Advertisement

ಪುನರ್ವಸತಿ ಹಕ್ಕು ಪತ್ರಕ್ಕೆ ಆಗ್ರಹ: ಬೇಡಿಕೆ ಈಡೇರದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ

03:06 PM Aug 26, 2022 | Team Udayavani |

ಕಮಲಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುರಿಕೋಟಾ-ನಾಗೂರ ಗ್ರಾಮಸ್ಥರು ಕುರಿಕೋಟಾ ಮುಖ್ಯರಸ್ತೆ ತಡೆದು ಬ್ಲಾಕ್‌ ಕಾಂಗ್ರೆಸ್‌ ನೇತೃತ್ವದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಕುರಿಕೋಟಾ ಹಾಗೂ ನಾಗೂರ ಗ್ರಾಮಗಳ ಪುನರ್ವಸತಿ ಕೇಂದ್ರದ ಹಕ್ಕುಪತ್ರ ವಿತರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಒಂದು ವರ್ಷದಿಂದ ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕುರಿಕೋಟಾ ಮಾರ್ಗದಲ್ಲಿ ಹಾಯ್ದು ಹೋಗುವ ಬಸ್ಸುಗಳು ಮುಖ್ಯ ರಸ್ತೆ ಮೂಲಕ ಹೋಗುತ್ತಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪುನರ್ವಸತಿ ಕೇಂದ್ರಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಸುರೇಶ್‌ ವರ್ಮ ಅವರಿಗೆ ಬ್ಲಾಕ್‌ ಅಧ್ಯಕ್ಷ ವೈಜನಾತ ತಡಕಲ್‌ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ತಹಶೀಲ್ದಾರ್‌ ಸುರೇಶ ಶರ್ಮಾ, ಕುರಿಕೋಟಾ ಹಾಗೂ ನಾಗೂರು ಗ್ರಾಮದವರೆಗೆ ಹತ್ತರಿಂದ-ಹದಿನೈದು ದಿನಗಳ ಒಳಗೆ ಹಕ್ಕುಪತ್ರ ವಿತರಣೆ ಕೊಡುತ್ತೇವೆಂದು ಭರವಸೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್‌ ಮಾತನಾಡಿ, ಹತ್ತರಿಂದ ಹದಿನೈದು ದಿನಗಳ ಒಳಗೆ ಹಕ್ಕುಪತ್ರ ನೀಡದಿದ್ದರೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಂದು ಎಚ್ಚರಿಸಿದರು.

Advertisement

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ, ಸುಭಾಷ ಗುತ್ತೇದಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾ ನಾಗೂರ ಗುಂಡಪ್ಪ ಶಿರಡೋನ, ಶಿವಾನಂದ ಮಾರ್ಪಳ್ಳಿ, ಪ್ರಕಾಶ ಹಾಗರಗಿ, ಕೇದರಲಿಂಗ, ಸತೀಶ ಸಾಹು, ಮೈಬೂಬ ಶಾ, ನಬಿಸಾಬ್‌ ಸರಡಗಿ ಮುಂತಾದವರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next