Advertisement

ಪಾಲಿಕೆ ಅಧಿಕಾರಿಗಳ ವರ್ಗಾವಣೆಗೆ ಆಗ್ರಹ

11:40 AM Apr 07, 2018 | |

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಾಯಬಣ್ಣ ಜಮಾದಾರ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಸಾಮಾನ್ಯ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ನೀಡುತ್ತಿಲ್ಲವಾದ್ದರಿಂದ ಇವರನ್ನು ವರ್ಗಾವಣೆ ಮಾಡಬೇಕು. ಸಂವಿಧಾನದ ಆದೇಶದಂತೆ ಸರ್ಕಾರಿ ನೌಕರಿ ಮಾಡುವವರಿಗೆ ಮೂರು ವರ್ಷದ ಅವಧಿ ಮುಗಿದ ನಂತರ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲು ಅವಕಾಶವಿದ್ದರೂ ಪಾಲಿಕೆಯ ಅಧಿಕಾರಿಗಳನ್ನು 10 ವರ್ಷವಾದರೂ ವರ್ಗಾವಣೆ ಮಾಡಿಲ್ಲ ಎಂದರು . ಪಾಲಿಕೆ ಅಧಿಕಾರಿಗಳಾದ ಆರ್‌.ಪಿ. ಜಾಧವ್‌, ವಿಜಯಲಕ್ಮೀ ಪಟ್ಟೇದಾರ, ರಿಯಾಜ್‌, ಸೌಭಾಗ್ಯ, ಅಕ್ರಮ್‌,  ದಿರಾಬಾಯಿ, ಜೈರಾಮ ಕುಲಕರ್ಣಿ ಸೇರಿದಂತೆ ಹಲವು ಅಧಿಕಾರಿಗಳನ್ನು ಒಂದು ವಾರದೊಳಗೆ ವರ್ಗಾವಣೆ ಮಾಡದಿದ್ದರೇ ಅಹಿಂದ ಚಿಂತಕರ ವೇದಿಕೆ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. 

ಅಹಿಂದ ಚಿಂತಕರ ವೇದಿಕೆ ಕಾರ್ಯದರ್ಶಿ ರಾಜೇಂದ್ರ ರಾಜವಾಳ, ಜಿಲ್ಲಾ ಖಜಾಂಚಿ ಸಂಜು ಹೊಡಲಕರ್‌, ರಮೇಶ ಹಡಪದ, ವೀರಥಾ ಪೂಜಾರಿ, ಸಿದ್ದರಾಮ ಘಾಳೆ, ಸಾಯಬಣ್ಣ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next