Advertisement

ದೆಹಲಿಯಲ್ಲಿ 72 ವರ್ಷಗಳಲ್ಲಿಯೇ ಗರಿಷ್ಠ ತಾಪಮಾನ ದಾಖಲು

12:19 PM Apr 10, 2022 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಬಿರು ಬೇಸಗೆಯ ಬಿಸಿಯ ಅಲೆ ಮತ್ತಷ್ಟು ತೀವ್ರಗೊಂಡಿದ್ದು, ಏಪ್ರಿಲ್ 9 ರಂದು ಗರಿಷ್ಠ ತಾಪಮಾನ 42.4 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.

Advertisement

ಇದು ದೆಹಲಿಯಲ್ಲಿ 1950 ರ ಬಳಿಕ ಏಪ್ರಿಲ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ಮೊದಲಾರ್ಧದಲ್ಲಿ ದೆಹಲಿಯಲ್ಲಿ ಇಷ್ಟು ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಹೇಳಿದೆ.

ಶನಿವಾರದ ಗರಿಷ್ಠ ತಾಪಮಾನವು ವರ್ಷದ ಈ ಸಮಯದಲ್ಲಿ ಸಾಮಾನ್ಯಕ್ಕಿಂತ ಎಂಟು ಡಿಗ್ರಿಗಳಷ್ಟು ಹೆಚ್ಚಾಗಿದೆ. , ಹವಾಮಾನ ಇಲಾಖೆಯು ಭಾನುವಾರದಂದು ರಾಷ್ಟ್ರ ರಾಜಧಾನಿಗೆ ಆರೆಂಜ್ ಅಲರ್ಟ್ ನೀಡಿದೆ ಮತ್ತು ತೀವ್ರತರವಾದ ಶಾಖದ ಪರಿಸ್ಥಿತಿಗಳು ಈ ಪ್ರದೇಶದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಎಚ್ಚರಿಕೆ ನೀಡಿದೆ.

ಬಿಸಿಗಾಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಐಎಮ್‌ಡಿ ಅಧಿಕಾರಿಗಳು ಸುದೀರ್ಘ ಶುಷ್ಕ ವಾಯುವ್ಯ ಭಾರತದಲ್ಲಿ ತೀವ್ರ ಬಿಸಿ ವಾತಾವರಣಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next