ಮುಂಬಯಿ: ದೇಶದಲ್ಲಿ ಹುಟ್ಟುಹಬ್ಬ ಸಾಮಾನ್ಯವಾಗಿ ಎಲ್ಲರೂ ಆಚರಿಸುತ್ತಾರೆ ಕೆಲವರು ಅದ್ದೂರಿಯಾಗಿ ಆಚರಿಸಿಕೊಂಡರೆ ಇನ್ನು ಕೆಲವರು ತಮ್ಮ ಸಾಧ್ಯತೆಯ ಮೇರೆಗೆ ಆಚರಿಸುತ್ತಾರೆ. ಆದರೆ ಮಹಾರಾಷ್ಟ್ರದ ಝೊಮ್ಯಾಟೋ ಸಿಬ್ಬಂದಿಯೋರ್ವ ತನ್ನ ಹುಟ್ಟು ಹಬ್ಬವನ್ನು ಭಿನ್ನವಾಗಿ ಆಚರಿಸಿಕೊಂಡಿದ್ದು ಇದಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ, ಹಾಗಾದರೆ ಈ ಸಿಬಂದಿ ತನ್ನ ಹುಟ್ಟುಹಬ್ಬಕ್ಕೆ ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ಬರೋಣ…
ಆನ್‌ಲೈನ್ ಫುಡ್ ಡೆಲಿವರಿ ಮಾಡುವ ಸಂಸ್ಥೆಯಾದ ಝೊಮ್ಯಾಟೋದ ಡೆಲಿವರಿ ಏಜೆಂಟ್ ಓರ್ವ ಇತ್ತೀಚೆಗೆ ಮುಂಬೈ ನಲ್ಲಿ ತನ್ನ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂಭ್ರಮವನ್ನು ಸಿಬಂಧಿ ತಾನು ಮಾತ್ರ ಆಚರಿಸಿಕೊಳ್ಳದೆ ಅಂದು ತಾನು ಡೆಲಿವರಿ ಕೊಡಬೇಕಾದ ಎಲ್ಲಾ ಗ್ರಾಹಕರ ಆಹಾರದ ಪೊಟ್ಟಣದ ಮೇಲೆ ಒಂದೊಂದು ಚಾಕೋಲೆಟ್ ಇಟ್ಟು ಗ್ರಾಹಕರಿಗೆ ಆಹಾರ ಸರಬರಾಜು ಮಾಡಿದ್ದಾನೆ. ಅತ್ತ ಫುಡ್ ಪಡೆದ ಗ್ರಾಹಕರು ಚಾಕೋಲೆಟ್ ನೋಡಿ ಸಿಬಂಧಿಯಲ್ಲಿ ವಿಚಾರಿಸಿದ್ದಾರೆ ಈ ವೇಳೆ ಗ್ರಾಹಕರು ಸಿಬ್ಬಂದಿಯ ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಷ್ಟು ಮಾತ್ರವಲ್ಲದೆ ಶುಭಾಶಯಗಳನ್ನು ಹೇಳಿದ್ದಾರೆ.
ಅತ್ತ ಸಿಬ್ಬಂಧಿ ತನ್ನ ಹುಟ್ಟುಹಬ್ಬದ ದಿನ ತಾನು ಡೆಲಿವರಿ ಕೊಡಬೇಕಾದ ಆಹಾರದ ಪೊಟ್ಟಣದ ಮೇಲೆ ಕ್ಯಾಡ್ಬರಿ ಫೈವ್ ಸ್ಟಾರ್ ಚಾಕೋಲೆಟ್ ಇಟ್ಟು ಅದರ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹುಟ್ಟುಹಬ್ಬದ ಕುರಿತು ತಾನು ಹೊಸ ಬಟ್ಟೆ ಧರಿಸಿದ್ದು ಅದರಂತೆ ಅಂದು ನೀಡುವ ಎಲ್ಲಾ ಗ್ರಾಹಕರಿಗೂ ಚಾಕೋಲೆಟ್ ನೀಡುವುದಾಗಿ ಬರೆದುಕೊಂಡು ಪೋಸ್ಟ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಝೊಮ್ಯಾಟೋ ಸಿಬ್ಬಂದಿಯ ಪೋಸ್ಟ್ ವೈರಲ್ ಆಗುತ್ತಿದ್ದು ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಕರಣ್ ಆಪ್ಟೆ ಎಂಬ ಯುವಕ ತನ್ನ ಫೇಸ್ ಬುಕ್ ನಲ್ಲಿ ಈ ಪೋಸ್ಟ್ ಅಪ್ ಲೋಡ್ ಮಾಡಿಕೊಂಡಿದ್ದು ಇದನ್ನು ಇಂಡಿಯಾಸ್ ಆನ್ ಇಂಟರ್ನೆಟ್ 2.0 ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ, ಕರಣ್ ಮಾಡಿದ ಕಾರ್ಯಕ್ಕೆ ಸಾಕಷ್ಟು ಮಂದಿ ಶುಭಾಶಯ ಹೇಳಿದ್ದು ಅಲ್ಲದೆ ಒಳ್ಳೆಯ ಕೆಲಸ ಶುಭವಾಗಲಿ ಎಂದು ಹೆಚ್ಚಿನ ಮಂದಿ ಹಾರೈಸಿದ್ದಾರೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಝೊಮ್ಯಾಟೋ ಸಿಬ್ಬಂದಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅತ್ತ ಝೊಮ್ಯಾಟೋ ತನ್ನ ಸಿಬ್ಬಂದಿಯ ಹುಟ್ಟುಹಬ್ಬಕ್ಕೆ ಕೇಕ್ ಕಳುಹಿಸಿಕೊಟ್ಟು ಸಿಬ್ಬಂದಿಯ ಖುಷಿಯಲ್ಲಿ ಭಾಗಿಯಾಗಿದೆ.
ಇದನ್ನೂ ಓದಿ: Maharastra: ಹೊತ್ತಿ ಉರಿಯುತ್ತಿದ್ದ ಬಸ್ಸಿನ ಕಿಟಕಿಯ ಗಾಜು ಒಡೆದು ನಾನು ಪಾರಾದೆ, ಆದರೆ…