ಹಬ್ಬದಲ್ಲಿ ಬಲಿ ಕೊಡಲು ಕುರಿ-ಮೇಕೆಗಳನ್ನು ಕೊಂಡು ಸಾಕುತ್ತಿದ್ದಾರೆ. ಹಬ್ಬದ ಹಿನ್ನೆಲೆ ಆರೇಳು ಸಾವಿರ ರೂ.
ಗೆ ಮಾರಾಟವಾಗುವ ಕುರಿ-ಮೇಕೆಗಳು 50 ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ. ಹಣೆ ಮೇಲೆ ಬಿಳಿ
ಕೂದಲಿರುವ ಕರಿ ಮೇಕೆಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ.
Advertisement
ದೈಹಿಕವಾಗಿ ಎತ್ತರ, ಉದ್ದನೆಯ ದೇಹ ರಚನೆ, ಅಧಿಕ ಕೊಬ್ಬಿದ ಮೈಮಾಟ ಹೊಂದಿರುವ ಮೇಕೆ, ಹೋತು, ಟಗರು, ಕುರಿಗಳಿಗೆ ಅಧಿಕ ಬೇಡಿಕೆ ಇದೆ. ಇಂತ ಮೇಕೆ-ಕುರಿಗಳು 50 ಸಾವಿರ ರೂ. ವರೆಗೆ ಮಾರಾಟವಾಗಿವೆ. ಇಸ್ಲಾಂ ಧರ್ಮ ಬಕ್ರೀದ್ ಹಬ್ಬದಲ್ಲಿ ಅತ್ಯಗತ್ಯ. ಹೀಗಾಗಿ ಹಲವು ರೈತರು ಈ ಹಬ್ಬಕ್ಕೆಂದೇ ಹಬ್ಬೆ ಕೆಲವು ತಿಂಗಳ ಮೊದಲೇ ಮರಿಗಳನ್ನು ಕೊಂಡು, ಅವುಗಳಿಗೆ ಪೌಷ್ಟಿಕ ಆಹಾರ ನೀಡಿ ಟಗರು-ಹೋತುಗಳನ್ನು ಆರೈಕೆ ಮಾಡಿ ಸಾಕಿ, ಮಾರಾಟ ಮಾಡಿದ್ದಾರೆ.
Related Articles
Advertisement
ಎತ್ತರ ದೇಹ, ಕೊಬ್ಬಿದ ದೈಹಿಕ ಸ್ಥಿತಿ ಇರುವ ಮೇಕೆಗಳನ್ನು ಕೊಳ್ಳುತ್ತೇವೆ. ಆರೋಗ್ಯವಂತ ಮೇಕೆಗಳ ಮಾಂಸ ಸೇವನೆಯಿಂದ ಮನುಷ್ಯರಿಗೂ ಯಾವುದೇ ಬಾಧೆ ಇರುವುದಿಲ್ಲ ಎಂಬ ಸದಾಶಯವೂ ಇದರ ಹಿಂದೆ. ಹೀಗಾಗಿ ಅಧಿಕ ಕೊಬ್ಬಿದ ಆರೋಗ್ಯವಂತ ಮೇಕೆ-ಕುರಿಗೆ ಸಾಮಾನ್ಯವಾಗಿ ಅಧಿಕ ಬೆಲೆ ಇರುತ್ತದೆ. ಸಾಮಾನ್ಯ ದಿನಗಳಿಗಿಂತ ಹಬ್ಬದ ಸಂದರ್ಭದಲ್ಲಿ ಇಂತ ಕುರಿ-ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ, ಬೆಲೆಯೂ ಸಾಮಾನ್ಯವಾಗಿ ದ್ವಿಗುಣ ಇರುತ್ತದೆ ಎನ್ನುತ್ತಾರೆ ಸ್ಥಳೀಯರು.
ಜಿ.ಎಸ್. ಕಮತರ