ಹೊಸಪೇಟೆ: ಆಮೆಗತಿಯಲ್ಲಿ ಸಾಗಿರುವ ಎಡಿಬಿ ಕಾಮಗಾರಿ ಪೂರ್ಣವಾಗದೇ ನಾಗರಿಕರು ತೀವ್ರ ತೊಂದರೆಗೀಡಾಗಿದ್ದು, ಶೀಘ್ರವೇ ವಿವಿಧ ಕಡೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಗುಜ್ಜಲ ನಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಎಡಿಬಿ ಕಾಮಗಾರಿ ವಿಳಂಬವಾದ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು. ಸದ್ಯದಲ್ಲಿ ಸದಸ್ಯರ ಅವಧಿ ಪೂರ್ಣಗೊಳ್ಳುತ್ತಾ ಬಂದರೂ ಎಡಿಬಿ ಯೋಜನೆಯ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ.
ನಗರದ ಎಲ್ಲೆಡೆ ಕಡೆ ಏಕಕಾಲದಲ್ಲಿ ಕಾಮಗಾರಿಗಳನ್ನು ಆರಂಭಿಸಿ, ನಾಗರಿಕರು ರಸ್ತೆಯಲ್ಲಿ ಸಂಚಾರ ಮಾಡದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಜನರು ಸದಸ್ಯರನ್ನು ಛೀಮಾರಿ ಹಾಕುತ್ತಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳ್ಳಿಸಲಬೇಕು ಎಂದು ಆಗ್ರಹಿಸಿದರು.
ಫಾರಂ ನಂಬರ್-3 ದೊರೆಯದೇ ಬಡವರು ಸರಕಾರದ ಯೋಜನಗಳನ್ನು ಪಡೆಯಲು ಪರದಾಟುವಂತಾಗಿದೆ. ಎಂ.ಆರ್.90 ಇಲ್ಲದವರಿಗೆ ಫಾರಂ-3 ನೀಡುತ್ತಿಲ್ಲ. ನಗರದಲ್ಲಿ ಬಹುತೇಕ ಬಡವರಿಗೆ ನಗರಸಭೆಯು 1991ರಲ್ಲಿ ನೀಡಿರುವ , ಎಂ.ಆರ್.90 ದಾಖಲೆಯ ಸಂಖ್ಯೆ ಇರುವುದಿಲ್ಲ. ಕಾರಣ ಕೊಪ್ಪಳ ನಗರಸಭೆಯಲ್ಲಿ ಹಳೇ ದಾಖಲಾಯಿತಿಯನ್ನು ಆಧರಿಸಿ ಫಾರಂ-3ಯನ್ನು ನೀಡಲಾಗುತ್ತದೆ. ಅದರಂತೆ ಇಲ್ಲಿಯೂ ಪಾರಂ-3 ನೀಡಲು ಕ್ರಮ ವಹಿಸಬೇಕು ಎಂದು ನಗರಸಭೆಯ ಸದಸ್ಯ ಡಿ.ವೇಣುಗೋಪಾಲ ಒತ್ತಾಯಿಸಿದರು. ಬಡವರಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಇದ್ದರೂ ಫಾರಂ-3 ದೊರೆಯದೆ ಫಲಾನುಭವಿಗಳ ವಂಚಿತರಾಗುತ್ತಿದ್ದರೆ, ಹಳೆ ದಾಖಲಾಯಿತಿ ಆಧಾರಸಿ ಸಾರ್ವಜನಿಕರಿಗೆ ಫಾರಂ-3 ನೀಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷೆ ಸುಮಂಗಳಮ್ಮ, ಲೆಕ್ಕಾಧಿಕಾರಿ ಶಂಭುಲಿಂಗ, ವ್ಯವಸ್ಥಾಪಕ ಮಂಜುನಾಥ್, ಸದಸ್ಯರಾದ ಟಿ.ಚಿದಾನಂದ, ಕೆ.ಮಲ್ಲಪ್ಪ, ಚಂದ್ರಕಾಂತ ಕಾಮತ್, ರೂಪೇಶ್‌ಕುಮಾರ್, ಮಲ್ಲಪ್ಪ, ಚಂದ್ರಕಾಂತ್ ಕಾಮತ್ ಬಸವರಾಜ, ಮಲ್ಲಿಕಾರ್ಜನ, ಕೆ.ಗೌಸ್, ಬಡೆವಲಿ, ರಾಮಚಂದ್ರ ಗೌಡ್, ರಾಮಾಂಜಿನಿ, ಕಣ್ಣಿ ಉಮಾದೇವಿ, ನಾಗಲಕ್ಷ್ಮೀ, ಬಸವರಾಜ, ನೂರ್‌ಜಾನ್, ರಾಮಕೃಷ್ಣ, ಇಡ್ಲಿ ಚನ್ನಮ್ಮ, ಧನುಲಕ್ಷ್ಮಿ, ಎಸ್.ಬಸವರಾಜ, ಬೆಲ್ಲದ್ ರೋಫ್ ಸೇರಿದಂತೆ ಇನ್ನಿತರೆ ಸದಸ್ಯರು ಇದ್ದರು.