Advertisement

ರೈತರಿಗೆ ಪರಿಹಾರ ಚೆಕ್‌ ವಿತರಣೆ

09:16 AM Jun 12, 2018 | Team Udayavani |

ಸುರಪುರ: ಸಿಡಿಲು ಬಡಿದು ಅಸುನೀಗಿದ್ದ ಜಾನುವಾರಗಳ ಮಾಲೀಕರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಶಾಸಕ ರಾಜುಗೌಡ 1.20 ಲಕ್ಷ ರೂ. ಮೊತ್ತದ ಪರಿಹಾರ ಧನದ ಚೆಕ್‌ ವಿತರಿಸಿದರು.

Advertisement

ಇಲ್ಲಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ತಲಾ 30 ಸಾವಿರ ರೂಪಾಯಿಯಂತೆ ನಾಲ್ಕು ಜನರಿಗೆ ಚೆಕ್‌ ವಿತರಿಸಿ ಅವರು ಮಾತನಾಡಿ, ಈ ಪರಿಹಾರದ ಹಣವನ್ನು ವ್ಯರ್ಥವಾಗಿ ಖರ್ಚು ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು. ಜಾನುವಾರಗಳನ್ನು ಖರೀದಿಸಿ ಕೃಷಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರಿಹಾರ ಧನದ ಚೆಕ್‌ಗಳನ್ನು ಶೆಳ್ಳಗಿ ಗ್ರಾಮದ ಚಂದ್ರಶೇಖರ ಲಗಶೆಟ್ಟಿ, ಯಕ್ತಾಪುರ ಗ್ರಾಮದ ಗುತ್ತಪ್ಪ ಕಂಠೆಪ್ಪ, ಕೊಡೇಕಲ್‌ ಗ್ರಾಮದ ಶಂಕ್ರಪ್ಪ ಲಚ್ಚಪ್ಪ, ಜಮಾಲುಪುರ ತಾಂಡಾದ ಗೋಪಿಚಂದ್‌ ಟಾಕರೆಪ್ಪ ಚವ್ಹಾಣ
ಇವರಿಗೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.

ತಹಶೀಲ್ದಾರ್‌ ಸುರೇಶ ಅಂಕಲಗಿ, ಹುಣಸಗಿ ತಹಶೀಲ್ದಾರ್‌ ಸುರೇಶ ಚವಲ್ಕರ್‌, ಗ್ರೇಡ್‌-2 ತಹಶೀಲ್ದಾರ್‌ ಸೊಫಿಯಾ
ಸುಲ್ತಾನ್‌, ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ವಕೀಲರಾದ ರಾಮನಗೌಡ ಸುಬೇದಾರ್‌, ಶಿರಸ್ತೇದಾರ್‌ ಶರಣಬಸವ, ವಿ.ಎ. ಸೋಮಶೇಖರ ಪತ್ತಾರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next