Advertisement

ವರ್ಷಾಂತ್ಯಕ್ಕೆ 7ನೇ ವೇತನ ಆಯೋಗ ಜಾರಿಗೆ ಆಗ್ರಹ

05:14 PM Oct 04, 2022 | Team Udayavani |

ತುರುವೇಕೆರೆ: ಬಹು ನಿರೀಕ್ಷಿತ ರಾಜ್ಯ ಸರ್ಕಾರಿ ನೌಕರರಿಗೆ ನವೆಂಬರ್‌-ಡಿಸೆಂಬರ್‌ ಅಂತ್ಯದೊಳಗೆ 7ನೇ ವೇತನ ಆಯೋಗ ನೀಡುವ ಸಂಬಂಧ ಒಂದು ಸಮಿತಿ ಮಾಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್‌.ನರಸಿಂಹರಾಜು ತಿಳಿಸಿದರು.

Advertisement

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿನ ತಾಲೂಕು ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರ ಪ್ರಮಾಣ ಪತ್ರ ಸ್ವೀಕಾರ ಹಾಗೂ ಕಾರ್ಯಕಾರಿಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಒಂದು ವೇಳೆ 7ನೇ ವೇತನ ಆಯೋಗ ನೀಡದಿದ್ದಲ್ಲಿ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ರಾಜ್ಯ ಸಂಘವು ಸುಮಾರು 24 ಕೋಟಿ ಲಾಭ ದಲ್ಲಿದ್ದು, ಎಲ್ಲ ಇಲಾಖೆಯ ನೌಕರ ಬಂಧುಗಳಿಗೆ ಎಲ್ಲ ರೀತಿಯ ಸೌಲಭ್ಯ ಸಿಗುವಂತೆ ಮಾಡುವ ದಿಸೆ ಯಲ್ಲಿ ರಾಜ್ಯಾಧ್ಯಕ್ಷರು ಕಾರ್ಯೋನ್ಮುಖರಾಗಲಿದ್ದಾರೆ. ಸರ್ಕಾರ ಹೊರಡಿಸುವ ಎಲ್ಲ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸದಲ್ಲಿ ನೌಕರರು ಬದ್ಧತೆ ತೋರುವುದರ ಜೊತೆಗೆ ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವಂತೆ ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಂರಾಜು ಮುನಿಯೂರು ಮಾತನಾಡಿ, ರಾಜ್ಯದಲ್ಲಿನ ಲಕ್ಷಾಂತರ ಸರ್ಕಾರಿ ನೌಕರರು ಹಳೆ ಪಿಂಚಣಿಯಿಂದ ವಂಚಿತರಾಗಿದ್ದು, ಈ ನೌಕರರನ್ನು ಅವಲಂಬಿಸಿರುವ ಕುಟುಂಬದ ಭದ್ರತೆಗಾಗಿ ಒಪಿಎಸ್‌ ಮರು ಜಾರಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.

ಆರೋಗ್ಯ ಇಲಾಖೆಯಲ್ಲಿ ಕೊರತೆಯಾಗಿರುವ ಅನುದಾನಗಳಿಗೆ ವಿಶೇಷ ಗಮನ ನೀಡುವುದು, ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್‌ ಎಂಜಿನಿಯರ್‌, ಲೋಕೋಪಯೋಗಿ ಮತ್ತು ಹೇಮಾವತಿ ಇಲಾಖೆಗಳಲ್ಲಿ ಆಗಿರುವ ಮುಂಬಡ್ತಿಯ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ವೀರಪ್ರಸನ್ನ ಜಿಲ್ಲಾ ಅಧ್ಯಕ್ಷರ ಬಳಿ ಮನವಿ ಮಾಡಿದರು.

Advertisement

ಇದೇ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿರುವ ನಂರಾಜುಮುನಿಯೂರು ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಗೆ ಉಪಾಧ್ಯಕ್ಷರಾಗಿರುವ ಸಾ.ಶಿ.ದೇವರಾಜುಗೆ ಆದೇಶದ ಪ್ರಮಾಣ ಪತ್ರ ಜಿಲ್ಲಾಧ್ಯಕ್ಷರು ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್‌, ಉಪಾಧ್ಯಕ್ಷ ಆರಾಧ್ಯ, ಖಜಾಂಚಿ ನಾಗರಾಜು, ರಾಜ್ಯ ಪರಿಷತ್‌ ಸದಸ್ಯ ರಂಗನಾಥಯ್ಯ, ಮಾಜಿ ತಾಲೂಕು ಅಧ್ಯಕ್ಷ ಮಂಜಣ್ಣ, ನಿರ್ದೇಶಕರಾದ ನಟೇಶ್‌, ಬಾಲಾಜಿ, ಚಂದ್ರಹಾಸ, ರಂಗಯ್ಯ, ವೀರಪ್ರಸನ್ನ ಮತ್ತು ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next