Advertisement
ಆರಂಭಿಕ ಜೋಶ್ ಕಂಡಾಗ ಆತಿ ಥೇಯ ತಂಡವೂ ಆಗಿರುವ ಮುಂಬೈ ಈ ಕೂಟದ ನೆಚ್ಚಿನ ತಂಡವಾಗಿ ಗೋಚ ರಿಸಿತ್ತು. ಮೊದಲ 5 ಪಂದ್ಯಗಳಲ್ಲಿ ಗೆಲು ವಿನ ಮೆರವಣಿಗೆ ನಡೆಸಿದಾಗ ಕೌರ್ ಪಡೆ ನೇರವಾಗಿ ಫೈನಲ್ ಪ್ರವೇಶಿಸುವುದು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಯುಪಿ ವಾರಿಯರ್ ಮತ್ತು ಡೆಲ್ಲಿ ಸೇರಿಕೊಂಡು ಮುಂದಿನೆರಡು ಪಂದ್ಯಗಳಲ್ಲಿ ಮುಂಬೈಗೆ ಸೋಲಿನ ರುಚಿ ತೋರಿಸಿದವು. ಪಂದ್ಯಾವಳಿಯ ಟ್ರ್ಯಾಕ್ ಬದಲಾಯಿತು. ರನ್‌ರೇಟ್ ಲೆಕ್ಕಾಚಾರದಲ್ಲಿ ಡೆಲ್ಲಿ ಮೇಲೇರಿ ಫೈನಲ್‌ಗೆ ನೆಗೆಯಿತು.
Related Articles
ಮುಂಬೈ ಮೇಲುಗೈಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಅನೇಕರಿದ್ದಾರೆ. 3 ಅರ್ಧ ಶತಕಗಳ ಬಳಿಕ ಕೌರ್ ಬ್ಯಾಟಿಂಗ್ ತುಸು ಮಂಕಾದರೂ ನ್ಯಾಟ್ ಸ್ಕಿವರ್ ಬ್ರಂಟ್, ಹ್ಯಾಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ಅಮೇಲಿಯಾ ಕೆರ್ ದೊಡ್ಡ ಮೊತ್ತಕ್ಕೆ ಕಾರಣರಾಗಬಲ್ಲರು. ಎಲಿಮಿನೇಟರ್ ಪಂದ್ಯದಲ್ಲಿ ಬ್ರಂಟ್ ಬೊಂಬಾಟ್ ಆಟವಾಡಿರುವುದು ಡೆಲ್ಲಿ ಪಾಲಿಗೊಂದು ಎಚ್ಚರಿಕೆ ಗಂಟೆ.
Advertisement
ಉತ್ತಮ ಆಲ್‌ರೌಂಡರ್‌ಗಳ ಪಡೆ ಯನ್ನು ಹೊಂದಿರುವುದು ಮುಂಬೈ ಪಾಲಿನ ಹೆಚ್ಚುಗಾರಿಕೆ. ಮ್ಯಾಥ್ಯೂಸ್, ಬ್ರಂಟ್, ಕೆರ್ ಇವರಲ್ಲಿ ಪ್ರಮು ಖರು. ಬ್ರಂಟ್ 2 ಅರ್ಧ ಶತಕಗಳ ನೆರವಿನಿಂದ 272 ರನ್ ಪೇರಿಸುವ ಜತೆಗೆ 10 ವಿಕೆಟ್ ಕೂಡ ಕೆಡವಿದ್ದಾರೆ. 258 ರನ್, 13 ವಿಕೆಟ್ ಮ್ಯಾಥ್ಯೂಸ್ ಸಾಧನೆಯಾಗಿದೆ. ಯುಪಿ ವಿರುದ್ಧ ಹ್ಯಾಟ್ರಿಕ್ ಸಾಧಿಸಿದ ಇಸಾಬೆಲ್ ವೋಂಗ್ (13 ವಿಕೆಟ್), ಸೈಕಾ ಇಶಾಖ್ (15 ವಿಕೆಟ್) ಮೇಲೆ ಮುಂಬೈ ಹೆಚ್ಚು ಭರವಸೆ ಹೊಂದಿದೆ. ಲ್ಯಾನಿಂಗ್ ಎಷ್ಟು ಲಕ್ಕಿ?
ಅನುಮಾನವೇ ಇಲ್ಲ, ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಅತ್ಯಂತ ಅದೃಷ್ಟಶಾಲಿ. ಆಸ್ಟ್ರೇಲಿಯಕ್ಕೆ 5 ಟಿ20 ವಿಶ್ವಕಪ್ ತಂದಿತ್ತ ಹಿರಿಮೆ ಇವರದು. ಚೊಚ್ಚಲ ವನಿತಾ ಬಿಗ್ ಬಾಶ್ ಲೀಗ್‌ನಲ್ಲೂ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ ಹೆಗ್ಗಳಿಕೆ. ಈ ಪ್ರೀಮಿಯರ್ ಲೀಗ್‌ನಲ್ಲಿ 2 ಅರ್ಧ ಶತಕ ಒಳಗೊಂಡ ಸರ್ವಾಧಿಕ 310 ರನ್ ಪೇರಿಸಿದ್ದಾರೆ. ಇಲ್ಲಿಯೂ ಲ್ಯಾನಿಂಗ್ ಲಕ್ ಮುಂದು ವರಿದೀತೇ ಎಂಬುದನ್ನು ಕಾದು ನೋಡಬೇಕಿದೆ. ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ, ಪವರ್ ಹಿಟ್ಟರ್ ಅಲೈಸ್ ಕ್ಯಾಪ್ಸಿ, ಆಲ್‌ರೌಂಡರ್ ಮರಿಜಾನ್ ಕಾಪ್ (159 ರನ್, 9 ವಿಕೆಟ್), ಇಂಡಿಯನ್ ಸ್ಟಾರ್‌ಗಳಾದ ಜೆಮಿಮಾ ರೋಡ್ರಿಗಸ್, ಶಿಖಾ ಪಾಂಡೆ, ರಾಧಾ ಯಾದವ್ ಅವರೆಲ್ಲ ಡೆಲ್ಲಿಯ ಭರ್ಜರಿ ಓಟದ ರೂವಾರಿಗಳು. ಸಮಬಲದ ಹೋರಾಟ
ಬ್ರೆಬೋರ್ನ್ ಸ್ಟೇಡಿಯಂ ದಾಖ ಲೆಯನ್ನೊಮ್ಮೆ ಅವ ಲೋಕಿಸುವುದಾದರೆ, ಇಲ್ಲಿ ಆಡಿದ ಮೂರೂ ಪಂದ್ಯಗಳನ್ನು ಮುಂಬೈ ಗೆದ್ದಿದೆ. ಡೆಲ್ಲಿ ಎರಡನ್ನು ಗೆದ್ದು, ಒಂದರಲ್ಲಿ ಸೋಲನುಭವಿಸಿದೆ. ಲೀಗ್ ಹಂತದಲ್ಲಿ ಇತ್ತಂಡಗ ಳದ್ದು 1-1 ಸಮಾನ ಸಾಧನೆ. ಇಬ್ಬರದ್ದೂ ದೊಡ್ಡ ಗೆಲುವು. ಮೊದಲ ಪಂದ್ಯವನ್ನು ಮುಂಬೈ 8 ವಿಕೆಟ್‌ಗಳಿಂದ, ದ್ವಿತೀಯ ಸುತ್ತಿನಲ್ಲಿ ಡೆಲ್ಲಿ 9 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಡೆಲ್ಲಿ ಸಾಗಿ ಬಂದ ಹಾದಿ
1 ಆರ್‌ಸಿಬಿ ವಿರುದ್ಧ 60 ರನ್ ಜಯ
2 ಯುಪಿ ವಿರುದ್ಧ 42 ರನ್ ಜಯ
3 ಮುಂಬೈ ವಿರುದ್ಧ 8 ವಿಕೆಟ್ ಸೋಲು
4 ಗುಜರಾತ್ ವಿರುದ್ಧ 10 ವಿಕೆಟ್ ಜಯ
5 ಆರ್‌ಸಿಬಿ ವಿರುದ್ಧ 6 ವಿಕೆಟ್ ಜಯ
6 ಗುಜರಾತ್ ವಿರುದ್ಧ 11 ರನ್ ಸೋಲು
7 ಮುಂಬೈ ವಿರುದ್ಧ 9 ವಿಕೆಟ್ ಜಯ
8 ಯುಪಿ ವಿರುದ್ಧ 5 ವಿಕೆಟ್ ಜಯ
ಮುಂಬೈ ಸಾಗಿ ಬಂದ ಹಾದಿ
1 ಗುಜರಾತ್ ವಿರುದ್ಧ 143 ರನ್ ಜಯ
2 ಆರ್‌ಸಿಬಿ ವಿರುದ್ಧ 9 ವಿಕೆಟ್ ಜಯ
3 ಡೆಲ್ಲಿ ವಿರುದ್ಧ 8 ವಿಕೆಟ್ ಜಯ
4 ಯುಪಿ ವಿರುದ್ಧ 8 ವಿಕೆಟ್ ಜಯ
5 ಗುಜರಾತ್ ವಿರುದ್ಧ 55 ರನ್ ಜಯ
6 ಯುಪಿ ವಿರುದ್ಧ 5 ವಿಕೆಟ್ ಸೋಲು
7 ಡೆಲ್ಲಿ ವಿರುದ್ಧ 9 ವಿಕೆಟ್ ಸೋಲು
8 ಆರ್‌ಸಿಬಿ ವಿರುದ್ಧ 4 ವಿಕೆಟ್ ಜಯ
9 ಯುಪಿ ವಿರುದ್ಧ 72 ರನ್ ಜಯ