Advertisement

ವೇಗದೂತ ಬಸ್‌ ನಿಲುಗಡೆಗೆ ಆಗ್ರಹ

11:55 AM Sep 18, 2019 | Suhan S |

ಕಾರಟಗಿ: ಗ್ರಾಮದಲ್ಲಿ ವೇಗದೂತ ಬಸ್‌ ನಿಲುಗಡೆಗೆ ಆಗ್ರಹಿಸಿ ಸಮೀಪದ ಮರ್ಲಾನಹಳ್ಳಿ ಗ್ರಾಮಸ್ಥರು ಶಾಸಕ ಬಸವರಾಜ ದಢೇಸೂಗುರ ಅವರಿಗೆ ಮನವಿ ಸಲ್ಲಿಸಿದರು.

Advertisement

ನಂತರ ಮಾತನಾಡಿದ ಗ್ರಾಮದ ನಿವಾಸಿ ಮದನ್‌ ಸೇಠ, ಗ್ರಾಮದಲ್ಲಿ ವಿವಿಧ ರಾಜ್ಯಗಳ ನಿವಾಸಿಗಳು ವಾಸಿವಿದ್ದಾರೆ. ಸುತ್ತಲಿನ ಮೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 30ಕ್ಕೂ ಹೆಚ್ಚು ಗ್ರಾಮಗಳು, ಕ್ಯಾಂಪ್‌ಗ್ಳ ಗ್ರಾಮಸ್ಥರು ಬೇರೆ ಬೇರೆ ಊರುಗಳಿಗೆ ತೆರಳಲು ಮರ್ಲಾನಹಳ್ಳಿ ಮುಖ್ಯ ಕೇಂದ್ರ ಸ್ಥಾನವಾಗಿದೆ. ಅಲ್ಲದೆ ರಾಜ್ಯ ಹೆದ್ದಾರಿಯಲ್ಲಿ ಗ್ರಾಮವಿದ್ದರೂ ಕೂಡ ಗ್ರಾಮದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್‌ಗಳು ಸೇರಿದಂತೆ ಇತರೆ ಬಸ್‌ಗಳು ಸಹ ನಿಲುಗಡೆ ಇರುವುದಿಲ್ಲ. ಕೆಲವೊಮ್ಮೆ ನಿರ್ವಾಹಕರೂ ಕೂಡ ನಿಲುಗಡೆ ಇಲ್ಲವೆಂದು ಹೇಳುತ್ತಾರೆ. ಇದರಿಂದಾಗಿ ಜನಕ್ಕೆ ತೊಂದರೆಯಾಗುತ್ತದೆ ಎಂದರು.

ರಾತ್ರಿ ಸಮಯದಲ್ಲಿ ದೂರದ ಊರಿಂದ ಬರುವವರು ಕಾರಟಗಿ ಅಥವಾ ಸಿದ್ದಾಪುರಗೆ ಬಂದು ಇಳಿಯಬೇಕಾದ ಅನಿವಾರ್ಯತೆ ಉದ್ಬವಿಸಿದೆ. ಶಾಲಾ ಕಾಲೆಜ್‌ ವಿದ್ಯಾರ್ಥಿಗಳು ಬಸ್‌ಗಳ ನಿಲುಗಡೆ ಇಲ್ಲದ ಕಾರಣ ಖಾಸಗಿ ಟಾಂಟಾಂ, ಟ್ರ್ಯಾಕ್ಸ್‌ ಹಾಗೂ ಗೂಡ್ಸ್‌ ವಾನಗಳಲ್ಲಿ ಒಡಾಡಬೇಕಾದ ಪರಿಸ್ಥಿತಿ ಬಂದಿದೆ. ಸಿಂಧನೂರ ಮತ್ತು ಗಂಗಾವತಿ ಘಟಕದಿಂದ ಈ ಮಾರ್ಗವಾಗಿ ತೆರಳುವ ಬಸ್‌ಗಳನ್ನು ಗ್ರಾಮದಲ್ಲಿ ನಿಲುಗಡೆಗೆ ಸೂಚನೆ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಗ್ರಾಮಸ್ಥರ ಬೇಡಿಕೆಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಕರಿಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜೆ.ಯಮನೂರ, ಗ್ರಾಪಂ ಸದಸ್ಯ ಪ್ರಕಾಶ ರಾವ್‌, ಪ್ರಮುಖರಾದ ಲಕ್ಷ ್ಮಣ, ರಾಜಾಸಾಬ್‌, ಯಂಕೋಬ ನಾಯಕ, ನಾಗಪ್ಪ ದೇವಪೂರ, ಆನಂದ ಪಲ್ಲೇದ, ರಾಜು, ಗಂಗಾಧರ, ಶಾಶಾವಲಿ, ಶ್ರೀನಿವಾಸ ಶ್ರೇಷ್ಠಿ, ಸೂರಡ್ಡಿ, ಶ್ರೀಹರಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next