Advertisement

ಸುದ್ದಿ ಕೋಶ: ಡೆಲ್ಟಾ ರ್‍ಯಾಂಕಿಂಗ್‌: ದಾಹೋದ್‌ಗೆ ಮೊದಲ ಸ್ಥಾನ

06:00 AM Jun 30, 2018 | |

ದೇಶದಲ್ಲಿರುವ ಕೆಲವು ಪ್ರಮುಖ ಅಭಿವೃದ್ಧಿ ವಂಚಿತ ಜಿಲ್ಲೆಗಳನ್ನು ತ್ವರಿತ ಹಾಗೂ ಪರಿಣಾಮಕಾರಿಯಾಗಿ ಬದಲಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಜಾರಿಗೆ ತಂದ “ಟ್ರಾನ್ಸ್‌ಫಾರ್ಮೇಷನ್‌ ಆಫ್ ಆ್ಯಸ್ಪಿರೇಷನಲ್‌ ಡಿಸ್ಟ್ರಿಕ್ಟ್’ ಯೋಜನೆಯ ಡೆಲ್ಟಾ ರ್‍ಯಾಂಕಿಂಗ್‌ ಅನ್ನು ನೀತಿ ಆಯೋಗ ಶುಕ್ರವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಂತೆ ಅಭಿವೃದ್ಧಿ ಕಂಡಿರುವ ಜಿಲ್ಲೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

Advertisement

 ಏನಿದು ಯೋಜನೆ?
ಅಭಿವೃದ್ಧಿಯಲ್ಲಿ ಹಿಂದುಳಿದಿರುವ 28 ರಾಜ್ಯಗಳ 115 ಜಿಲ್ಲೆಗಳನ್ನು ಆಯ್ಕೆ ಮಾಡಿ, ಅಲ್ಲಿ ತ್ವರಿತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಯೋಜನೆಯಿದು. ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲ, ಆರ್ಥಿಕ ಒಳಗೊಳ್ಳುವಿಕೆ, ಕೌಶಲಾಭಿವೃದ್ಧಿ ಮತ್ತು ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶ. 

ಏಪ್ರಿಲ್‌-ಮೇ ತಿಂಗಳ ಅವಧಿಯಲ್ಲಿ ಸುಧಾರಣೆ ಕಂಡ ಜಿಲ್ಲೆಗಳು
ಪಶ್ಚಿಮ ಸಿಕ್ಕಿಂ(ಸಿಕ್ಕಿಂ), ರಾಮನಾಥಪುರಂ (ತಮಿಳುನಾಡು), ವಿಜಯನಗರ(ಆಂಧ್ರಪ್ರದೇಶ), ವೈಎಸ್‌ಆರ್‌ ಕಡಪ (ಆಂಧ್ರಪ್ರದೇಶ).

ಕಳಪೆ ಸಾಧನೆ 
ಕುಪ್ವಾರಾ (ಜಮ್ಮು-ಕಾಶ್ಮೀರ), ಬೇಗುಸರಾಯ್‌(ಬಿಹಾರ), ರಾಂಚಿ (ಜಾರ್ಖಂಡ್‌), ಸಿಮ್‌ದೇಗಾ(ಜಾರ್ಖಂಡ್‌), ಖಗಾಡಿಯಾ(ಬಿಹಾರ)

ಮಾರ್ಚ್‌ನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ಇಳಿದಿದ್ದ ತೆಲಂಗಾಣದ ಆಸಿಫಾ ಬಾದ್‌ ಜಿಲ್ಲೆ ಕಳೆದ 2 ತಿಂಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಈ ಬಾರಿ 15ನೇ ಸ್ಥಾನಕ್ಕೇರಿದೆ.

Advertisement

ಸುಧಾರಣೆ ಸಾಧಿಸಿದ ರಾಯಚೂರು
ಆರೋಗ್ಯ ಮತ್ತು ಪೌಷ್ಟಿಕಾಂಶದಲ್ಲಿ ಕರ್ನಾಟಕದ ರಾಯಚೂರು ಉತ್ತಮ ಸುಧಾ ರಣೆ ಕಂಡ ಜಿಲ್ಲೆಗಳ ಪಟ್ಟಿಯಲ್ಲಿ ಸೇರ್ಪಡೆ ಯಾಗಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕಳಪೆ ಪ್ರದರ್ಶನ ತೋರಿದೆ. 

ಆಯ್ಕೆಯಾದ 115 ಜಿಲ್ಲೆಗಳ ಪೈಕಿ 108 ಮಾತ್ರ ರ್‍ಯಾಂಕಿಂಗ್‌ನಲ್ಲಿ ಭಾಗಿ
ಮೊದಲ ಸ್ಥಾನ ಪಡೆದ ಜಿಲ್ಲೆ- ಗುಜರಾತ್‌ನ ದಾಹೋದ್‌
ಕರ್ನಾಟಕದ  ರಾಯಚೂರಿಗೆ 12ನೇ ಸ್ಥಾನ ಯಾದಗಿರಿ ಜಿಲ್ಲೆಗೆ  39ನೇ ಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next