Advertisement

ಜಿಲ್ಲೆಯಲ್ಲಿ ಪ್ಯಾಸೆಂಜರ್‌ ರೈಲು ಪುನಾರಂಭಿಸಲು ಜನರ ಒತ್ತಾಯ

06:42 PM Oct 02, 2021 | Team Udayavani |

ದೇವನಹಳ್ಳಿ: ಕೋವಿಡ್‌ ದೇಶದೆಲ್ಲೆಡೆ ಪ್ರಬಲವಾಗಿ ಹರಡುತ್ತಿದ್ದ ಕಾರಣ ಸ್ಥಗಿತಗೊಂಡಿರುವ ರೈಲು ಸೇವೆ ಇದುವರೆಗೂ ಆರಂಭಗೊಳ್ಳದ ಕಾರಣ, ಕೂಲಿ ಕಾರ್ಮಿಕರೂ ಸೇರಿದಂತೆ ರೈತರು, ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಜನರು ಅಸಮಾಧಾನ ತೋಡಿಕೊಂಡಿದ್ದಾರೆ.

Advertisement

ಮೊದಲೇ ಜಿಲ್ಲೆಗೆ ರೈಲ್ವೆ ಸೌಲಭ್ಯ ಕಡಿಮೆಯಿದೆ. ಇರುವ ರೈಲು ಸಂಚಾರವನ್ನು ಕೊರೊನಾ 2ನೇ ಅಲೆ ಸಮಯದಲ್ಲಿ ಸ್ಥಗಿತಗೊಳಿಸಲಾಗಿದೆ. ಲಾಕ್‌ಡೌನ್‌ ತೆರವಾಗಿರುವುದರಿಂದ ಈಗಲಾದರೂ ಕೇಂದ್ರ ಸರ್ಕಾರ ಪ್ಯಾಸೆಂಜರ್‌ ರೈಲು ಬಿಡುವಂತೆ ಆಗಬೇಕು ಎಂದು ರೈಲ್ವೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:- ‘ಗೋಡ್ಸೆ ಜಿಂದಾಬಾದ್’ ಭಾರತಕ್ಕೆ ಅವಮಾನ : ಬಿಜೆಪಿ ಸಂಸದ ವರುಣ್ ಗಾಂಧಿ

ಪ್ರತಿನಿತ್ಯ ಬೆಂಗಳೂರಿನಿಂದ ಯಶವಂತಪುರದ ಮಾರ್ಗವಾಗಿ ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮೂಲಕ ಕೋಲಾರ ತಲುಪುತ್ತಿದ್ದ ರೈಲುಗಳ ಸಂಚಾರ ಆರಂಭವಾಗಿಲ್ಲ.

ರೈತರು ಬೆಳೆದಂತಹ ಬೆಳೆ ಯಶವಂತಪುರ ಮಾರುಕಟ್ಟೆಗೆ ಸಾಗಿಸಿಕೊಳ್ಳಲು ಖಾಸಗಿ ಬಸ್‌ ಹಾಗೂ ವಾಹನಗಳಿಗಾಗಿ ದುಬಾರಿ ವೆಚ್ಚ ಮಾಡಬೇಕಾದಂತಹ ಪರಿಸ್ಥಿತಿಯಿದೆ. ರೈಲು ಸೇವೆ ಆರಂಭಗೊಂಡಿದ್ದರೆ, ದುಬಾರಿ ವೆಚ್ಚದ ಬದಲಾಗಿ, ಕಡಿಮೆ ಖರ್ಚಿನಲ್ಲಿ ಬೆಳೆದ ಬೆಳೆಗಳು ಸಾಗಾಣಿಕೆ ಮಾಡಿಕೊಳ್ಳಲಿಕ್ಕೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ.

Advertisement

ರೈತರು, ನಾವೇ ಪ್ರತ್ಯೇಕವಾಗಿ ವಾಹನಗಳು ಮಾಡಿಕೊಂಡು ಹೋದರೆ, ಬಾಡಿಗೆ ಜೊತೆಗೆ ಟೋಲ್‌ ಕೂಡ ಕಟ್ಟಬೇಕು ಎನ್ನುತ್ತಾರೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಕೂಲಿಗಾಗಿ ಹೋಗುವಂತಹ ಕಾರ್ಮಿಕರು, ದಿನನಿತ್ಯ ದುಡಿಯುವಂತಹ ಕೂಲಿಯಲ್ಲಿ ಬಸ್‌ಗೆ ಅರ್ಧದಷ್ಟು ಹಣ ಖರ್ಚು ಮಾಡಬೇಕಾಗಿದೆ.

ಇದರಿಂದ ಕೂಲಿಗೆ ಹೋದರೂ ಕುಟುಂಬ ನಿರ್ವಹಣೆ ಕಷ್ಟಕರವಾಗುತ್ತಿದೆ ಎನ್ನುತ್ತಾರೆ. ರೈಲು ಸಂಚಾರ ಆರಂಭಗೊಂಡರೆ ಸಮಯ ಉಳಿತಾ  ಯದ ಜತೆಗೆ ಖರ್ಚು ಕೂಡಾ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೂಲಿಕಾರ್ಮಿಕರು.

ಕೊರೊನಾ ಹಿನ್ನೆಲೆ ಪ್ಯಾಸೆಂಜರ್‌ ರೈಲನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಸರ್ಕಾರ ಈಗ ಕೊರೊನಾ 2ನೇ ಅಲೆ ಕಡಿಮೆಯಾಗಿದ್ದು, ಕೆಲವು ವಲಯಗಳಿಗೆ ರಿಲೀಪ್‌ ಕೊಟ್ಟಿದೆ. ಅದೇ ರೀತಿ ಪ್ರಯಾಣಿಕರಿಗೆ ಅನುಕೂಲವಾಗಲು ಪ್ಯಾಸೆಂಜರ್‌ ರೈಲಿನ ಸಂಚಾರ ಪ್ರಾರಂಭಿಸಬೇಕು. ಇದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧ ಕಡೆ ಸಂಚರಿಸಲು ಅನುಕೂಲವಾಗುತ್ತದೆ.

ಗಿರೀಶ್‌, ರೈಲ್ವೆ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next