Advertisement
ದಿಲ್ಲಿಯ ಹೊರವಲಯದಲ್ಲಿರುವ ವಿಶಾಲವಾದ ರಾಧಾ ಸೋಮಿ ಸತ್ಸಂಗ ಬಿಯಾಸ್ ಕ್ಯಾಂಪಸ್‌ನಲ್ಲಿ ತಾತ್ಕಾಲಿಕ 10,208 ಬೆಡ್‌ಗಳನ್ನು ಅಳವಡಿಸಲಾಗುತ್ತಿದೆ.
Related Articles
Advertisement
ಈಗಾಗಲೇ 2 ಸಾವಿರ ಬೆಡ್‌ಗಳನ್ನು ಸಿದ್ಧಪಡಿಸಲಾಗಿದ್ದು, ಜುಲೈ ಮೊದಲ ವಾರದಲ್ಲಿ 10,208 ಹಾಸಿಗೆಗಳು ಸಿದ್ಧವಾಗ ಲಿವೆ. ಈ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕಾಗಿ ಇಂಡೋ ಟಿಬೇಟಿಯನ್ ಗಡಿ ಪಡೆಯನ್ನು ಬಳಸಿಕೊಳ್ಳಲಾಗಿದೆ.
ಬೆಡ್‌ಗಳ ಅಳವಡಿಕೆ: ಈ ಕೇಂದ್ರದಲ್ಲಿ ಪ್ರತಿ 5 ಅಡಿ ಅಂತರದಲ್ಲಿ ಒಂದು ಬೆಡ್ ಅಳವಡಿಸಲಾಗಿದೆ. ಕಬ್ಬಿಣದ ಮಂಚಕ್ಕೆ ಹೊದಿಕೆ, ಹಾಸಿಗೆ, ದಿಂಬುಗಳನ್ನು ಕಲ್ಪಿಸಲಾಗಿದೆ. ಪ್ರತಿ ಬೆಡ್‌ಗೆ ಒಂದು ಚೇರ್, ಸ್ಟೂಲ್, ಕಸದ ಡಬ್ಬಿಯನ್ನು ಇಡಲಾಗಿದೆ.
3 ಬೆಡ್‌ಗಳಿಗೆ ಒಂದರಂತೆ ಫ್ಯಾನ್ ಅಳವಡಿಸಲಾಗಿದೆ. ಜತೆಗೆ 18 ಸಾವಿರ ಟನ್ ಹವಾ ನಿಯಂತ್ರಣ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಚಿಕಿತ್ಸಾ ಕೇಂದ್ರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದು ಬೃಹತ್ ವಿಭಾಗದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದು ವಿಭಾಗವನ್ನು ವೈದ್ಯರು, ನರ್ಸ್‌ಗಳು ಸೇರಿದಂತೆ ವೈದ್ಯಕೀಯ ಸಿಬಂದಿ ಹಾಗೂ ಮತ್ತೂಂದು ವಿಭಾಗವನ್ನು ಕಮಾಂಡೋಗಳಿಗೆ ಮೀಸಲಿಡಲಾಗಿದೆ.
ಚಿಕಿತ್ಸೆ: ಈ ಚಿಕಿತ್ಸಾ ಕೇಂದ್ರಕ್ಕೆ ರೋಗಿಗಳ ಸಂಬಂ ಧಿಕರು ಪ್ರವೇಶಿಸಲು ಅವಕಾಶವಿಲ್ಲ. ಆ್ಯಂಬುಲೆನ್ಸ್ ಮೂಲಕ ಸೋಂಕಿತರನ್ನು ಇಲ್ಲಿಗೆ ಕರೆದುಕೊಂಡು ಬರಲಾಗುವುದು. ಸಿಬಂದಿಗಳ ಮೂಲಕ ರೋಗಿಗಳಿಗೆ ವಸ್ತುಗಳನ್ನು ತಲುಪಿಸಬಹುದಾಗಿದೆ.
ಇ-ಹಾಸ್ಟಿಟಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, 400 ಕಂಪ್ಯೂಟರ್, ಇಂಟರ್‌ನೆಟ್, ಮೊಬೈಲ್ ಸಂಪರ್ಕ ಕಲ್ಪಿಸಲಾಗಿದೆ. ಈ ಕೇಂದ್ರವು ಚೀನದಲ್ಲಿ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕಿಂತ 10 ಪಟ್ಟು ದೊಡ್ಡದ್ದಾಗಿದೆ.
ಮೊಬೈಲ್, ಲ್ಯಾಪ್‌ಟಾಪ್ ಬಳಸಲು ಸೌಲಭ್ಯಪ್ರತಿ ಬೆಡ್‌ಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರು ಲ್ಯಾಪ್‌ಟಾಪ್ ತರಲು ಅವಕಾಶ ನೀಡಲಾಗಿದೆ. ರೋಗಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸ್ವಯಂಸೇವಕರ ಪಡೆಯನ್ನು ನಿಯೋಜಿಸಲಾಗಿದೆ. ರಾಧಾ ಸೋಮಿ ಸತ್ಸಂಗ ಬಿಯಾಸ್ ಸಂಸ್ಥೆಯು ದಿನಕ್ಕೆ 3 ಲಕ್ಷ ಮಂದಿಗೆ ಊಟವನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. 70 ಪೋರ್ಟಬಲ್ ಟಾಯ್ಲೆಟ್ ಸೇರಿದಂತೆ 600 ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ದಿನಕ್ಕೆ 2 ಬಾರಿ ಸ್ವಚ್ಛಗೊಳಿಸಲಾಗುತ್ತಿದೆ. ಪ್ರತಿ ಸಿಬಂದಿ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ದಿಲ್ಲಿ ಜಲ ಮಂಡಳಿಯು ನೀರು ಸರಬರಾಜು ಮಾಡಲಿದೆ. ಐಸೋಲೇಷನ್ ನಿಯಮಗಳಲ್ಲಿ ಬದಲು
ದಿಲ್ಲಿ ಸರಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರಕಾರವು ಹೋಂ ಐಸೋ ಲೇಷನ್ ಮಾರ್ಗಸೂಚಿಯನ್ನು ಗುರುವಾರ ವಾಪಸ್ ಪಡೆದಿದೆ. ಕೋವಿಡ್ 19 ಸೋಂಕಿತರೆಲ್ಲರೂ ಕಡ್ಡಾಯವಾಗಿ ಕೋವಿಡ್ ಕೇಂದ್ರದಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ಕೇಂದ್ರ ಸರಕಾರ ಇತ್ತೀಚೆಗೆ ಆದೇಶಿಸಿತ್ತು. ಆದರೆ, ಎಲ್ಲರೂ ಕೋವಿಡ್ 19 ಕೇಂದ್ರಕ್ಕೆ ಬಂದರೆ, ಗೊಂದಲ ಉಂಟಾಗುವುದಲ್ಲದೇ, ವೈದ್ಯಕೀಯ ಸಿಬಂದಿಗೂ ತೀವ್ರ ಹೊರೆಯಾಗಲಿದೆ ಎಂದು ದಿಲ್ಲಿ ಸರಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ನಿಯಮ ಬದಲಾಯಿಸಿರುವ ಕೇಂದ್ರ ಸರಕಾರ, ಯಾರಿಗೆ ಮನೆಯಲ್ಲಿ ಸೂಕ್ತ ವ್ಯವಸ್ಥೆ ಲಭ್ಯವಿಲ್ಲವೋ ಅಂಥವರು ಮಾತ್ರ ಕೋವಿಡ್ ಕೇಂದ್ರಕ್ಕೆ ಬಂದರೆ ಸಾಕು ಎಂದು ಹೇಳಿದೆ. ಹೀಗಾಗಿ, ಇನ್ನು ಮುಂದೆ ವೈದ್ಯಕೀಯ ತಂಡವೇ ಸೋಂಕಿತರ ಮನೆಗೆ ತೆರಳಿ, ಅವರನ್ನು ಪರೀಕ್ಷೆಗೊಳಪಡಿಸಿ, ಅವರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದರೆ ಸಾಕೇ ಅಥವಾ ಕೋವಿಡ್ ಕೇರ್ ಕೇಂದ್ರಗಳಿಗೆ ಶಿಫ್ಟ್ ಆಗಬೇಕೇ ಎಂಬುದನ್ನು ನಿರ್ಧರಿಸಲಿದೆ ಎಂದು ಡಿಸಿಎಂ ಮನೀಷ್ ಸಿಸೋಡಿಯಾ ಹೇಳಿದ್ದಾರೆ.