ದೇವದುರ್ಗ: ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಭತ್ತದ ಕೊಯ್ಲು ಯಂತ್ರದ ಮೊರೆ ಹೋಗಿದ್ದು, ಭತ್ತ ಕೊಯ್ಯುವ ಯಂತ್ರಗಳಿಗೆ ಭಾರೀ ಬೇಡಿಕೆ ಬಂದಿದೆ.
ಬೇಸಿಗೆ ಬೆಳೆ ನಾಟಿ ಮಾಡಲು ರೈತರು ಕೂಲಿ ಕಾರ್ಮಿಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನೊಂದಡೆ ಕೊಯ್ಲಿಗೆ ಬಂದ ಭತ್ತ ಕಟಾವಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಕೃಷ್ಣಾ ನದಿ ಒಡಲು ಹಾಗೂ ನಾರಾಯಣಪುರ ಬಲದಂಡೆ ನಾಲೆ ಆಶ್ರಯ ದಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ಕೂಲಿಕಾರರ ಬೇಡಿಕೆ ಹಾಗೂ ಭತ್ತ ಕೊಯ್ಯುವ ಯಂತ್ರಗಳ ಬಾಡಿಗೆ ಏರಿಕೆ ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
2ರಿಂದ 3ಸಾವಿರ ಬೇಡಿಕೆ: ಭತ್ತ ಕಟಾವಿಗೆ ಯಂತ್ರದ ಮಾಲೀಕರು ಒಂದು ತಾಸಿಗೆ 2ರಿಂದ 3 ಸಾವಿರ ರೂ.ವರೆಗೆ ಬಾಡಿಗೆ ನಿಗದಿ ಪಡಿಸಿದ್ದಾರೆ. ಹೀಗಾಗಿ ಕೆಲ ರೈತರು ದರ ಕಡಿಮೆ ಮಾಡುವಂತೆ ದುಂಬಾಲು ಬಿದ್ದರೆ, ಇನ್ನೂ ಕೆಲ ರೈತರು ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ.
ಸಾವಿರಾರು ಹೆಕ್ಟೇರ್ ಪ್ರದೇಶ: ತಾಲೂಕಿನಲ್ಲಿ 29.021 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಕೆಲ ಗ್ರಾಮಗಳಲ್ಲಿ ಭತ್ತ ಕಟಾವು ಮಾಡಿದ್ದು, ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇನ್ನೂ ಬಹುತೇಕ ಗ್ರಾಮಗಳಲ್ಲಿ ಕಟಾವು ಮಾಡಬೇಕಿದೆ. ಮಧ್ಯವರ್ತಿಗಳು ಹೊಲಕ್ಕೆ ಬಂದು ಭತ್ತ ಖರೀದಿಸುತ್ತಿದ್ದಾರೆ. ಆದರೆ ಆದರೆ ಕಡಿಮೆ ದರಕ್ಕೆ ಬೇಡಿಕೆ ಇಡುತ್ತಿದ್ದು ರೈತರು ಚಿಂತೆಗೀಡಾಗಿದ್ದಾರೆ.
ಸಭೆ ಕರೆಯಲು ಒತ್ತಾಯ: ಭತ್ತ ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ತಾಲೂಕಾಡಳಿತ ಮತ್ತು ಕೃಷಿ ಅ ಧಿಕಾರಿಗಳು, ಖಾಸಗಿ ಯಂತ್ರಗಳ ಮಾಲೀಕರು ಸಭೆ ಕರೆದು ದರ ನಿಗ ಪಡಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಕೃಷಿ ಇಲಾಖೆಯಿಂದ ಎರಡು ಯಂತ್ರಗಳು ಇದ್ದು, 1800 ರೂ. ದರ ನಿಗದಿ ಮಾಡಲಾಗಿದೆ. ಇದೀಗ ಯಂತ್ರಗಳು ರೈತರಿಗೆ ಅತ್ಯವಶ್ಯವಾಗಿದ್ದು, ತುರ್ತು ಖಾಸಗಿ ಯಂತ್ರಗಳ ಮಾಲೀಕರುಸಭೆ ಕರೆಯಬೇಕು ಎಂದು ರೈತ ಸಂಘಟನೆಮುಖಂಡ ಬೂದೆಯ್ಯ ಸ್ವಾಮಿ ಗಬ್ಬೂರು ಆಗ್ರಹಿಸಿದ್ದಾರೆ.
ಭತ್ತ ಕಟಾವು ಯಂತ್ರಗಳ ಮಾಲೀಕರ ಸಭೆ ಕರೆದು ಬೆಲೆ ನಿಗ ದಿ ಮಾಡುವಂತೆ ರೈತರು ಒತ್ತಾಯಿಸತ್ತಿದ್ದಾರೆ. ಕೃಷಿ ಇಲಾಖೆಯಿಂದ ಎರಡು ಯಂತ್ರಗಳಿದ್ದು, 1800 ರೂ. ಬಾಡಿಕೆಯಿದೆ. ತಹಶೀಲ್ದಾರ್ ನೇತೃತ್ವದಲ್ಲಿ ಮಾಲೀಕರ ಸಭೆ ನಡೆಸಿ ಬೆಲೆ ನಿಗದಿ ಮಾಡಲಾಗುವುದು.
–ಡಾ| ಎಸ್.ಪ್ರಿಯಾಂಕ್, ಸಹಾಯಕ ಕೃಷಿ ನಿರ್ದೇಶಕಿ
ನಾಗರಾಜ ತೇಲ್ಕರ್