ವಿಜಯಪುರ: ಕರ್ನಾಟಕದಲ್ಲಿ ಭಾಷೆಯ ಹಸರಿನದಲ್ಲಿ ಸಾಮರಸ್ಯ ಹಾಳು ಮಾಡುತ್ತಿರುವ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಮುನ್ನೆಚ್ಚಿಕೆ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ಎಂಇಎಸ್ ಪುಂಡಾಟಿಕೆ ಹದ್ದು ಮೀರಿದೆ. ಸಹನಾಮೂರ್ತಿಗಳಾದ ಕನ್ನಡಿಗರನ್ನು ವಿನಾಕಾರಣ ಕೆಣಕುತ್ತಿದೆ. ಭಾಷೆಯ ಹೆಸರಿನಲ್ಲಿ ಕರ್ನಾಟಕದಲ್ಲಿ ಸಾಮಾಜಿಕ ಸ್ವಾಸ್ಥ Â ಹಾಳು ಮಾಡುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಭಾಷೆ, ನಾಡು-ನುಡಿಗೆ ಅಪಮಾನ ಮಾಡುತ್ತಿದೆ, ಇದು ಅಕ್ಷಮ್ಯ ಅಪರಾಧ, ಆದರೆ ಸರ್ಕಾರ ಮಾತ್ರ ಎಂಇಎಸ್ ಮೇಲೆ ಕ್ರಮ ಕೈಗೊಳ Ûಲದೇ ಮೌನವಾಗಿರುವುದು ರಣಹೇಡಿತನಕ್ಕೆ ಸಾಕ್ಷಿಯಾಗಿದೆ. ಒಂದು ರೀತಿ ಈ ವಿಷಯದಲ್ಲಿ ಸರ್ಕಾರ ಕಿವಿ ಇಲ್ಲದಂತೆ ವರ್ತನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಕಾಶ ಕುಂಬಾರ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಭಾವೈಕ್ಯತೆ, ಭಾಷಾ ಸಾಮರಸ್ಯಕ್ಕೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ.
ಈ ಏಕೀಕರಣ ಸಮಿತಿ ರಾಜ್ಯಕ್ಕೆ ಏಕೆ ಬೇಕು? ಕೂಡಲೇ ಈ ಸಂಘಟನೆಯನ್ನು ಮಟ್ಟ ಹಾಕಿ ಎಂದು ಒತ್ತಾಯಿಸಿದರು. ಪವಿತ್ರ ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ, ಕನ್ನಡವೇ ಇಲ್ಲಿ ಸಾರ್ವಭೌಮ ಭಾಷೆ, ಜೀವದ ಭಾಷೆ ಎಂದರು. ಸಂಘಟನೆಯ ಪ್ರಮುಖರಾದ ಮಹಾದೇವ್ ರಾವಜಿ, ಫಯಾಜ್ ಕಲಾದಗಿ, ದಸಗೀÃ ¤ ಸಾಲೋಟಗಿ, ವಿನೋದ ದಳವಾಯಿ, ಬಸವರಾಜ ಕಾತ್ರಾ ಮಡಿವಾಳರ, ಮುತ್ತಗಿ, ಮನೋಹರ, ಆಸೀಪ್ ಪೀರಜಾದೆ, ರವಿ ಬಗಲಿ ಪಾಲ್ಗೊಂಡಿದ್ದರು.