ಹಾಸನ: ಕೋವಿಡ್ ಕಾರಣದಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬಾರದಿರುವುದರಿಂದ, ಪೋಷಣ್ ಅಭಿಯಾನದಲ್ಲಿ ನೀಡಲಾಗುವ ಪೂರಕ ಪೌಷ್ಟಿಕ ಆಹಾರವನ್ನು ಮನೆಗಳಿಗೇ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೋಷಣ್ ಅಭಿಯಾನದ ಕುರಿತು 2ನೇ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಸೌಲಭ್ಯಗಳು ಪೂರಕವಾಗಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ತಪ್ಪದೇ ದೊರಕಬೇಕು ಎಂದು ಹೇಳಿದರು.
ಬೆಳವಣಿಗೆ ಮಾಪನ ಮಾಡಿ: ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮನೆಗೆ ಭೇಟಿ ನೀಡಿ ಮಕ್ಕಳ ಬೆಳವಣಿಗೆ ಮಾಪನವನ್ನು ನಿರ್ವಹಿಸಬೇಕು. ಅಪೌಷ್ಟಿಕತೆಯ ಕಾರಣದಿಂದಾಗಿ ಕಡಿಮೆ ತೂಕ, ಕುಬjತೆ ಹಾಗೂ ಇತರೆ ನೂನ್ಯತೆಗಳಿಗೆ ಮಕ್ಕಳು ಒಳಗಾಗಬಾರದು. ಈ ನಿಟ್ಟಿನಲ್ಲಿ ಪೋಷಣ್ ಅಭಿಯಾನದಿಂದ ದೊರಕುವ ಎಲ್ಲಾ ಸೌಲಭ್ಯ ಕಡ್ಡಾಯವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಿ: ಶಾಲೆ ಬಿಟ್ಟ ಕಿಶೋರಿಯರ ಪಟ್ಟಿಯನ್ನು ಶಿಕ್ಷಣ ಇಲಾಖೆಯಿಂದ ಪಡೆದು, ಎಲ್ಲೂಅರ್ಹರಿಗೂ ಅವರ ಮನೆಗಳಿಗೇ ಕಚ್ಚಾ ಆಹಾರ ಪದಾರ್ಥಗಳನ್ನು ಪೂರೈಸಬೇಕು ಎಂದ ಅವರು, ಕಟ್ಟಡ ಕಾರ್ಮಿಕರ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿದ್ದು, ಅವರು ಕೆಲಸ ಮಾಡುವ ಸ್ಥಳದ ಸಮೀಪದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನೋಂದಾಯಿಸಿಕೊಂಡು, ಪೂರಕ ಪೌಷ್ಟಿಕ ಆಹಾರ ದೊರಕುವಂತೆ ಕ್ರಮಕೈಗೊಳ್ಳಬೇಕು. ಇತರೆ ಇಲಾಖೆಗಳ ಸಹಕಾರ ಪಡೆದು ಪೋಷಣ್ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಪಂ ಸಿಇಒ ಬಿ.ಎ.ಪರಮೇಶ್ ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ಪೌಷ್ಟಿಕ ಆಹಾರಹಾಗೂಅಗತ್ಯಚಿಕಿತ್ಸಾ ಸೌಲಭ್ಯಗಳ ಅವಶ್ಯಕತೆ ಇದೆ. ಅಂತಹವರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಬೇಕು. ತೋಟ ಗಾರಿಕೆ ಇಲಾಖೆಯಿಂದ ಹಣ್ಣು ಹಾಗೂ ತರಕಾರಿಗಳ ಬೀಜಗಳನ್ನು ಪಡೆದು, ಅಂಗನವಾಡಿ ಕೇಂದ್ರಗಳಲ್ಲಿಯೇ ಬೆಳೆಯಲು ಉತ್ತೇಜನ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ನಿರೂಪಣಾಧಿಕಾರಿಗಳಾದ ಮಲ್ಲೇಶ್ ಪೋಷಣ್ ಅಭಿಯಾನದಲ್ಲಿ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳು ಹಾಗೂ ಇತರೆ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಸಮಾಜ ಕಲ್ಯಾಣಇಲಾಖೆಯ ಉಪನಿರ್ದೇಶಕ ಶ್ರೀಧರ್, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.