Advertisement

ಕೃಷಿ ಯೋಜನೆ ರೈತರಿಗೆ ತಲುಪಿಸಿ

01:30 PM Jul 05, 2018 | Team Udayavani |

ದೇವನಹಳ್ಳಿ: ರೈತರ ಮನೆ ಬಾಗಿಲಿಗೆ ಕೃಷಿ ಮಾಹಿತಿ ನೀಡುವ ಮೂಲಕ ಸರ್ಕಾರ ಕೃಷಿಗೆ ಒತ್ತು ನೀಡುತ್ತಿದ್ದು ರೈತರು ಸದ್ಬಳಕೆ ಮಾಡಿಕೊ ಳ್ಳಬೇಕೆಂದು ಜಿಪಂ ಸದಸ್ಯ ಜಿ.ಲಕ್ಷ್ಮೀನಾರಾಯಣ್‌ ತಿಳಿಸಿದರು.

Advertisement

ತಾಲೂಕಿನ ಚನ್ನರಾಯಪಟ್ಟಣ ಗ್ರಾಪಂ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಚನ್ನರಾಯಪಟ್ಟಣ ಹೋಬಳಿ ಕೃಷಿ ಅಭಿಯಾನ ಸಮಾರೋಪ ಉದ್ಘಾಟಿಸಿ ಮಾತನಾಡಿದರು. ಬಯಲು ಸೀಮೆ ಒಣ ಭೂಮಿ ಯಲ್ಲಿ ಮಳೆ ಆಧಾರಿತ ಕೃಷಿ ಬೇಸಾಯ ಕಷ್ಟಕರ. ಕೊಳವೆ ಬಾವಿಯಲ್ಲಿ ಸ್ವಲ್ಪ ನೀರಿನ ಬಳಕೆಗೆ ಹನಿ ನೀರಾವರಿ ಸೇರಿದಂತೆ ವಿವಿಧ ತಂತ್ರಜ್ಞಾನದಿಂದ ಬೆಳೆ ಬೆಳೆಯಬೇಕೆಂದರು.

ಪ್ರತಿ ಹೋಬಳಿಯಲ್ಲೂ ಅಭಿಯಾನ: ತಾಪಂ ಅಧ್ಯಕ್ಷೆ ಭಾರತಿ ಮಾತನಾಡಿ, ಕೃಷಿ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ಅವಶ್ಯಕವಿರುವ ತಂತ್ರಜ್ಞಾನವನ್ನು ರೈತರಿಗೆ ಯತ್ರೋಪಕರಣ ಬಾಡಿಗೆ ಸಾರ್ವಜನಿಕರಿಗೆ ತಲುಪಿಸಲು ಹೋಬಳಿಯ ಪ್ರತಿ ಗ್ರಾಪಂ ಆವರಣಗಳಲ್ಲಿ ಕೃಷಿ ಅಭಿಯಾನ ರಥದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
 
ರೈತರಿಗೆ ಅನೂಕುಲವಾಗುವಂತೆ ಸರ್ಕಾರ ದಿಂದ ಬಿಡುಗಡೆಯಾಗುವ ಅನುದಾನಗಳನ್ನು ಪಡೆಯಲು ರೈತರು ಇಲಾಖೆಗಳಿಗೆ ಅಲೆದಾ ಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
 
ತಂತ್ರಜ್ಞಾನ ಅಳವಡಿಸಿಕೊಳ್ಳಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್‌.ಮಂಜುಳಾ, ರೈತರು ಆಧುನಿಕ ತಂತ್ರಜ್ಞಾನದಲ್ಲಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಪ್ರತಿ ರೈತರು ಮಣ್ಣಿನ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಹೇಳಿದರು.ಮಣ್ಣಿನ ಫ‌ಲವತ್ತತೆ ಹೆಚ್ಚಿಸಿಕೊಳ್ಳಬೇಕಿದ್ದು ಕೊಟ್ಟೆಗೆ ಗೊಬ್ಬರ, ಕೋಳಿ ಮತ್ತು ಕುರಿ ಗೊಬ್ಬರ, ಎರೆಹುಳು ಗೊಬ್ಬರಗಳನ್ನು ಅಳವಡಿಸಿಕೊಂಡರೆ ಮಣ್ಣಿನ ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತ ಮಂಜುನಾಥ್‌, ಚನ್ನರಾಯಪಟ್ಟಣ ಅಧ್ಯಕ್ಷೆ ಮಂಜುಳಾ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸೋಮತ್ತನಹಳ್ಳಿ ಮಂಜುನಾಥ್‌, ತಾಪಂ ಸದಸ್ಯ ವೆಂಕಟೇಶ್‌, ಶಶಿಕಲಾ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸ್‌ಗೌಡ, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಗ್ರಾಪಂ ಸದಸ್ಯರಾದ ಮುನಿವೆಂಕಟಮ್ಮ, ಚಂದ್ರಕಲಾ, ಬಾಬು, ಮುರಳಿಧರ್‌, ಬೂದಿಗೆರೆ ಗ್ರಾಪಂ ಸದಸ್ಯ ಮುನಿರಾಜು, ನಲ್ಲೂರು ಗ್ರಾಪಂ ಅಧ್ಯಕ್ಷೆ ಟಿ. ಕೆ.ಸಾವಿತ್ರಮ್ಮ, ಜಿಕೆವಿಕೆ ಹಾಡೋನಹಳ್ಳಿ ವಿಜ್ಞಾನಿ ಮಂಜುನಾಥ್‌, ಗ್ರಾಪಂ ಸದಸ್ಯೆ ಶೈಲಾ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್‌, ಮುಖಂಡ ಪಾಪನಹಳ್ಳಿ ತಮ್ಮೇಗೌಡ, ಪಶುಸಂಗೋಪನೆ ಸಹಾಯಕ ನಿರ್ದೇಶಕ ಜನಾರ್ಧನ್‌, ತೋಟಗಾರಿಕಾ ಇಲಾಖಾಧಿಕಾರಿ ರಾಜೇಂದ್ರ, ರೇಷ್ಮೆ ಇಲಾಖೆ ನಿರ್ದೇಶಕಿ ಗಾಯಿತ್ರಿ, ಪರಿವರ್ತನಾ ಕಲಾ ತಂಡದ ದೇವರಾಜು, ಸಂಗಡಿಗರು, ಗ್ರಾಮಸ್ಥರಿದ್ದರು.

ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದು. ಸಾವಯುವ ಗೊಬ್ಬರ ಪರಿಣಾಮಕಾರಿಯಾಗಿ ರೈತರು ಬಳಕೆ ಮಾಡಿಕೊಳ್ಳಬೇಕು. ವಾಡಿಕೆ ಮಳೆ ಪ್ರಮಾಣ ಕಡಿಮೆ ಜತೆಗೆ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೇ ಕೃಷಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಸುಧಾರಿತ ಬೇಸಾಯ ಕ್ರಮಕ್ಕೆ ರೈತರು ಮುಂದಾಗಬೇಕು.
ಜಿ.ಲಕ್ಷ್ಮೀನಾರಾಯಣ್‌, ಜಿಲ್ಲಾ ಪಂಚಾಯ್ತಿ ಸದಸ್ಯ 

Advertisement
Advertisement

Udayavani is now on Telegram. Click here to join our channel and stay updated with the latest news.

Next