Advertisement

ಕೇಂದ್ರದ ಯೋಜನೆ ರೈತರಿಗೆ ತಲುಪಿಸಿ: ಈರಣ್ಣ ಕಡಾಡಿ

01:20 PM Sep 08, 2020 | Suhan S |

ದೇವನಹಳ್ಳಿ: ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ರೈತರಿಗೆ ತಲುಪಿಸುವ ಕಾರ್ಯವನ್ನು ರೈತ ಮೋರ್ಚಾ ಪದಾಧಿಕಾರಿಗಳು ರಾಯ ಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸಭಾ ಸದಸ್ಯ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

Advertisement

ತಾಲೂಕಿನ ಕಸಬಾ ಹೋಬಳಿ ಅತ್ತಿಬೆಲೆ ಸಮೀಪದ ಅನಂತ ವಿದ್ಯಾನಿ ಕೇತನ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಮಟ್ಟದ ರೈತ ಮೋರ್ಚಾ ಕಾರ್ಯಕಾರಣಿ ಸಭೆ ಉದ್ಘಾ ಟಿಸಿ ಮಾತನಾಡಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 6 ಸಾವಿರ ರೂ. ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್  ಯಡಿಯೂರಪ್ಪ ನೇತೃತ್ವದ ಸರ್ಕಾರ ರೈತರಿಗೆ 4 ಸಾವಿರ ರೂ. ಹಣ ನೀಡುತ್ತಿದ್ದಾರೆ. ಒಟ್ಟು ರೈತರಿಗೆ 10 ಸಾವಿರರೂ. ತಲುಪುವಂತೆ ಮಾಡಿದ್ದಾರೆಂದರು. ಕೇವಲ ಪದಾಧಿಕಾರಿಗಳಾದರೆ ಸಾಲದು, ರೈತರ ಸಮಸ್ಯೆ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.

ವಾರದೊಳಗೆ ಪಟ್ಟಿ:ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್‌.ಎಂ.ರವಿಕುಮಾರ್‌, ಇನ್ನೊಂದು ವಾರದೊಳಗೆ ರೈತ ಮೋರ್ಚಾ ಪದಾಧಿಕಾರಿಗಳ ಪಟ್ಟಿ ಸಿದ್ಧಗೊಂಡಿದ್ದು, ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಬಿಜೆಪಿ ತನಗೆ 3 ವರ್ಷಗಳ ಅವಧಿ ನೀಡಿರುವುದರಿಂದ ಪ್ರತಿ ಜಿಲ್ಲೆಯ ಪ್ರವಾಸಗಳನ್ನು ಮಾಡಿ, ರೈತರ ಸಂಕಷ್ಟಗಳ ಪಟ್ಟಿ ಮಾಡಿ, ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆಂದರು.  ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಗುರುಲಿಂಗನಗೌಡ, ಸಿ.ವಿ.ಲೋಕೇಶ್‌, ಖಜಾಂಚಿ ನಲ್ಲೇಶ್‌ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್‌ಗೌಡ, ಪುರು ಷೋತ್ತಮ್‌ಗೌಡ, ದೇವನಹಳ್ಳಿ ತಾಲೂಕು ಅಧ್ಯಕ್ಷ ಸುಂದರೇಶ್‌ (ಸುನಿ), ಪ್ರ. ಕಾರ್ಯದರ್ಶಿ ಮಂಜುನಾಥ್‌, ಸೊಣ್ಣೇ ಗೌಡ, ಬಸವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next