Advertisement

ಅಡಿಕೆಗಿದೆ ಬೇಡಿಕೆ; ಆತಂಕ ಬೇಡ: ಎಸ್‌.ಆರ್‌. ಸತೀಶ್ಚಂದ್ರ

08:43 AM Apr 18, 2020 | mahesh |

ಮಂಗಳೂರು: ಅಡಿಕೆಗೆ ಉತ್ತರ ಭಾರತದಲ್ಲಿ ಬೇಡಿಕೆ ಇದ್ದು, ಯಾವುದೇ ಕಾರಣಕ್ಕೂ ಧಾರಣೆ ಕುಸಿಯುವುದಿಲ್ಲ; ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಸಹಜ ಸ್ಥಿತಿಗೆ ಬರಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಅಡಿಕೆ ಹೇಳಿದ್ದಾರೆ.

Advertisement

ಕ್ಯಾಂಪ್ಕೋದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು. ಅಡಿಕೆಗೆ ಬೇಡಿಕೆ ಇದ್ದರೂ ಅದರ ಅನಂತರದ ಸಂಸ್ಕರಣೆ ಈಗ ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದಿಂದ ಸಾಕಷ್ಟು ಬೇಡಿಕೆ ಇದ್ದರೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಧಾರಣೆ ಕುಸಿಯುವುದಿಲ್ಲ. ಈಗಾಗಲೇ ಶೇ. 30ರಷ್ಟು ಕಡಿಮೆ ದಾಸ್ತಾನು ಇದೆ. ಉತ್ತರ ಭಾರತದಲ್ಲೂ ಸಾಕಷ್ಟು ಅಡಿಕೆ ಕೊರತೆ ಇದೆ ಎಂದರು. ಈ ನಡುವೆ ಕ್ಯಾಂಪ್ಕೋದಲ್ಲಿ ಠೇವಣಿ ಇಡಲೂ ಅನೇಕರು ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಗ್ರಾಮೀಣ ಭಾಗಗಳಲ್ಲೂ ಅಡಿಕೆ ಖರೀದಿಸುವಂತೆ ಬೆಳೆಗಾರರು ಬೇಡಿಕೆ ಮುಂದಿಟ್ಟರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಖರೀದಿಸಲಾಗುವುದು. ಕೆಲವು ಸಹಕಾರಿ ಸಂಘಗಳು ಕ್ಯಾಂಪ್ಕೋ ಜತೆ ಕೈಜೋಡಿಸಲು ಮುಂದೆ ಬಂದಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next