Advertisement
ಈ ವೇಳೆ ಮಾತನಾಡಿದ ಸಂಘಟನೆ ಅಧ್ಯಕ್ಷ ರಾಜು ಪವಾರ, ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ಭಾಗ-2 ತಾಂಡಾದಲ್ಲಿ ಬುದ್ಧಿಮಾಂದ್ಯ ವಿಕಲಚೇತನ ಅಪ್ರಾಪೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿಲಾಗಿದೆ. ಅನಾಮಧೇಯವಾಗಿ ತೊಗರಿ ಜಮೀನಿನಲ್ಲಿ ಸಿಕ್ಕ ಶವವನ್ನು ಪತ್ತೆ ಹಚ್ಚಲಾಗಿದೆ.
Related Articles
Advertisement
ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಮರುದಿನ ಸಂಜೆ ಹೊಲವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗ್ರಾಮಸ್ಥರು ಬಾಲಕಿ ಶವ ಮುಂದಿಟ್ಟುಕೊಂಡು ಅಹೋರಾತ್ರಿ ಹೋರಾಟ ನಡೆಸಿದ್ದರು. ಆರೋಪಿಗಳ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಭರವಸೆಯನ್ನು ಪೊಲೀಸರು, ಸರ್ಕಾರಿ ಅಧಿಕಾರಿಗಳು ನೀಡಿದ್ದರಿಂದ ಶವದ ಮರಣೋತ್ತರ ಪರೀಕ್ಷೆಗೆ ಅವಕಾಶ ಒದಗಿಸಿಕೊಡಲಾಗಿತ್ತು. ಘಟನೆ ನಡೆದು 3 ದಿನಗಳಾದರೂ ಇದುವರೆಗೂ ಆರೋಪಿಗಳ ಬಂಧನ ಆಗದಿರುವುದು ಅನುಮಾನ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪೊಲಿಸ್ ಇಲಾಖೆ ಕೂಡಲೇ ಹೆಚ್ಚು ಸಕ್ರಿಯವಾಗಿ ತನಿಖೆ ನಡೆಸುವ ಮೂಲಕ ಆರೋಪಿಗಳು ಯಾರೇ ಆಗಿರಲಿ, ಎಷ್ಟೇ ಪ್ರಭಾವಶಾಲಿಯಾಗಿರಲಿ ಅವರೆಲ್ಲರನ್ನೂ ಬಂಧಿಸಿ ಗಲ್ಲು ಶಿಕ್ಷೆ ದೊರಕುವಂತೆ ನೋಡಿಕೊಂಡು ಹತ್ಯಾಚಾರಿಗಳಿಗೆ ಪಾಠಕಲಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿಅಂಗವಿಕಲರು ಒಂದಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮುದ್ದೇಬಿಹಾಳ ತಾಲೂಕು ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂಗಳ ಒಕ್ಕೂಟ, ಅಂಗವಿಕಲರ ಪಾಲಕರ ಒಕ್ಕೂಟ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಕೆ. ಘಾಟಿ, ಪಿ.ಪಿ. ಚಲವಾದಿ, ಈರಯ್ಯ ಹಿರೇಮಠ ಹಿರೇಮುರಾಳ, ಸಂಗಣ್ಣ ಹುಣಶ್ಯಾಳ, ಪ್ರಭುಗೌಡ ಚಿಂಚೋಳಿ, ರುದ್ರಗೌಡ ಗೌಡರ, ಶಶಿಕಾಂತ ಯಾಳಗಿ, ರಾಜು ರಾಠೊಡ, ಎಸ್.ಸಿ. ಮೇಟಿ, ಯಲ್ಲಪ್ಪ ಮಾದರ, ರೇಣುಕಾ ಕೋಳೂರ, ಸಂಗಮ್ಮ ಜಂಬಗಿ, ಸಂಗಣ್ಣ ಮದರಿ, ನಿಂಗಪ್ಪ ಹೊಕ್ರಾಣಿ, ಅಲ್ತಾಫ್ ಮೂಲಿಮನಿ, ಅಡಿವೆಪ್ಪ ಕೊಡಗಾನೂರ, ಈರಮ್ಮ ಮಡಿವಾಳರ, ಸಂಗಮ್ಮ ಕಂಚಲಕಾಯಿ, ಚನ್ನವೀರ ಮಮ್ಮದಕೋಟಿ, ಬಾಲಪ್ಪ ಬಿಸಲದಿನ್ನಿ ಇದ್ದರು. ಇಂಡಿ: ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ಎಲ್‌ಟಿ ಗ್ರಾಮದಲ್ಲಿ ಬುದ್ಧಿಮಾಂಧ್ಯಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿ ಧಿಸಲು ಆಗ್ರಹಿಸಿ ತಾಲೂಕಿನ ಅಂಗವಿಕರು ಹಾಗೂ ಪಾಲಕರ
ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕರ್ನಾಟಕ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ. ಮಕಾಂದಾರ ಮಾತನಾಡಿ, ದೇಶದಲ್ಲಿ ಅತ್ಯಾಚಾರ ಹಾಗೂ ಕೊಲೆ ಕೃತ್ಯಗಳು ನಡೆಯುತ್ತಿರುವುದು ಖೇದಕರ ಸಂಗತಿ. ಈ ಕಾರ್ಯ ಮಾಡಿದ ಆರೋಪಿಗಳಿಗೆ ಗಲ್ಲಿಗೇರಿಸಬೇಕು. ಆರೋಪಿಗಳನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಶಿವಲಿಂಗಪ್ಪ ನಾಯ್ಕೊಡಿ , ಸೋಮಯ್ಯ ಮೋಮಿನ, ನೀಲಮ್ಮ ಶಿವಶರಣ, ಪಾಂಡು ರಾಠೊಡ, ಭರಮಣ್ಣ ಪೂಜಾರಿ, ಸಂತೋಷ ಚೌಹಾಣ, ಹಸೀನಾ ಬಿರಾದಾರ, ಮುಸ್ತಾಕ ಮೋಮಿನ, ಆನಂದ ತೋಡಕರ,
ರಮೇಶ ರಾಠೊಡ, ಬೀರಪ್ಪ ಡಂಬಳ,ಅಶೋಕ ರಾಠೊಡ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.