Advertisement
ವಿಸ್ತಾರದ ಬೀಚ್‌ಗೆ ಹೆಚ್ಚಿದ ಜನಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದ್ದೇ ಆದಲ್ಲಿ ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್ ಪಾತ್ರವಾಗಲಿದೆ. ಏಕೆಂದರೆ ಸರಿಸುಮಾರು 3.5 ಕಿಮೀ. ದೂರದಲ್ಲಿ ಬೀಚ್ ವ್ಯಾಪಿಸಿಕೊಂಡಿದೆ. ಆದ್ದರಿಂದ ಯಾವುದೇ ಪ್ರದೇಶದಲ್ಲೂ ಸಮುದ್ರವಿಹಾರ ನಡೆಸಬಹುದಾಗಿದೆ. ಇದರೊಂದಿಗೆ ಇಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆದಂತೆಯೇ ಇಲ್ಲಿಗೆ ಸಂಜೆ ವೇಳೆಗೆ ಸೂರ್ಯಾಸ್ತ ವೀಕ್ಷಣೆಗೆ ಜನ ಬರಲಾರಂಭಿಸಿದ್ದಾರೆ. ವಾರಾಂತ್ಯವೂ ಇಲ್ಲಿ ಜನಸಂದಣಿ ಹೆಚ್ಚಿದೆ. ಸಂಸಾರ ಸಹಿತರಾಗಿ, ಮಕ್ಕಳು ಸ್ನೇಹಿತರ ಜತೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಏರುತ್ತಿರುವಂತೆಯೇ ಹೋಟೆಲ್, ಅಂಗಡಿ, ಮಳಿಗೆ ಮೊದಲಾದವುಗಳು ಸ್ಥಾಪನೆಯಗಾಲು ಅವಕಾಶ ಇದೆ. ಜತೆಗೆ ರಿಕ್ಷಾ ಹಾಗೂ ಇತರ ಪ್ರವಾಸಿ ವಾಹನಗಳಿಗೂ ಬಾಡಿಗೆ ದೊರೆಯಲಿದೆ. ಪುರಸಭೆಯಿಂದ ಕ್ರಮ
ಪ್ರವಾಸೋದ್ಯಮ ಇಲಾಖೆ ಜತೆಗೆ ಪುರಸಭೆ ಮುತುವರ್ಜಿ ವಹಿಸಿದ್ದು ಇಲ್ಲೊಂದು ಪ್ರವಾಸೋದ್ಯಮ ತಾಣದ ಸೃಷ್ಟಿಗೆ ಪ್ರಯತ್ನಿಸುತ್ತಿದೆ. ಬ್ರೇಕ್‌ವಾಟರ್ ಕಾಮಗಾರಿಯನ್ನೇ ಸೀವಾಕ್ ಮಾದರಿಯಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದರೆ ಇಲಾಖೆಯಿಂದ ಇನ್ನಷ್ಟು ಸೌಕರ್ಯ, ಅನುದಾನ ಇಲ್ಲಿಗೆ ತಂದರೆ ಪುರಸಭೆ ವ್ಯಾಪ್ತಿಯ ಆದಾಯ ವೃದ್ಧಿ ಮಾಡಿಕೊಳ್ಳಲು ನೆರವಾಗಲಿದೆ ಎಂದು ಪುರಸಭೆ ಚಿಂತನೆ ನಡೆಸಿದೆ.
Related Articles
ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕಾದ ಅಗತ್ಯವಿದೆ. ವಿಶ್ರಾಂತಿಗೆ ಕುಳಿತುಕೊಳ್ಳುವ ಬೆಂಚ್‌ಗಳ ವ್ಯವಸ್ಥೆ, ಬಟ್ಟೆ ಬದಲಾಯಿಸಲು, ಸಮುದ್ರ ಸ್ನಾನದ ಬಳಿಕ ಸ್ನಾನದ ವ್ಯವಸ್ಥೆ ಮಾಡಲು, ವಾಹನ ನಿಲುಗಡೆಗೆ, ಬೆಳಕಿಗೆ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.
Advertisement
ಕಸದ ರಾಶಿಮಳೆಗಾಲದಲ್ಲಿ ಸಮುದ್ರದ ಮೂಲಕ ಬಂದ ಕಸದ ರಾಶಿ ಕಡಲತಡಿಯಲ್ಲಿ ರಾಶಿ ರಾಶಿ ಸಂಗ್ರಹವಾಗಿದೆ. ಇದನ್ನು ತೆಗೆಸಿದರೆ ಅತ್ಯಂತ ಸುಂದರ ಬೀಚ್ ಆಗಿ ಇದು ಪರಿವರ್ತನೆಯಾಗಲಿದೆ. ಇಲ್ಲಿ ರಾಶಿ ಹಾಕಿರುವ ಲೋಡುಗಟ್ಟಲೆ ಮರಳನ್ನು ಖಾಲಿ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಅದು ತ್ವರಿತವಾಗಿ ಆಗಬೇಕಿದೆ. ಮಾತುಕತೆ ನಡೆದಿದೆ
ಬೀಚ್ ಸ್ವತ್ಛಗೊಳಿಸಲು ಮಲ್ಪೆಯಿಂದ ಯಂತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ. ಬ್ರೇಕ್ ವಾಟರ್ ಕಾಮಗಾರಿಗೆ ಅಲ್ಲಲ್ಲಿ ಪ್ರವೇಶಾವಕಾಶ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಪ್ರವಾಸಿಗರ ಆಕರ್ಷಣೆಗೆ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಇರಾದೆ ಇದೆ.
– ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ ಲಕ್ಷ್ಮೀ ಮಚ್ಚಿನ