Advertisement

ಬನಹಟ್ಟಿಗೆ ಬೇಕಿದೆ ಸುಸಜ್ಜಿತ ಗ್ರಂಥಾಲಯ ! ಇಲ್ಲಿವೆ ಸುಮಾರು 21,000 ಪುಸ್ತಕಗಳು

01:24 PM Oct 05, 2020 | sudhir |

ಬನಹಟ್ಟಿ: ನಗರ ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಸುಸಜ್ಜಿತ ಗ್ರಂಥಾಲಯವಿಲ್ಲ. ಇಲ್ಲಿಯ ಓದುಗರಿಗೆ ಗ್ರಂಥಾಲಯದ ಕೊರತೆ ಇದೆ. ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದ ಮಾರ್ಗದಲ್ಲಿರುವ ನಗರಸಭೆಯ ಮೂರು ವಾಣಿಜ್ಯ ಸಂಕಿರ್ಣಗಳಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯೂ ಕೂಡಾ ಸಾಕಷ್ಟು ಅನಾನುಕೂಲತೆಗಳಿವೆ. ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ಎರಡುವರೆ ದಶಕಗಳಷ್ಟು ಹಳೆಯದಾಗಿದೆ. ಇದರಿಂದಾಗಿ ಗ್ರಂಥಾಲಯದ ಮೂರು ಕೋಣೆಗಳು ಮಳೆ ಬಂದರೆ ಸೋರುತ್ತಿವೆ.

Advertisement

ಇಲ್ಲಿಯ ಕೋಣೆಗಳು ಬಹಳಷ್ಟು ಚಿಕ್ಕದಾಗಿವೆ. ಒಂದನ್ನು ಓದುವ ಕೋಣೆಯನ್ನಾಗಿ ಮಾಡಿಕೊಳ್ಳಲಾಗಿದೆ. ಇಲ್ಲಿ ಏಳೆಂಟು ಜನರಿಗೆ ಮಾತ್ರ ಕುಳಿತುಕೊಂಡು ಓದಲು ಸ್ಥಳಾವಕಾಶವಿದೆ. ಬಹಳಷ್ಟು ಜನರು ಗ್ರಂಥಾಲಯ ಮುಂಭಾಗದ ಕಟ್ಟೆಯ ಮೇಲೆ ಕುಳಿತುಕೊಂಡು ಓದುತ್ತಾರೆ.

ಇದನ್ನೂ ಓದಿ:ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಕರ್ನಾಟಕದಲ್ಲಿ ಇಲ್ಲ ಪಿಂಚಣಿ

ಇನ್ನೂ ಒಂದು ಕೋಣೆಯನ್ನು ಪುಸ್ತಕಗಳನ್ನು ಇಟ್ಟುಕೊಳ್ಳಲು ಮತ್ತು ಕಾರ್ಯಾಲಯಕ್ಕಾಗಿ ಬಳಸಿಕೊಳ್ಳಲಾಗಿದೆ. ಮತ್ತೂಂದರಲ್ಲಿ ಹೊಸ ಗ್ರಂಥಗಳನ್ನು ಇಟ್ಟುಕೊಳ್ಳಲಾಗಿದೆ. ಈಗ ಮೂರು ಕೋಣೆಗಳು ಮಳೆಯಿಂದಾಗಿ ಸೋರುತ್ತಿರುವುದರಿಂದ ಪುಸ್ತಕಗಳು, ದಿನಪತ್ರಿಕೆಗಳಿಗೆ ಹಾನಿಯಾಗಿವೆ.

Advertisement

ಗ್ರಂಥಾಲಯದಲ್ಲಿ ಅಂದಾಜು 21000ಕ್ಕಿಂತ ಹೆಚ್ಚು ಪುಸ್ತಕಗಳಿವೆ. ಸದ್ಯ ಗ್ರಂಥಾಲಯಕ್ಕೆ ಬಂದ ಮತ್ತಷ್ಟು ಹೊಸ ಪುಸ್ತಕಗಳನ್ನು ಇಟ್ಟುಕೊಳ್ಳಲು ಸ್ಥಳ ಇಲ್ಲವಾಗಿದೆ. ಇವೆಲ್ಲವುಗಳನ್ನು ಚೀಲಗಳಲ್ಲಿ ಕಟ್ಟಿಡಲಾಗಿದೆ. ಈಗಾಗಲೇ ಸ್ಥಳೀಯ ಗ್ರಂಥಪಾಲಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಂಥಾಲಯಕ್ಕೆ ನಿವೇಶನಕ್ಕೆ ಆಗ್ರಹಿಸಿ ಹಲವಾರು ಬಾರಿ ಪತ್ರಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:ಹತ್ರಾಸ್ ಭೇಟಿ: ಭೀಮ್ ಆರ್ಮಿಯ ಮುಖ್ಯಸ್ಥ ಸೇರಿದಂತೆ 400ಕ್ಕೂ ಹೆಚ್ಚು ಜನರ ಮೇಲೆ FIR ದಾಖಲು

ಗ್ರಂಥಾಲಯಕ್ಕೆ ನಿವೇಶನ ನೀಡಿದರೆ ಕೇಂದ್ರ ಗ್ರಂಥಾಲಯದವರು ಕಟ್ಟಡಕ್ಕಾಗಿ ಹಣ ನೀಡುತ್ತಾರೆ ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್‌.ರೇಬನಾಳ ಮತ್ತು ಸ್ಥಳೀಯ ಸಹಾಯಕ ಗ್ರಂಥಪಾಲಕ ನಾಡಗೌಡರು ತಿಳಿಸಿದರು.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next