Advertisement
ಈ ಘಟನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿ ಕೆಯ ಓರ್ವ ಅಧಿಕಾರಿಯನ್ನು ವಜಾ ಮಾಡಲಾಗಿದ್ದು, ಮತ್ತೂಬ್ಬರನ್ನು ಅಮಾನತು ಮಾಡಲಾಗಿದೆ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಪಾಲಿಕೆ ಕಮಿಷನರ್ ಹೇಳಿದ್ದಾರೆ.5 ಮಂದಿ ಬಂಧನ: ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 5 ಮಂದಿಯನ್ನು ಬಂಧಿಸಿ ದ್ದಾರೆ. ವಿದ್ಯಾರ್ಥಿಗಳ ಸಾವಿಗೆ ಸಂಬಂಧಿಸಿದಂತೆ ದೆಹಲಿ ಮೇಯರ್ ಶೆಲ್ಲಿ ತುರ್ತು ಸಭೆ ನಡೆಸಿದ್ದಾರೆ.
ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿರುವ ಘಟನೆ ಕುರಿತು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪ ವಾಯಿತು. ಪ್ರಶ್ನೋತ್ತರ ಕಲಾಪದ ಬಳಿಕ ರಾಜ್ಯಸಭೆ ಯಲ್ಲಿ ಅಲ್ಪ ಕಾಲದ ಚರ್ಚೆಗೆ ಸಭಾಪತಿ ಜಗದೀಪ್ ಧನಕರ್ ಅವಕಾಶ ನೀಡಿದರು. ಲೋಕಸಭೆಯಲ್ಲಿ ಬಿಜೆಪಿ ಬಾನ್ಸುರಿ ಸ್ವರಾಜ್, ಎಸ್‌ಪಿಯ ಅಖೀಲೇಶ್ ಯಾದವ್, ಕಾಂಗ್ರೆಸ್‌ನ ಶಶಿ ತರೂರ್ ಮಾತನಾಡಿದರು. ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಧನಕರ್, ಕೋಚಿಂಗ್ ಸೆಂಟರ್‌ಗಳು ಇತ್ತೀಚೆಗೆ ವಾಣಿಜ್ಯೀ ಕರಣಗೊಂಡಿವೆ. ಪ್ರತಿನಿತ್ಯ ಪತ್ರಿಕೆಯಲ್ಲಿ 3 ಪುಟಗಳಷ್ಟು ಇವುಗಳದ್ದೇ ಜಾಹೀರಾತು ಗಳಿರುತ್ತವೆ. ಜತೆಗೆ ಅವು ಗ್ಯಾಸ್ ಚೇಂಬರ್‌ನಂತೆ ಆಗಿವೆ ಎಂದು ಸಭಾಪತಿ ವಿಷಾದ ವ್ಯಕ್ತಪಡಿ ಸಿದರು. ಸದನದಲ್ಲಿದ್ದ ಬಿಜೆಪಿ ಸಂಸದರು ಇದು ಆಪ್ ಸರಕಾರದ ನಿರ್ಲಕ್ಷ್ಯದಿಂದಾದ ಘಟನೆ ಎಂದು ಆಪ್ ವಿರುದ್ಧ ಕಿಡಿಕಾರಿದರು.