Advertisement

ಮೂಲಸೌಕರ್ಯ ಕಲ್ಪಿಸಲು ಆಗ್ರಹ

09:38 AM Jun 10, 2019 | Team Udayavani |

ಬೈಲಹೊಂಗಲ: ಪಟ್ಟಣದ ಕೆರೆಯ ದಂಡೆಯ ನಿವಾಸಿಗಳು ಮಳೆ ನೀರಿನಿಂದಾಗುವ ಹಾನಿ ತಪ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು. ಶಾಶ್ವತ ನೆಲೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರವಿವಾರ ಪ್ರತಿಭಟನೆ ನಡೆಸಿದರು.

Advertisement

ತಮ್ಮಗಾಗುತ್ತಿರುವ ಅನ್ಯಾಯಕ್ಕೆ ಕೂಡಲೇ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು ಇಲ್ಲದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ, ಕೀಲಿ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ ನಿವಾಸಿಗಳು, ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಪುರಸಭೆ ಸದಸ್ಯರ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಸ್ಥಳದಲ್ಲೆ ಕೆಲಕಾಲ ಮಕ್ಕಳು, ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾ ಬೀದಿ ವ್ಯಾಪಾರಿಗಳ ಅಧ್ಯಕ್ಷ ಸುನೀಲ ಹಲಗಿ ಮಾತನಾಡಿ, ಕೆರೆಯ ದಂಡೆಯ ಮೇಲೆ ಮುಸ್ಲಿಂ ಸಮಾಜದ ಸೈಯ್ಯದ, ಸಿಖ್‌ ಸಮುದಾಯದ ನಿವಾಸಿಗಳು ಯಾವುದೇ ಮೂಲ ಸೌಕರ್ಯಗಳಿಲ್ಲದೇ 40 ವರ್ಷಗಳಿಂದ ವಾಸಿಸುತ್ತಿದ್ದು, ಈ ಸ್ಥಳದ ಮೇಲ್ಭಾಗದಿಂದ ಮಳೆಗಾಲದಲ್ಲಿ ಮಳೆ ನೀರು ಕೆರೆಗೆ ಹರಿದು ಬರುತ್ತದೆ. ಆ ಸಂದರ್ಭದಲ್ಲಿ ಈ ನಿವಾಸಿಗಳ ಮನೆಗೆ ನೀರು ನುಗ್ಗುತ್ತದೆ. ಚಿಕ್ಕಮಕ್ಕಳು ಆಟವಾಡುತ್ತಾ ನೀರಿನಲ್ಲಿ ತೇಲಿ ಹೋದ ಘಟನೆಗಳು ಸಹ ನಡೆದಿವೆ. ಈ ಕುರಿತು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ನೀರು ಹರಿಯಲು ದೊಡ್ಡ ಗಟಾರು ನಿರ್ಮಿಸಬೇಕು ಸ್ಪಂದಿಸದಿದ್ದರೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಖ್‌ ಸಮುದಾಯದ ಅಜಿತಸಿಂಗ್‌ ಮಾತನಾಡಿ, ಕೆರೆ ದಂಡೆಯ ಪುರಸಭೆ ಜಾಗೆಯಲ್ಲಿ ವಾಸಿಸುತ್ತಿರುವ ನಮಗೆ ಅಕ್ರಮ, ಸಕ್ರಮದಲ್ಲಿ ವಿದ್ಯುತ್‌ ಸೌಕರ್ಯ ಪಡೆದಿದ್ದನ್ನು ಬಿಟ್ಟು ಯಾವುದೆ ಸೌಕರ್ಯ ಸಿಕ್ಕಿಲ್ಲ. ಇಲ್ಲಿ ರಸ್ತೆ, ಗಟಾರಿಲ್ಲದೇ ಗಬ್ಬೆದ್ದು ನಾರುತ್ತಿರುವತ್ತಿರುವುದರಿಂದ ಸೊಳ್ಳೆಗಳ ಕಾಟ ಅತಿಯಾಗಿರುವುದರಿಂದ ಚಿಕ್ಕಮಕ್ಕಳು ಹಾಗೂ ವಯೋವೃದ್ದರು ಡೆಂಘೀ, ಮಲೇರಿಯಾದಿಂದ ಬಳಲುತ್ತಿದ್ದಾರೆ. ಕುಡಿಯುವ ನೀರಿನ ಸೌಕರ್ಯವಿಲ್ಲ. 40 ವರ್ಷದಿಂದ ವಾಸಿಸುತ್ತಿದ್ದರೂ ಹಕ್ಕು ಪತ್ರ ನೀಡಿಲ್ಲ ಎಂದು ದೂರಿಸದರು.

ಬಿಬಿಜಾನ ಸೈಯ್ಯದ, ಮಡಿವಾಳಯ್ಯ ಹಿರೇಮಠ ಮಾತನಾಡಿ, ಶ್ರೀಮಂತರಿಗೆ ಹಾಗೂ ಪ್ರಭಾವಿಗಳಿಗೆ ಪುರಸಭೆಯವರು ಮನೆ ಮಂಜೂರು ಮಾಡುತ್ತಾರೆ. ನಮ್ಮಂತಹ ಬಡವರ ಗೋಳನ್ನು ಕೇಳುವರು ಯಾರೂ ಇಲ್ಲ, ಇಲ್ಲಿನ ಕೆಲ ನಿವಾಸಿಗಳು ಖಾಸಗಿ ಜಾಗೆಯಲ್ಲಿ ವಾಸಿಸುತ್ತಿದ್ದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪ್ರತಿಭಟನೆಯಲ್ಲಿ ಮೈನುದ್ದೀನ್‌ ಬೇಪಾರಿ, ಕುತೇಜಾ ಸೈಯ್ಯದ, ಶರೀಫಾ ಸೈಯ್ಯದ, ಹುಸೇನಬಿ ಸೈಯ್ಯದ, ಶೈನಾಜ ಸೈಯ್ಯದ, ಸಲ್ಮಾ ಸೈಯ್ಯದ, ಫಾತೀಮಾ ಸೈಯ್ಯದ, ಮಮತಾಜ ಸೈಯ್ಯದ, ಬಲಬೀರಸಿಂಗ್‌, ಸತನಾಮಸಿಂಗ್‌, ಜಗತ್‌ಸಿಂಗ್‌, ದೀಪಕ ಸಿಂಗ್‌, ಬಿಜಲ ಕೌರ, ಪರಂಗನಾ ಕೌರ, ಸದ್ದಾಮ ಸೈಯ್ಯದ, ಮಹ್ಮದ ಸೈಯ್ಯದ್‌, ಹುಸೇನ ಸೈಯ್ಯದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next