Advertisement
ಕೊರೊನಾ ವೈರಸ್ ಭೀತಿಗೆ ಮಾಂಸಪ್ರಿಯರು ಮಾಂಸ ಸೇವನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ತರಕಾರಿಗೆ ಬೇಡಿಕೆಯಿದ್ದರೂ ಜನ ನಗರಗಳತ್ತ ಬಾರದೆ ಇರುವುದರಿಂದ ವ್ಯಾಪಾರ ವಹಿವಾಟು ಕಡಿಮೆಯಾಗಿದೆ ಅನ್ನುವ ಆತಂಕವನ್ನು ನಗರದ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಿಗಳು ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆಗೆ ತರಕಾರಿ ಖರೀದಿಗೆಂದು ಬರುವ ಗ್ರಾಹಕರು ಖರೀದಿ ವೇಳೆಯೂ ಸಾಕಷ್ಟು ಸಂದೇಹ ಗಳನ್ನು ವ್ಯಕ್ತಪಡಿಸುತ್ತಾರೆ. ಹಣ್ಣು ಹಂಪಲು ಮುಟ್ಟುವುದಕ್ಕೂ ಭಯ ಪಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಜನ ಕೊರೊನಾ ಸೋಂಕಿಗೆ ಹೆದರಿದ್ದಾರೆ. ತರಕಾರಿ ಜತೆ ಹಣ್ಣು ಹಂಪಲು ಪಡೆದು ತೆರಳುತ್ತಿದ್ದವರೂ ಈಗ ತರಕಾರಿ ಮಾತ್ರ ಪಡೆದು ಹಣ್ಣ್ಣುಹಂಪಲು ಸ್ವಲ್ಪ ಮಾತ್ರ ಪಡೆದು ಹೋಗುತ್ತಿದ್ದಾರೆ. ಹಣ್ಣು ಹಂಪಲು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಾಪಾರಿಗಳು ವ್ಯಾಪಾರ ಕಡಿಮೆಯಾಗುವುದಕ್ಕೆ ಕಾರಣ ನೀಡುತ್ತಿದ್ದಾರೆ.
Related Articles
Advertisement
ಸೋಮವಾರ ಬೆಳಗ್ಗೆಯಿಂದಲೆ ಮಾರುಕಟ್ಟೆಗೆ ಖರೀದಿಗೆ ಅತಿ ವಿರಳ ಮಂದಿ ಬಂದಿದ್ದು ವ್ಯಾಪಾರವೇ ಆಗಿಲ್ಲ. ನಾವು ನಷ್ಟಕ್ಕೆ ಒಳಗಾಗಿದ್ದೇವೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿದರು.
ನಗರಕ್ಕೆ ಸ್ಥಳಿಯವಾಗಿ ತರಕಾರಿ, ಹಣ್ಣು ಹಂಪಲು ಪೂರೈಕೆಯಾಗುವುದು ಕಡಿಮೆ. ಬಯಲು ಸೀಮೆ ಪ್ರದೇಶಗಳಿಂದ ಸರಬರಾಜು ಆಗುತ್ತಿದೆ. ತರಕಾರಿ ಪೂರೈಕೆಯಲ್ಲಿ ಅಥವಾ ದರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಸರಕಾರಿ ರಜೆ ಹಾಗೂ ನಗರದ ಪ್ರಮುಖ ಸಂಸ್ಥೆಗಳಿಗೆ ರಜೆ ಇರುವ ಕಾರಣ ಮಕ್ಕಳು, ಕೂಲಿ ಕಾರ್ಮಿಕರು ಮನೆಯಲ್ಲೆ ಉಳಿದುಕೊಂಡಿದ್ದಾರೆ. ಪರವೂರಿನ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ಊರುಗಳಿಗೆ ಮರಳಿದ್ದಾರೆ. ಈ ಎಲ್ಲ ಕಾರಣಗಳಿಂಗ ಪೇಟೆಗಳಲ್ಲಿ ಜನಸಂಚಾರವಿಲ್ಲ. ಇದೆಲ್ಲ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಅನ್ನುವ ಅಭಿಪ್ರಾಯವನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ.
ವ್ಯಾಪಾರದ ಮೇಲೆ ಪರಿಣಾಮಕೊರೊನಾ ವೈರಸ್ ಹರಡುವ ಭೀತಿ ತರಕಾರಿ, ಹಣ್ಣು ಹಂಪಲು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ತರಕಾರಿಗೆ ಬೇಡಿಕೆಯಿದೆ. ಆದರೆ ಹಣ್ಣು ಹಂಪಲುಗಳಿಗೆ ಬೇಡಿಕೆ ಕಮ್ಮಿಯಾಗಿದೆ. ದರದಲ್ಲಿ ವ್ಯತ್ಯಾಸವಿಲ್ಲದೆ ಇದ್ದರೂ ಜನರು ನಗರದ ಕಡೆ ಮುಖ ಮಾಡದೆ ಇರುವುದರಿಂದ ಗ್ರಾಹಕರ ಕೊರತೆ ಉಂಟಾಗಿದೆ.
-ಸಿದ್ಧಿಕ್, ವ್ಯಾಪಾರಿ.ತರಕಾರಿ ಮಾರುಕಟ್ಟೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ವಾರದೊಳಗೆ ಮಾರುಕಟ್ಟೆ ಸುಧಾರಿಸುವ ನಿರೀಕ್ಷೆ
ವ್ಯಾಪಾರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದೆನಿಸುವುದಿಲ್ಲ. ಎಂದಿನ ದಿನಗಳಿಗಿಂತ ಸ್ವಲ್ಪ ಕಡಿಮೆ ಆಗಿದೆ. ಬೆಲೆ ಯಥಾಸ್ಥಿತಿಯಲ್ಲಿದೆ. ವಾರದೊಳಗೆ ಮಾರುಕಟ್ಟೆ ಸುಧಾರಿಸಿಕೊಳ್ಳುವ ನಿರೀಕ್ಷೆ ಇರಿಸಿಕೊಂಡಿದ್ದೇವೆ.
-ಶೇಖರ, ಬೀದಿಬದಿ ವ್ಯಾಪಾರಿ ಉಡುಪಿ