ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕೆಸ್ತೂರು ಮತ್ತು ಚಿಕ್ಕತೊಟ್ಲುಕೆರೆ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಕಾಲಕ್ಕೆ ಬರುತ್ತಿಲ್ಲ.ಬಂದರೂ ಬಸ್ ಪಾಸ್ ಹೊಂದಿದ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೋವಿನಕೆರೆಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ತೋವಿನಕೆರೆಯಿಂದ ತುಮಕೂರಿಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಎರಡು ಮಾರ್ಗದಲ್ಲಿ ಬಸ್ ಸಂಚರಿಸುತ್ತವೆ. ತೋವಿನಕೆರೆಯಿಂದ ಹೋಗುವ ವಿದ್ಯಾರ್ಥಿಗಳಿಗೆ ಒಂದು ಮಾರ್ಗದಲ್ಲಿ ಕಾಲೇಜಿಗೆ ಪ್ರಯಾಣ ಮಾಡಲು ಸೂಚನೆ ನೀಡಿದ್ದಾರೆ. ಅದೇ ಮಾರ್ಗವಾಗಿ ಹೋಗಬೇಕಾಗುತ್ತಿತ್ತು. ಆದರೆ, ಸರಿಯಾದ ವೇಳೆಗೆ ಬಸ್ ಬರದ ಕಾರಣ ಬೇರೆ ಮಾರ್ಗದ ಬಗ್ಗೆ ಸಕಾಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇನ್ನೂ ಬಸ್ ಹತ್ತಲು ಹೋದರೆ ಟಿಕೆಟ್ ನೀಡುತ್ತಾರೆ ಹಾಗೂ ಸಕಾಲಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ರಸ್ತೆಯಲ್ಲೇ ಪ್ರತಿಭಟನೆ ನಡೆಸಲಾಯಿತು.
ನಗುವ ಮನಸು ತಂಡದ ಅಧ್ಯಕ್ಷ ಜೆ.ಎಸ್.ಹೇಮಂತ ಕುಮಾರ್ ಹಾಗೂ ವಿದ್ಯಾರ್ಥಿಗಳು ಇಂದೇ ನಮಗೆ ಆದೇಶ ಪ್ರತಿ ಬೇಕು ಎಂದು ರಸ್ತೆಯಲ್ಲಿ ಕುಳಿತರು. ವಿದ್ಯಾರ್ಥಿಗಳ ಹೋರಾಟಕ್ಕೆ ಮಾಜಿ ಶಾಸಕ ಸುಧಾಕರ್ ಲಾಲ್ ಬೆಂಬಲಿಸಿ ವಿದ್ಯಾರ್ಥಿಗಳ ಮಧ್ಯೆ ಪ್ರತಿಭಟನೆಗೆ ಕುಳಿತರು. ಇದಾದ 20 ನಿಮಿಷದಲ್ಲಿ ಆದೇಶ ಪ್ರತಿಯನ್ನು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಹಿ ಹಾಕಿ ಎರಡು ಕಡೆ ಸಂಚಾರಕ್ಕೆ ವಿದ್ಯಾರ್ಥಿಗಳು ಸಂಚರಿಸಲು ಅನುವು ಮಾಡಿಕೊಟ್ಟ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಗ್ರಾಪಂ ಅಧ್ಯಕ್ಷ ಟಿ.ಆರ್.ನಾಗರಾಜು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಡಿಎಎಸ್‌ಎಸ್ ಮುಖಂಡ ಹನುಮಂತರಾಜು, ಪದ್ಮನಾಭ ಇದ್ದರು.
ಬಸ್‌ಗಳು ಬರಬೇಕಾದ ಸಮಯಕ್ಕೆ ಬಾರದೆ ತಮ್ಮ ಸಮಯಕ್ಕೆ ಬರುತ್ತವೆ.ಅಲ್ಲದೇ ತುಮಕೂರು ಬಸ್ ನಿಲ್ದಾಣಕ್ಕೆ ಟಿಕೆಟ್ ಕೊಡಿ ಎಂದರೆ ಶಿರಾಗೇಟ್ ಮಾತ್ರ ಎಂಬುದಾಗಿ ನಿರ್ವಾಹಕರು ಹೇಳುತ್ತಾರೆ. ಆ ನಂತರ ಡಿಪೋ ಮ್ಯಾನೇಜರ್‌ಗೆ ಪೋನ್ ಮಾಡುತ್ತೇನೆ ನಾನು ಒಬ್ಬಳು ಇಲ್ಲಿ ಇಳಿದು ತುಮಕೂರು ಬಸ್ ನಿಲ್ದಾಣಕ್ಕೆ ಹೋಗಿ ಮುಂದೆ ಹೋಗುವುದು ಹೇಗೆ ಎಂದು ಕೇಳಿದಾಗ ಬಸ್ ನಿಲ್ದಾಣಕ್ಕೆ ಹೋಗಿ ಬಿಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ..?—
ರುಕ್ಮಿಣಿ ಪ್ರಯಾಣಿಕರು
ನಮಗೆ ಕೊಟ್ಟಿರೋದು ಕೆಸ್ತೂರು ಮಾರ್ಗ ಬೇರೆ ಮಾರ್ಗವಾಗಿ ಹೋದ್ರೆ ನಮಗೆ ಕೇಸ್ ಹಾಕುತ್ತೇವೆ ಎಂದು ಸಿಬ್ಬಂದಿ ಹೇಳುತ್ತಾರೆ. ಹಲವು ವಿದ್ಯಾರ್ಥಿಗಳಿಂದ ದಂಡವೂ ಕಟ್ಟಿಸಿಕೊಂಡಿದ್ದಾರೆ. ಇಂದು ನಮಗೆ ಆದೇಶ ಪ್ರತಿ ದೊರಕಿರೋದು ತುಂಬ ಅನುಕೂಲವಾಗಿದೆ.—
ಗೀತಾ, ವಿದ್ಯಾರ್ಥಿನಿ