಟೆಸ್ಟ್ ಮಾಡಿ.
ಟ್ಯಾಕ್ಸ್ ಸರ್ಟಿಫಿಕೇಟ್ ವ್ಯಾಲಿಡ್ ಇದೆಯೇ ಪರೀಕ್ಷಿಸಿ. ಇನುರೆನ್ಸ್ ಅವಧಿ ಎಷ್ಟಿದೆ ನೋಡಿ. ಹೊಸದಾಗಿ ಇನುÏರೆನ್ಸಿಗೇ ಹೆಚ್ಚು ವ್ಯಯಿಸುವ ಪ್ರಮೇಯ ಬಾರದಂತೆ ನೋಡಿಕೊಳ್ಳಿ. ನೈಸರ್ಗಿಕ ವಿಕೋಪ ಮತ್ತು ಅಪಘಾತ ಎರಡಕ್ಕೂ ವಿಮೆಯಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಪಿಯುಸಿ ಸರ್ಟಿಫಿಕೇಟ್, ಪೂರ್ತಿ ಸರ್ವಿಸ್ ಹಿಸ್ಟರಿ, ಎನ್ ಒಸಿ ಮತ್ತು ಮಾಡೆಲ್ ಮ್ಯಾನು ವಲ್ ಎಲ್ಲವೂ ಸರಿಯಾಗಿವೆಯೇ ನೋಡಿ.
-ಎಲ್.ಕೆ. ಮಂಜುನಾಥ್