Advertisement

ದಿಲ್ಲಿ ವಿವಿ:ಸ್ನೇಹಿತರಿಂದಲೇ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ ರೇಪ್‌ 

03:11 PM Feb 26, 2017 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಮೇಲೆ ಅಮಾನುಷವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ಹೊಸ ಸೇರ್ಪಡೆ ಎಂಬಂತೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಪರಿಚತರೆ ಆದ 6 ಮಂದಿ ಗ್ಯಾಂಗ್‌ ರೇಪ್‌ ಎಸಗಿರುವ ಘಟನೆ ನಡೆದಿದೆ. 

Advertisement

 ಫೆಬ್ರವರಿ 3 ರಂದು ಘಟನೆ ನಡೆದಿದ್ದು  ತಡವಾಗಿ ಬೆಳಕಿಗೆ ಬಂದಿದೆ.  20 ವರ್ಷ ಪ್ರಾಯದ ಸಂತ್ರಸ್ತ ಪಿಜಿಡಿಎವಿ ವಿದ್ಯಾರ್ಥಿನಿ ಸ್ನೇಹಿತರೆ ಆಗಿದ್ದ 6 ಮಂದಿ ವಿದಾರ್ಥಿಗಳು ಫ‌ರಿದಾಬಾದ್‌ನಲ್ಲಿ  ಗ್ಯಾಂಗ್‌ ರೇಪ್‌ ನಡೆಸಿರುವ ಬಗ್ಗೆ  ನೆಹರೂ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಗೌರವ್‌ ಮತ್ತು ಸನ್ನಿ ಎಂಬ ಇಬ್ಬರು ಸ್ನೇಹಿತರು ಸಂತ್ರಸ್ತೆಯನ್ನು ಪಾರ್ಟಿಗೆಂದು ಕೆರೆಸಿಕೊಂಡು ಇನ್ನೋರ್ವ ಗೆಳೆಯ ಸಚಿನ್‌ನ ಬೈಕ್‌ನಲ್ಲಿ ಫ‌ರೀದಾಬಾದ್‌ಗೆ ಬಂದು ಅಲ್ಲಿ ಇನ್ನೋರ್ವ ಸ್ನೇಹಿತ ರೋಹ್‌ತಾಶ್‌ ಎಂಬಾತನ ಮನೆಯಲ್ಲಿ  ಐವರು ಗ್ಯಾಂಗ್‌ ರೇಪ್‌ ಎಸಗಿದ್ದು, ಬಳಿಕ ಕಾರ್‌ ಪಾರ್ಕಿಂಗ್‌ನಲ್ಲಿ  ವಿನೋದ್‌ ಎಂಬಾತ ರೇಪ್‌ ನಡೆಸಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಸಿರುವ ಪೊಲೀಸರು  ಆರೋಪಿಗಳಾದ 6 ಮಂದಿ ವಿದ್ಯಾರ್ಥಿಗಳನ್ನೂ ವಶಕ್ಕೆ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next