Advertisement
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಕಳೆದ ತಿಂಗಳು ಈ ರೂಪಾಂತರಿ ಸೋಂಕನ್ನು ‘ವೇರಿಯಂಟ್ ಆಫ್ ಕನ್ಸರ್ನ್’ (ವಿಒಸಿ) ಎಂದು ವರ್ಗೀಕರಿಸಿತ್ತು. ಕಳೆದ ವರ್ಷ ಯುನೈಟೆಡ್ ಕಿಂಗ್ ಡಂ ನಲ್ಲಿ ಪತ್ತೆಯಾದ ಆಲ್ಫಾ ರೂಪಾಂತರಕ್ಕಿಂತ ಇದು ಹೆಚ್ಚು ಪ್ರಬಲವಾಗಿದೆ ಎಂದು ಡಬ್ಲ್ಯು ಎಚ್ ಒ ಹೇಳಿತ್ತು.
Related Articles
Advertisement
ಡೆಲ್ಟಾ ರೂಪಾಂತರಿಯಿಂದ ಕೋವಿಡ್ 19 ಸೋಂಕಿತರಲ್ಲಿ ಶ್ರವಣ ದೋಷ, ತೀವ್ರ ಗ್ಯಾಸ್ಟ್ರಿಕ್ ತೊಂದರೆಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ಕೆಲವು ಅಪರಿಚಿತ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆಘಾತಕಾರಿ ವಿಷಯವೊಂದು ವೈದ್ಯಕೀಯ ಅಧ್ಯಯನ ವರದಿ ತಿಳಿಸಿದೆ.
ಇನ್ನು, ಆಲ್ಫಾ ಜೊತೆಗೆ, ಇತರ ರೂಪಾಂತರಿಗಳಾದ, ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಬೀಟಾ ಕೋವಿಡ್ ರೂಪಾಂತರಿ ಸೋಂಕು ಮತ್ತು ಬ್ರೆಜಿಲ್ ನಲ್ಲಿ ಪತ್ತೆಯಾದ ಗಾಮಾ ರೂಪಾಂತರಿ ಸೋಂಕಿನಿಂದ ಇಂತಹ ಯಾವುದೇ ಅಪರಿಚಿತ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಕಳೆದ ತಿಂಗಳು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ತಿಳಿಸಿತ್ತು.
ಡೆಲ್ಟಾ ರೂಪಾಂತರಿಯು 60 ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದ್ದು, ಯುಕೆ ಯಲ್ಲಿ, ಡೆಲ್ಟಾ ರೂಪಾಂತರಿತ ಕೋವಿಡ್ -19 ಹೊಸ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಾಗಿದೆ.
ಭಾರತದಲ್ಲಿ ಪತ್ತೆಯಾದ ಡೆಲ್ಟಾ ರೂಪಾಂತರಿ ಸೋಂಕು ಆಲ್ಫಾ ರೂಪಾಂತರಿ ಸೋಂಕಿಗಿಂತ ಶೇಕಡಾ 50 ರಷ್ಟು ವೇಗವಾಗಿ ಹರಡುತ್ತದೆ ಎಂದು ಭಾರತ ಸರ್ಕಾರದ ಕೋವಿಡ್ ವಿಶೇಷ ಸಮಿತಿಯ ಅಧ್ಯಯನ ವರದಿ ತಿಳಿಸಿದ್ದು, ಭಾರತದಲ್ಲಿ ಕೋವಿಡ್ ಸೋಂಕು ಹಠಾತ್ ಏರಿಕೆಯಾಗುವುದಕ್ಕೆ ಇದೇ ಕಾರಣ ಇರಬಹುದು ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ ಎಂಬುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್ ಡಿ ಟಿವಿ ವರದಿ ಮಾಡಿದೆ.
ಡೆಲ್ಟಾ ರೂಪಾಂತರಿ ಸೋಂಕಿನಿಂದ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ :
ದೇಶದಲ್ಲಿ ಡೆಲ್ಟಾ ರೂಪಾಂತರಿ ಸೋಂಕಿಗೆ ಒಳಗಾದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆಸ್ಪತ್ರೆಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಹೆಚ್ಚಾಗಿ ದಾಖಲಾಗುತ್ತಿವೆ. ಇದುವರೆಗೆ ಕಾಣಿಸಿಕೊಂಡ ಯಾವುದೇ ಸಾಂಕ್ರಾಮಿಕ ಸೋಂಕಿನ ಕಾರಣದಿಂದ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ ಎಂದು ವೈದ್ಯಕೀಯ ಅಧ್ಯಯನ ವರದಿ ತಿಳಿಸಿದೆ.
ಇದನ್ನೂ ಓದಿ : ಸಿಡಿ ಪ್ರಕರಣ : ನರೇಶ್ ಗೌಡ -ಶ್ರವಣ್ ಗೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು!