Advertisement

ಹರ್ಡೇಕರ ಮಂಜಪ್ಪನವರಿಗೆ ಭಾರತ ರತ್ನ ನೀಡಿ: ಸಾಹಿತಿ ಹಿರೇಮಠ

08:36 PM Mar 05, 2022 | Vishnudas Patil |

ಆಲಮಟ್ಟಿ: ರಾಷ್ಟ್ರಧರ್ಮ ದೃಷ್ಟಾರ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನೇ ಮುಡುಪಾಗಿರಿಸಿದ್ದ ಮಂಜಪ್ಪ ಹರ್ಡೇಕರ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಸಾಹಿತಿ, ಉಪನ್ಯಾಸಕ ಐ.ಬಿ.ಹಿರೇಮಠ ಹೇಳಿದರು.

Advertisement

ಶುಕ್ರವಾರ ಸಂಜೆ ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಪ.ಪೂ.ಮಹಾವಿದ್ಯಾಲಯದ ಲಿಂ.ಡಾ. ತೋಂಟದ ಸಿದ್ದಲಿಂಗಶ್ರೀಗಳ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮಕ್ಕಳ ಶುಭಕೋರುವ ಸಮಾರಂಭ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಮಂಜಪ್ಪನವರು ಜಗಜ್ಯೋತಿ ಬಸವಣ್ಣವರ ಜೀವನ ಚರಿತ್ರೆ, ಅನುಭವಮಂಟಪ ಮತ್ತು ಶರಣರ ವಚನಗಳನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮಹಾತ್ಮಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ಪ್ರತಿಗಳನ್ನು ನೀಡಿದ್ದರು, ಪುಸ್ತಕ ಮುಖ್ಯಾಂಶ ಓದಿದ ಡಾ.ಅಂಬೇಡ್ಕರ ಅವರು ಕರ್ನಾಟಕದ ಜನತೆಯನ್ನುದ್ದೇಶಿಸಿ ನಿಮ್ಮ ನೆಲದಲ್ಲಿ ಇಂಥ ಮಹಾನ್ ಚೇತನಗಳ ಕುರಿತು ಹತ್ತು ವರ್ಷಗಳ ಹಿಂದೆ ಹಿಂದಿ ಭಾಷೆಗೆ ತರ್ಜುಮೆ ಮಾಡಿದ್ದರೆ ತಾವು ಬೌದ್ಧಧರ್ಮ ಸ್ವೀಕರಿಸಿತ್ತಿರಲಿಲ್ಲ ಬಸವಣ್ಣನವರು ಹುಟ್ಟು ಹಾಕಿದ ಧರ್ಮವನ್ನು ಸ್ವೀಕರಿಸುತ್ತಿದಗದೆ ಎಂದು ಹೇಳಿದ್ದರು.

ಮಂಜಪ್ಪನವರು 1922ರಲ್ಲಿ ಆಲಮಟ್ಟಿಗೆ ಆಗಮಿಸಿ 360ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವ್ಯಸನಮುಕ್ತ ಗ್ರಾಮ ಮಾಡುವದರೊಂದಿಗೆ ಸ್ವಾತಂತ್ರ್ಯ ಚಳುವಳಿಗೆ ಜನರಲ್ಲಿ ಜಾಗೃತಿ ಮೂಡಿಸಿತ್ತಿದ್ದರು. ಹೀಗೆ ಹಲವಾರು ರೀತಿಯಲ್ಲಿ ರಾಷ್ಟ್ರಕಟ್ಟುವಲ್ಲಿ ವಿಶೇಷ ಆಂದೋಲನ ಮಾಡಿದ್ದರು ಇಂಥ ಮಹಾನಚೇತನಕ್ಕೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜುನಾಥ ಹಿರೇಮಠ ನೆರವೇರಿಸಿದರು. ಮುಖ್ಯೋಪಾಧ್ಯಾಯ ಎಸ್.ಐ.ಗಿಡ್ಡಪ್ಪಗೋಳ ಅಧ್ಯಕ್ಷತೆವಹಿಸಿದ್ದರು.ವೇದಿಕೆಯಲ್ಲಿ ರಾಜ್ಯಸರ್ಕಾರಿ ನೌಕರರ ಸಂಘದ ಆಲಮಟ್ಟಿ ಯೋಜನಾ ಶಾಖೆಯ ಅಧ್ಯಕ್ಷ ಸದಾಶಿವ ದಳವಾಯಿ, ನಿಡಗುಂದಿ ತಾಲ್ಲೂಕು ಕಾನಿಪ ಅಧ್ಯಕ್ಷ ಶಂಕರ ಜಲ್ಲಿ, ಸ್ಮಿತಾ ಬೆಳಗಲ್ಲ, ಎಚ್.ಎನ್.ಕೆಲೂರ, ಜಿ.ಎಂ.ಕೋಟ್ಯಾಳ, ಪಿ.ಎ.ಹೇಮಗಿರಿಮಠ, ಟಿ.ಎಸ್.ಪೂಜಾರಿ, ಯು.ಎ.ಹಿರೇಮಠ ಮೊದಲಾದವರಿದ್ದರು.

ವಿದ್ಯಾರ್ಥಿನಿ ತಸ್ಮಿಯಾ ನಿಂಬಾಳ ಸ್ವಾಗತಿಸಿದರು. ಸುಪ್ರಿಯಾ ಹಳ್ಳಿ ನಿರೂಪಿಸಿದರು. ವಿಜಯಲಕ್ಷ್ಮಿ ರಾಠೋಡ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next