Advertisement

ಪಟಾಕಿ ನಿಷೇಧವಿದ್ದರೂ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಹಂತಕ್ಕೆ

11:19 AM Nov 05, 2021 | Team Udayavani |

ಹೊಸದಿಲ್ಲಿ: ದೀಪಾವಳಿ ವೇಳೆ ಶುಕ್ರವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವು ಅಪಾಯಕಾರಿ ಹಂತಕ್ಕೆ ತಲುಪಿದೆ.

Advertisement

ದೆಹಲಿ ಸರಕಾರ ಪಟಾಕಿ ನಿಷೇಧ ಹೇರಿದ ಹೊರತಾಗಿಯೂ, ಹಲವಾರು ಜನರು ದೀಪಾವಳಿಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಪಟಾಕಿಗಳನ್ನು ಸಿಡಿಸಿದ್ದಾರೆ. , ಇದು ಗಾಳಿಯ ಗುಣಮಟ್ಟ ಹದಗೆಡಲು ಕಾರಣವಾಗಿದೆ. ಇನ್ನೊಂದೆಡೆ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹೆಚ್ಚಿರುವುದು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

ಜನಪಥ್‌ನಲ್ಲಿಇಂದು ಬೆಳಿಗ್ಗೆ ಮಾಲಿನ್ಯ ಮಾಪಕ 2.5 ಸಾಂದ್ರತೆಯು 655.07 ರಷ್ಟಿತ್ತು.

ದೆಹಲಿಯ ಆಕಾಶವನ್ನು ದಟ್ಟವಾದ ಹೊಗೆಯ ಹೊದಿಕೆಯು ಆವರಿಸಿದೆ , ಹಲವರು ಗಂಟಲಿನ ತುರಿಕೆ ಮತ್ತು ಕಣ್ಣಿನಲ್ಲಿ ನೀರು ತುಂಬಿಕೊಂಡಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next