Advertisement

21 “ಮಿಗ್‌’ಖರೀದಿಗೆ ಬೇಡಿಕೆ

11:42 PM Apr 04, 2019 | mahesh |

ಹೊಸದಿಲ್ಲಿ: ಸಮರ ವಿಮಾನಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತೀಯ ವಾಯುಪಡೆ (ಐಎಎಫ್), ರಷ್ಯಾ ನಿರ್ಮಿತ 21 ಮಿಗ್‌-29 ವಿಮಾನಗಳನ್ನು ಖರೀದಿಸುವಂತೆ ಕೇಂದ್ರ ಸರಕಾರಕ್ಕೆ ಸದ್ಯದಲ್ಲೇ ಮನವಿ ಮಾಡಲಿದೆ ಎಂದು ಐಎಎಫ್ನ ಹಿರಿಯ ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.

Advertisement

ತಲಾ 16ರಿಂದ 18 ಯುದ್ಧ ವಿಮಾನ ಗಳು ಇರುವ 42 ಯುದ್ಧ ವಿಮಾನಗಳ ತುಕಡಿಗಳು ಐಎಎಫ್ಗೆ ಆವಶ್ಯಕತೆಯಿದೆ.
ಸದ್ಯಕ್ಕೆ ಇಂಥ 30 ತುಕಡಿಗಳು ಮಾತ್ರ ಇದ್ದು, ಇನ್ನೂ, 12 ತುಕಡಿಗಳ ಕೊರತೆಯಿದೆ. ಹಾಗಾಗಿ, ಮಿಗ್‌-29 ಮಾದರಿಯ 21 ವಿಮಾನ ಗಳನ್ನು ಕೊಳ್ಳಬೇಕೆಂದು ಐಎಎಫ್ ಮನವಿ ಮಾಡಲು ತೀರ್ಮಾ ನಿಸಿದೆ ಎಂದು ಅವರು ತಿಳಿಸಿದ್ದಾರೆ.

ಅಂದ ಹಾಗೆ, ಫ್ರಾನ್ಸ್‌ ಮೂಲದ ರಫೇಲ್‌ ಯುದ್ಧ ವಿಮಾನಗಳು ಇದೇ ವರ್ಷ ಸೆಪ್ಟಂಬರ್‌ನಿಂದ ಐಎಎಫ್ಗೆ ಸೇರ್ಪಡೆಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next