Advertisement
ಸರ್ಕಾರವು ನೆರೆ ಹಾವಳಿಗೆ ಒಳಗಾದ ರೈತರಿಗೆ ಬೆಳೆ ಹಾನಿ, ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ಮತ್ತು ಜೀವಹಾನಿ ಆದವರ ಕುಟುಂಬಕ್ಕೆ ಪರಿಹಾರ ಧನ ಘೋಷಣೆ ಮಾಡಿದೆ. ಆದರೆ ನೆರೆ ಹಾವಳಿಯಿಂದ ಹಾನಿಗೊಳಗಾದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಿರಾಶ್ರಿತ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಈಗ ತಾತ್ಕಾಲಿಕವಾಗಿ ಆಶ್ರಯ ಬಡಾವಣೆಯ ಹತ್ತಿರವಿರುವ ಅರಣ್ಯ ಇಲಾಖೆಯ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿ ವಾಸಿಸಲು ಅನುಕೂಲ ಮಾಡಿಕೊಡಲಾಗಿದೆ. ಅರಣ್ಯ ಇಲಾಖೆಯವರು 3 ತಿಂಗಳು ಮಾತ್ರ ಅಲ್ಲಿ ವಾಸಿಸಲು ಅನುಮತಿ ನೀಡಿದ್ದು, ನಂತರ ನಿರಾಶ್ರಿತರು ಎಲ್ಲಿ ವಾಸಿಸಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ. ಆದ್ದರಿಂದ ನಗರಸಭೆಯಿಂದ ನಿವೇಶನ ಮಂಜೂರು ಮಾಡಿ ಸರ್ಕಾರದ ಅನುದಾನದಲ್ಲಿ ನಿವೇಶನ ಕಲ್ಪಿಸಿ ಆ ಕುಟುಂಬಗಳಿಗೆ ಶಾಶ್ವತ ವಸತಿ ಕಲ್ಪಿಸಿ ಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
Advertisement
ಶಾಶ್ವತ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ
12:27 PM Nov 12, 2019 | Suhan S |
Advertisement
Udayavani is now on Telegram. Click here to join our channel and stay updated with the latest news.