Advertisement
ತಾಲೂಕು ನರೇಗಾ ಸಾಮಾಜಿಕ ಪರಿಶೋಧನಾ ಸಂಯೋಜಕಿ ಡಿ.ಎಸ್.ಉಮಾಶ್ರೀ, ನರೇಗಾ ಅನುದಾನದಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳ ಪ್ರಗತಿ ಹಾಗೂ ಮುಂದೆ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
Related Articles
Advertisement
ನರೇಗಾ ಕಾಮಗಾರಿಗೆ ಅವಕಾಶ: ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಸುಷ್ಮಾ ಮಾತನಾಡಿ, ಋತುಮಾನಕ್ಕೆ ಅನುಗುಣವಾಗಿ ಭತ್ತದ ಬೆಳೆಗೆ ಔಷಧ, ಎರಡು ರೆಕ್ಕೆಯ ನೇಗಿಲು ದೊರೆಯುವಿಕೆ ಹಾಗೂ ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ರೈತರು ಸೂಕ್ತ ದಾಖಲೆಗಳೊಂದಿಗೆ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹು ದಾಗಿದೆ ಎಂದು ಮನವಿ ಮಾಡಿದರು.
ಅರ್ಹರು ಸೌಲಭ್ಯ ಬಳಸಿಕೊಳ್ಳಿ: ನರೇಗಾ ಎಂಜಿನಿಯರ್ ಮಹದೇವು ಮಾತನಾಡಿ, ಇಪ್ಪತ್ತು ಅಡಿ ಅಗಲ, ಹತ್ತಡಿ ಉದ್ದದ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲರಿಗೂ ಐವತ್ತೇಳು ಸಾವಿರ ರೂ. ನಿಗದಿ ಮಾಡಲಾಗಿದೆ. ಅದೇ ರೀತಿ ಹದಿನೈದು- ಹನ್ನೆರಡು ಅಡಿ ಉದ್ದದ ಮೇಕೆ ಶೆಡ್ಡು ನಿರ್ಮಾಣಕ್ಕೆ ಎಪ್ಪತ್ತೆçದು ಸಾವಿರ ರೂ.ನಿಗದಿಯಾಗಿದ್ದು, ಅರ್ಹರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಭೆ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಧುಸೂದನ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಎನ್. ಆರ್.ರೇಖಾ, ಸದಸ್ಯರಾದ ಹನುಮಂತು, ಗೌರಮ್ಮ, ಗಂಗಮ್ಮ, ಸೌಭಾಗ್ಯಮ್ಮ, ಮುನಿ ವೆಂಕಟಪ್ಪ, ಅಶೋಕ್, ಕೃಷ್ಣಪ್ಪ, ಚಂದ್ರಕಲಾ, ಪವಿತ್ರ, ಮಾಜಿ ಸದಸ್ಯ ಮೂರ್ತಿ ಮತ್ತು ಅಂಗನವಾಡಿ- ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.