ಹರಪನಹಳ್ಳಿ: ಈರುಳ್ಳಿ ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮಠಾಧಿಧೀಶರು ಮತ್ತು ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ರೈತರು ಈರುಳ್ಳಿ ರಸ್ತೆಗೆ ಚೆಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ರೈತನ ಅಣಕು ಶವ ಪ್ರದರ್ಶಿಸಿ, ಈರುಳ್ಳಿ ರಸ್ತೆಗೆ ಹಾಕಿ ಪ್ರತಿಭಟಿಸಿದ ಕಾರ್ಯಕರ್ತರು ಬಳಿಕಮಿನಿವಿಧಾನ ಸೌಧದ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು. ನಂತರ ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ ಅವರ ಮೂಲಕಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳ ರೈತರು ಈರುಳ್ಳಿ ಬೆಳೆಯನ್ನೇ ನಂಬಿ ಕುಟುಂಬ ನಿರ್ವಹಿಸುತ್ತಿದ್ದಾರೆ. ಈ ಬಾರಿಕೋವಿಡ್‌ನಿಂದ ರೈತರು ಮೊದಲೇ ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಈರುಳ್ಳಿಬೆಳೆಗೆ ಕೊಳೆರೋಗ ಬಂದು, ಇಡಿ ಕುಟುಂಬವನ್ನೇ ಅಲುಗಾಡಿಸಿದೆ. ಸಾಲ ಮಾಡಿ ಬೆಳೆದ ಬೆಳೆಗಳು ನಾಶವಾಗಿರುವುದರಿಂದ ರೈತರು ಸಂಷ್ಟಕ್ಕೆ ಒಳಗಾಗಿ ಕೂಡಲೇ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ,ಕೋವಿಡ್ ದಿಂದ ನರಳಿರುವ ರೈತರಿಗೆ ಕೊಳೆರೋಗ ಬರೆ ಎಳೆದಿದೆ.
ಹೀಗಾಗಿ ಈರುಳ್ಳಿ ಬೆಳೆಗಾರರ ಬದುಕು ಬೀದಿಗೆ ಬಂದಿದೆ. ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಒಕ್ಕೂಟ ರಾಜ್ಯ ಉಪಾಧ್ಯಕ್ಷೆ ಬೇಗಂ, ತಾಲೂಕು ಘಟಕದ ಅಧ್ಯಕ್ಷೆ ಅಡಿವೆಪ್ಪ, ಮೈಲಾರ ಜ್ಯೋತಿ, ಗುಡಿಹಳ್ಳಿ ಹಾಲೇಶ್, ಅಶೋಕ, ಸಿದ್ದಲಿಂಗನಗೌಡ, ಉಮೇಶ್, ಗುರುಪ್ರಸಾದ್, ದಾದಾಪೀರ, ಮನೋಜ್, ಮೆಹಬೂಬ್ ಸಾಬ್, ಮಾಚಿಹಳ್ಳಿ ಶಿವರಾಜ್ ಇದ್ದರು.