ನವದೆಹಲಿ: ದೆಹಲಿಯಿಂದ ಪುಣೆಗೆ ಹೊರಟಿದ್ದ ವಿಸ್ತಾರಾ ವಿಮಾನದಲ್ಲಿ ಬಾಂಬ್ ಸ್ಫೋಟದ ಕುರಿತು ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿಸಲಾಯಿತು.
ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ದೆಹಲಿ-ಪುಣೆ ವಿಸ್ತಾರಾ ವಿಮಾನಕ್ಕೆ ಹೊಸದಿಲ್ಲಿಯಲ್ಲಿರುವ ಜಿಎಂಆರ್ ಗ್ರೂಪ್ ನಡೆಸುತ್ತಿರುವ ಕಾಲ್ ಸೆಂಟರ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಯುಕೆ-971 ದೆಹಲಿಯಿಂದ ಪುಣೆ ವಿಮಾನಕ್ಕೆ ಗುರುಗ್ರಾಮ್‌ನಲ್ಲಿರುವ ಜಿಎಂಆರ್ ಕಾಲ್ ಸೆಂಟರ್‌ನಲ್ಲಿ ಬಾಂಬ್ ಬೆದರಿಕೆ ಬಂದಿತ್ತು ಎಂದು ಭದ್ರತಾ ಏಜೆನ್ಸಿ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರನ್ನು ಇಳಿಸಿ ಭದ್ರತಾ ಸಿಬಂದಿಯಿಂದ ವಿಮಾನದೊಳಗೆ ಪರಿಶೀಲನೆ ನಡೆಸಲಾಯಿತು ಆದರೆ ಸ್ಪೋಟಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಕರೆ ಎನ್ನಲಾಗಿದೆ.
ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಎಲ್ಲ ಪ್ರಯಾಣಿಕರ ಲಗೇಜ್‌ಗಳನ್ನು ಡಿ-ಬೋರ್ಡಿಂಗ್ ಮಾಡಲಾಗಿದ್ದು ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಅಲ್ಲದೆ ಎಲ್ಲ ರೀತಿಯ ತಪಾಸಣೆ ನಡೆಸಿದ ಬಳಿಕ ವಿಮಾನ ಹೊರಡಲಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Ladakh BJP: ಬೌದ್ಧ ಮಹಿಳೆ ಜತೆ ಓಡಿ ಹೋದ ಮಗ…ಅಪ್ಪನನ್ನು ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ