Advertisement

ಬೇಡಿಕೆ ಕುಸಿತ: ಎಂಆರ್‌ಪಿಎಲ್‌ನ 2ನೇ ಘಟಕ ತಾತ್ಕಾಲಿಕ ಸ್ಥಗಿತ!

02:06 AM May 15, 2020 | Sriram |

ಮಂಗಳೂರು: ವಾರ್ಷಿಕ ನಿರ್ವಹಣೆ ಹಾಗೂ ನೀರಿನ ಕೊರತೆ ಎದುರಾಗುವ ಕಾರಣದಿಂದ ಎಂಆರ್‌ಪಿಎಲ್‌ನ ಪೆಟ್ರೋಲ್‌, ಡೀಸೆಲ್‌ ಉತ್ಪಾದನೆಯ ಮೂರು ಘಟಕಗಳ ಪೈಕಿ ಒಂದೆರಡನ್ನು ಬಂದ್‌ ಮಾಡುವುದು ಪ್ರತಿ ವರ್ಷದ ಸಾಮಾನ್ಯ ಸಂಗತಿ. ಆದರೆ ಇದೇ ಮೊದಲ ಬಾರಿಗೆ ಲಾಕ್‌ಡೌನ್‌ನಿಂದಾಗಿ ವಾಹನ ಓಡಾಟ ಕಡಿಮೆಯಾಗಿ ಪೆಟ್ರೋಲ್‌, ಡೀಸೆಲ್‌ಗೆ ಬೇಡಿಕೆ ಕಡಿಮೆಯಾದ ಕಾರಣಕ್ಕಾಗಿ ಇದೀಗ ಮೂರು ಘಟಕಗಳ ಪೈಕಿ ಎರಡನೇ ಘಟಕದ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ!

Advertisement

ಲಾಕ್‌ಡೌನ್‌ ಪರಿಣಾಮ ಶೇ. 60ರಷ್ಟು ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಕಡಿಮೆಯಾಗಿದೆ. ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಶೇ. 100ರಷ್ಟು ಕಾರ್ಯಾಚರಿ ಸಿದ ಘಟಕ ಬಳಿಕ ಶೇ.75ರಷ್ಟು ಮಾತ್ರ ಉತ್ಪಾದನೆ ಮಾಡಿತು. ಇದೀಗ ಶೇ. 40ರಷ್ಟು ಮಾತ್ರ ಉತ್ಪಾದಿಸುತ್ತಿದೆ. ಕೆಲವು ದಿನಗಳಲ್ಲಿ ವಾರ್ಷಿಕ ನಿರ್ವಹಣೆಗಾಗಿ ಮತ್ತೂಂದು ಘಟಕ ಶಟ್‌ಡೌನ್‌ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಚ್ಚಾತೈಲ ನಿರಾತಂಕ ವಿದೇಶದಲ್ಲಿ ಕೋವಿಡ್ 19 ಆತಂಕದ ಮಧ್ಯೆಯೂ ಇರಾಕ್‌, ಕುವೈಟ್‌, ಸೌದಿಯಿಂದ ಎಂಆರ್‌ಪಿಎಲ್‌ಗೆ ಕಚ್ಚಾತೈಲ ನಿರಂತರವಾಗಿ ಸರಬರಾಜಾಗುತ್ತಿದೆ. ಹೆಚ್ಚುವರಿ ಕಚ್ಚಾತೈಲವನ್ನು ಪೆರ್ಮುದೆಯ ಐಎಸ್‌ಪಿಆರ್‌ಎಲ್‌ನಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಬೇಡಿಕೆ ಕೊರತೆ ಹಿನ್ನೆಲೆಯಲ್ಲಿ ಹಾಸನಕ್ಕೆ ಪೈಪ್‌ಲೈನ್‌ ಮೂಲಕ ಡೀಸೆಲ್‌ ಸರಬರಾಜು ಸ್ಥಗಿತಗೊಂಡಿತ್ತು; ಬುಧವಾರದಿಂದ ಮತ್ತೆ ಆರಂಭಿಸಲಾಗು ತ್ತಿದೆ. ದೇಶೀಯ ಬೇಡಿಕೆ ಇಲ್ಲದ ಕಾರಣ ಡೀಸೆಲ್‌ ಈಗಲೂ ವಿದೇಶಕ್ಕೆ ರಫ್ತಾಗುತ್ತಿದೆ ಎಂದು ಎಂಆರ್‌ಪಿಎಲ್‌ನ ಕಾರ್ಪೊರೇಟ್‌ ಕಮ್ಯುನಿಕೇಶನ್‌ನ ಜನರಲ್‌ ಮ್ಯಾನೇಜರ್‌ ರುಡೋಲ್ಫ್ ನೊರೋನ್ಹಾ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next