Advertisement

ಬೈಪಾಸ್‌ ಹೆದ್ದಾರಿ ಕಾಮಗಾರಿ ರದ್ದತಿಗೆ ಒತ್ತಾಯ

02:08 PM Nov 01, 2019 | Suhan S |

ಬೆಳಗಾವಿ: ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ(ಆರ್‌ ಸಿಇಪಿ) ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದು ಖಂಡನೀಯ. ಒಪ್ಪಂದಕ್ಕೂ ಮೊದಲು ದೇಶದ ಜನರೊಂದಿಗೆ ಚರ್ಚಿಸಿ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಲಗಾ-ಮಚ್ಛೆ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿಗೆ ಫಲವತ್ತಾದ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದರಿಂದ ರೈತರುನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಈ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿ ರದ್ದು ಪಡಿಸಿ ರೈತರಿಗೆ ಅವರ ಜಮೀನು ವಾಪಸು ಮಾಡಬೇಕು. ರೈತರ ಹಿತ ಕಾಯುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಹೆದ್ದಾರಿಗೆ ಈ ಭಾಗದ ಹಲಗಾ, ಹಳೆ ಬೆಳಗಾವಿ, ಶಹಾಪುರ, ವಡಗಾಂವಿ, ಮಜಗಾಂವಿ, ಮಚ್ಛೆ ಗ್ರಾಮದ ಸಣ್ಣ ರೈತರು ಜಮೀನು ಕಳೆದುಕೊಳ್ಳುತ್ತಿದ್ದಾರೆ. ಫಲವತ್ತಾದ ಭೂಮಿ ಕಸಿದುಕೊಂಡರೆ ರೈತರು ಬದುಕುವುದಾದರೂ ಹೇಗೆ.ಇದರಿಂದ ಬಡ ರೈತರಿಗೆ ತುಂಬಲಾರದ ನಷ್ಟವಾಗಿದೆ. ಕೃಷಿಯನೇ° ನಂಬಿ ಬದುಕುವ ಕುಟುಂಬಗಳು ಬೀದಿ ಪಾಲಾಗುತ್ತವೆ. ಹೀಗಾಗಿ ಸರ್ಕಾರ ಪರ್ಯಾಯ ಜಾಗ ಹುಡುಕಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಮೊನಪ್ಪಾ ಬಾಳೆಕುಂದ್ರಿ, ರಾಜು ಮರವೆ, ಯಲ್ಲಪ್ಪ ಬದ್ರುಕ, ಸುಭಾಷ ಚೌಗಲೆ, ಭರತ ಬಾಳೇಕುಂದ್ರಿ, ಮನೋಹರ ಕಂಗ್ರಾಳಕರ, ವಿಠಲ ಬಾಳೇಕುಂದ್ರಿ, ಮಹಾದೇವ ಪೂಜಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next