ನವ ದೆಹಲಿ : ರಾಷ್ಟ್ರ ರಾಜದಲ್ಲಿ ಸೊಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಕೋವಿಡ್ ಸೋಂಕಿನ ಎರಡನೇ ಅಲೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗಿರುವ ಲಾಕ್ ಡೌನ್ ನನ್ನು ಒಂದು ವಾರಗಳ ಕಾಲ ಮತ್ತೆ ವಿಸ್ತರಣೆ ಮಾಡಿದ್ದಾರೆ.
ಪ್ರಕರಣಗಳ ಸಂಖ್ಯೆ ಇಳಿಮುಖವಾದರೇ ಹಾಗೂ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿದರೇ ಮಾತ್ರ ಮೇ 31 ರಿಂದ ಲಾಕ್ ಡೌನ್ ನನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದಲ್ಲಿ ಲಾಕ್ ಡೌನ್ ವಿಸ್ತರಣೆಯೊಂದೆ ಮಾರ್ಗ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ : ‘ನಾನು ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು’: ಉಪೇಂದ್ರ
ದೆಹಲಿ ಸರ್ಕಾರವು ಏಪ್ರಿಲ್ 19 ರಂದು ಆರಂಭಿಕ ಲಾಕ್‌ಡೌನ್ ಅನ್ನು ವಿಧಿಸಿತ್ತು, ಇದನ್ನು ಕೊನೆಯದಾಗಿ ಮೇ 16 ರಂದು ಒಂದು ವಾರ ವಿಸ್ತರಿಸಲಾಯಿತು. ಸದ್ಯಕ್ಕೆ ದೆಹಲಿಯಲ್ಲಿ ಮೇ 31ರ ತನಕವಿರುವ ಲಾಕ್ ಡೌನ್ ದೆಹಲಿ ಸರ್ಕಾರ ವಿಧಿಸಿದ್ದು. ಸರ್ಕಾರ ಜಾರಿಗೊಳಿಸಿರುವ ಎಲ್ಲಾ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲನೆ ಮಾಡಿದರೇ ಮಾತ್ರ ದೆಹಲಿಯಲ್ಲಿ ಲಾಕ್ ಡೌನ್ ನನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದಿದ್ದಾರೆ.
Related Articles
ಎಲ್ಲರಿಗೂ ಲಸಿಕೆಯನ್ನು ಹಾಕಿಸಿದ್ದಲ್ಲಿ ಮೂರನೇ ಅಲೆಗೆ ಯಾವುದೇ ರೀತಿಯಲ್ಲಿ ದೆಹಲಿ ಹೆದರುವ ಅಗತ್ಯವಿಲ್ಲ. ರಾಜ್ಯದ ಎಲ್ಲರಿಗೆ ಲಸಿಕೆಯನ್ನು ಪೂರೈಸುವಲ್ಲಿ ನಮ್ಮ ಸರ್ಕಾರ ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ನಮ್ಮ ಸರ್ಕಾರದ ಬಜೆಟ್ ನನ್ನು ಕೂಡ ಲಸಿಕೆಗಾಗಿ ಖರ್ಚು ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಲಸಿಕೆಯ ಪೂರೈಕೆಯ ಬಗ್ಗೆ ಲಸಿಕೆ ಉತ್ಪಾದನಾ ಕಂಪೆನಿಗಳೊಂದಿಗೆ ಸರ್ಕಾರದ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಇನ್ನು, ಕೋವಿಡ್ ವಿರುದ್ಧ ಹೋರಾಡಲು ಎಲ್ಲಾ ರೀತಿಯಲ್ಲಿಯೂ ನಮ್ಮ ಸರ್ಕಾರ ಸನ್ನದ್ಧವಾಗಿದೆ. ಲಸಿಕೆಯನ್ನು ಎಲ್ಲರೂ ಹಾಕಿಸಿಕೊಳ್ಳಬೇಕು. ಆದರೇ, ಲಸಿಕೆಯ ಕೊರತೆ ಇದೆ. ಸೂಕ್ತ ಸಮಯದಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತಾದರೇ ಕೋವಿಡ್ ಸೋಂಕಿನ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ‍್ಯವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ತಾಯಿಯ ನೆನಪುಗಳಿರುವ ಮೊಬೈಲ್ ಫೋನ್ ಹುಡುಕಿಕೊಡಿ ಪ್ಲೀಸ್.. : ಜಿಲ್ಲಾಡಳಿತಕ್ಕೆ ಬಾಲಕಿ ಮನವಿ