ಕಮಲನಗರ: ನೂತನ ಕಮಲನಗರ ತಾಲೂಕು ಕೇಂದ್ರಲ್ಲಿ ಎಲ್ಲ ತಡೆರಹಿತ ರೈಲು ನಿಲುಗಡೆ ಮಾಡುವಂತೆ ಆಗ್ರಹಿಸಿ
ಸಿಕಂದ್ರಾಬಾದ ಎಡಿಆರ್‌ಎಂಗೆ ಘೋಷಿತ 43 ಹೊಸ ತಾಲೂಕುಗಳ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಉದಗೀರ ಪಟ್ಟಣದ ರೈಲು ನಿಲ್ದಾಣದಲ್ಲಿ ಶುಕ್ರವಾರ ಮನವಿ ಸಲ್ಲಿಸಿದ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ
ಹಾಗೂ ನಾಗರಿಕರು, ಕಮಲನಗರ ರೈಲು ನಿಲ್ದಾಣದಲ್ಲಿ ಎಲ್ಲ ತಡೆರಹಿತ ರೈಲು ನಿಲ್ಲಿಸಿದರೆ ಔರಾದ, ಲಖನಗಾಂವ
ಹಾಗೂ ಮಹಾರಾಷ್ಟ್ರದ ದೇವಣಿ ಗ್ರಾಮದ ವ್ಯಾಪಾರಿಗಳಿಗೆ, ನಾಗರಿಕರಿಗೆ ತುಂಬಾ ಅನುಕೂಲವಾಗುತ್ತದೆ.
ಕಮಲನಗರ ರೈಲು ನಿಲ್ದಾಣದಲ್ಲಿ ಎಲ್ಲ ತಡೆರಹಿತ ರೈಲುಗಳು ನಿಲ್ಲದ ಕಾರಣ ಪ್ರಯಾಣಿಕರು ಮಹಾರಾಷ್ಟ್ರದ ಉದಗೀರ, ಭಾಲ್ಕಿ ಪಟ್ಟಣಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೈದ್ರಾಬಾದನಿಂದ ಬೀದರವರೆಗೆ ಬರುವ ಇಂಟರ್‌ಸಿಟಿ ರೈಲನ್ನು ಲಾತೂರವರೆಗೆ ವಿಸ್ತರಿಸಿದರೆ ಈ ಭಾಗದ ಜನರಿಗೆ ಬೀದರ ಹಾಗೂ ಲಾತೂರ ಪಟ್ಟಣಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಎಡಿಆರ್ ಎಂ ಮಾತನಾಡಿ, ಶೀಘ್ರದಲ್ಲಿ ಯಶವಂತಪುರ-ಲಾತೂರ, ಶಿರಡಿ ಎಕ್ಸಪ್ರೇಸ್ ರೈಲುಗಳ ನಿಲುಗಡೆ ಮಾಡುವುದಾಗಿ ಭರವಸೆ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಶರಣು ಕುಶನೂರೆ, ಬಾಲಾಜಿ ತೇಲಂಗೆ, ಸಂತೋಷ ಸೋಲ್ಲಾಪುರೆ ಹಾಗೂ ಅನೇಕ ನಾಗರಿಕರು ಪಾಲ್ಗೊಂಡಿದ್ದರು.