Advertisement

ಗಣಿತ ಶಿಕ್ಷಕರ ನೇಮಕಕ್ಕೆ ಆಗ್ರಹ

09:42 AM Jan 09, 2019 | Team Udayavani |

ಅಫಜಲಪುರ: ಶಾಲೆಯಲ್ಲಿ ಮೂರು ತಿಂಗಳಿಂದ ಗಣಿತ ಶಿಕ್ಷಕರಿಲ್ಲ, ಬಿಸಿಯೂಟ ಸರಿಯಾಗಿ ನೀಡುತ್ತಿಲ್ಲ, ಶಾಲೆಯಲ್ಲಿ ಕುಡಿಯುವ ನೀರಿಲ್ಲ ಎಂದು ಚಿಂಚೋಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ವಿದ್ಯಾರ್ಥಿಗಳು ಪತ್ರಕರ್ತರೊಂದಿಗೆ ಮಾತನಾಡಿ, ಶಾಲೆಯಲ್ಲಿ ಮೂರು ತಿಂಗಳಿಂದ ಗಣಿತ ಶಿಕ್ಷಕರಿಲ್ಲ. ಬಿಸಿಯೂಟ ಸರಿಯಾಗಿ ನೀಡುತ್ತಿಲ್ಲ, ಊಟದಲ್ಲಿ ಕಲ್ಲು, ಕಸ ಬರುತ್ತಿವೆ, ಶಾಲೆಯಲ್ಲಿ ಪಾಠವು ಸರಿಯಾಗಿ ನಡೆಯುತ್ತಿಲ್ಲ, ಊಟವು ಸರಿಯಾಗಿ ಸಿಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಯಾರೂ ಕ್ರಮ ಕೈಗೊಂಡಿಲ್ಲ. ಈ ಕುರಿತು ಹಲವಾರು ಬಾರಿ ಎಸ್‌ಡಿಎಂಸಿ ಹಾಗೂ ಮುಖ್ಯಶಿಕ್ಷಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಮುಖ್ಯಶಿಕ್ಷಕರನ್ನು ಬದಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next