Advertisement

ಜೈನ ಸಿಮೀತರ್ ಶಿಖರ್ ಕ್ಷೇತ್ರ ಪ್ರವಾಸಿ ಕೇಂದ್ರ ಘೋಷಣೆ ರದ್ದುಗೊಳಿಸಲು ಆಗ್ರಹ

08:16 PM Dec 21, 2022 | Team Udayavani |

ಗಂಗಾವತಿ: ಜಾರ್ಖಂಡ್ ರಾಜ್ಯದಲ್ಲಿರುವ ಜೈನರ ಪವಿತ್ರ ಕ್ಷೇತ್ರವಾಗಿರುವ ಜೈನ ಸಿಮೀತರ್ ಶಿಖರ್ ಕ್ಷೇತ್ರವನ್ನು ಪ್ರವಾಸಿಕೇಂದ್ರ ಎಂದು ಘೋಷಣೆ ಮಾಡಿದ್ದನ್ನು ರದ್ದುಗೊಳಿಸಲು ಆಗ್ರಹಿಸಿ ಗಂಗಾವತಿ ಜೈನ ಸಮಾಜ ಹಾಗೂ ಶ್ರೀ ಪಾರ್ಶ್ವನಾಥ ಜೈನ ಶ್ವೇತಾಂಬರ ಮಂದಿರ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿ ಹಾಗೂ ಜಾರ್ಖಂಡ್ ರಾಜ್ಯದ ಸಿಎಂಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡ ಉಗಮ್ ರಾಜ್ ಬಂಬ್ ಜೈನ್ ಹಾಗೂ ಭವರ್ ಲಾಲ್ ಜೈನ್ ಮಾತನಾಡಿ, ಜಾರ್ಖಂಡ್ ರಾಜ್ಯದಲ್ಲಿರುವ ಜೈನರ ಪವಿತ್ರ ಕ್ಷೇತ್ರವಾಗಿರುವ ಜೈನ್ ಸಿಮೀತರ್ ಶಿಖರ್ ಕ್ಷೇತ್ರವನ್ನು ಪ್ರವಾಸಿಕೇಂದ್ರ ಎಂದು ಘೋಷಣೆ ಮಾಡಿದ್ದು ಸರಿಯಲ್ಲ.ಇದರಿಂದ ಜೈನ ಕ್ಷೇತ್ರ ಅಪವಿತ್ರವಾಗುವ ಸಾಧ್ಯತೆ ಇದೆ. ಈ ಮೊದಲಿನಂತೆ ಜೈನ್ ಕ್ಷೇತ್ರವಾಗಿ ಮಾತ್ರ ಇರಲು ಅನುವು ಮಾಡಿಕೊಡಬೇಕು. ಇದರಿಂದ ಇಲ್ಲಿಯ ಪರಿಸರ ಶುದ್ಧವಾಗಿರಲು ಸಾಧ್ಯವಾಗುತ್ತದೆ. ಕೇಂದ್ರ ಸರಕಾರದ ಆದೇಶ ಕೂಡಲೇ ರದ್ದುಗೊಳಿಸುವಂತೆ ಮನವಿ ಮಾಡಿದರು.

ಉಗಮರಾಜ್, ಬಾಬುಲಾಲ್ ಭಾಂಠಿಯಾ, ಅಜೀತರಾಜ್ ಸುರಾನ್, ಪ್ರಕಾಶ ಛೋಪ್ರಾ, ದಿಲೀಪ್, ಗಣಪತಿರಾಜ್, ಮಹಾವೀರ, ಕಾಂತಿಲಾಲ್, ಉದಯಕುಮಾರ, ನೂತನಕುಮಾರ, ಉದಯ್, ಅಶೋಕ, ಬಾಹುಬಲಿ ಜೈನ್,ರಾಕೇಶ, ನಿರ್ಮಲ್, ಸುಭಾಸ, ದೀರೇಶ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next