Advertisement

ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಆಗ್ರಹ

01:43 PM Jan 26, 2022 | Team Udayavani |

ಯಾದಗಿರಿ: ರಾಜ್ಯಾದ್ಯಂತ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕುರಿತು ಸರ್ಕಾರದ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ಜಮೀನುಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮಾರ್ಗಸೂಚಿಯನ್ವಯ ಕ್ರಮಬದ್ಧವಾಗಿ ನಿಗದಿತ ಅವಧಿಯಲ್ಲಿ ಹಸ್ತಾಂತರ ಮಾಡುವಂತೆ ಮದನಪುರ ಸ್ಲಂ ನಿವಾಸಿಗಳ ಸಂಘ ಆಗ್ರಹಿಸಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮದನಪುರ ಸ್ಲಂ ನಿವಾಸಿಗಳ ಸಂಘ ಅಧ್ಯಕ್ಷ ಆನಂದ ನಾಟೇಕಾರ, ಯಾದಗಿರಿ ನಗರಸಭೆ ವ್ಯಾಪ್ತಿಯ ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕುರಿತು ಘೋಷಿತ ಕೊಳಚೆ ಪ್ರದೇಶಗಳ ಜಮೀನುಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲು ಪತ್ರ ಬರೆಯಲಾಗಿದೆ. ಶಾಸ್ತ್ರಿ ನಗರ ಕೊಳಗೇರಿ ಪ್ರದೇಶ ತಕ್ಷಣ ಕೊಳಚೆ ಮಂಡಳಿ ರಾಯಚೂರು ಅವರಿಗೆ ಹಸ್ತಾಂತರಗೊಂಡರೆ ನಮಗೆ ತಕ್ಷಣ ನ್ಯಾಯ ಸಿಗುತ್ತದೆ ಎಂದು ವಿವರಿಸಿದರು.

ನಗರಸಭೆ ಈಗಾಗಲೇ ನಗರದ 15 ಘೋಷಿತ ಕೊಳಚೆ ಪ್ರದೇಶ ಹಸ್ತಾಂತರಿಸಿದೆ. ಆದರೆ ಘೋಷಿತ ಸ್ಲಂ ಆಗಿರುವ ಶಾಸ್ತ್ರಿ ನಗರ ಕೊಳಚೆ ಪ್ರದೇಶವಾದ ಸರ್ವೇ ನಂ. 389/1 ರಲ್ಲಿನ 1 ಎಕರೆ ಜಮೀನಿನಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ವಿತರಿಸಿಲ್ಲ. ಈಗಾಗಲೇ ಹಕ್ಕುಪತ್ರ ವಿತರಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಮಾಸಾಂತ್ಯಕ್ಕೆ ಕ್ರಮ ಜರುಗಿಸದಿದ್ದರೆ ಹೈಕೋರ್ಟ್‌ ಆದೇಶ ಉಲ್ಲಂಘನೆ ಪ್ರಕರಣ ಕಲಬುರ್ಗಿ ಹೈಕೋರ್ಟ್‍ನಲ್ಲಿ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂಘದ ಗೌರವ ಸಲಹೆಗಾರಾದ ವೈಜನಾಥಸ್ವಾಮಿ ಹಿರೇಮಠ, ಗೌರವಾಧ್ಯಕ್ಷ ಸ್ವಾಮಿನಾಥನ್‌ ಅಪ್ಪುಕುಟನ್‌, ಅಧ್ಯಕ್ಷ ಆನಂದ ನಾಟೇಕರ್‌, ಜಯಕೃಷ್ಣ, ಮಹಮ್ಮದ್‌, ಬಾಬು, ಅಕºರ್‌, ಗಫೂರ, ಅಬ್ಟಾಸ್‌, ವಿಜಯಲಕ್ಷ್ಮೀ, ಈರಮ್ಮ, ಗೌರಮ್ಮ, ಚಾಂದಬಿ, ಮಹೆಬೂಬಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.