Advertisement

ಕುಸಿದ ಆಸೀಸ್ ಗೆ ಖವಾಜಾ- ಹ್ಯಾಂಡ್ಸ್ ಕಾಂಬ್ ನೆರವು; ಮಿಂಚಿದ ಶಮಿ, ಅಶ್ವಿನ್, ಜಡೇಜಾ

04:22 PM Feb 17, 2023 | Team Udayavani |

ಹೊಸದಿಲ್ಲಿ: ಬಾರ್ಡರ್- ಗಾವಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವು 263 ರನ್ ಗೆ ಆಲೌಟಾಗಿದೆ.

Advertisement

ಆಸೀಸ್ ಪರ ಉಸ್ಮಾನ್ ಖವಾಜಾ ಮತ್ತು ಪೀಟರ್ ಹ್ಯಾಂಡ್ಸ್ ಕಾಂಬ್ ಅರ್ಧಶತಕ ಸಿಡಿಸಿ ಮಿಂಚಿದರೆ, ಭಾರತದ ಪರ ಶಮಿ, ಅಶ್ವಿನ್ ಮತ್ತು ಜಡೇಜಾ ವಿಕೆಟ್ ಬೇಟೆಯಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಆಸೀಸ್ ಮೊದಲ ವಿಕೆಟ್ ಗೆ 50 ರನ್ ಕಲೆಹಾಕಿತು. ಡೇವಿಡ್ ವಾರ್ನರ್ 15 ರನ್ ಮತ್ತು ಲಬುಶೇನ್ 18 ರನ್ ಗಳಿಸಿ ಅಗ್ಗಕ್ಕೆ ಔಟಾದರೂ, ಅವರ ಜೊತೆಗೂಡಿದ ಖವಾಜಾ ಜೊತೆಯಾಟವಾಡಿದರು. ವೇಗವಾಗಿಯೇ ಬ್ಯಾಸ್ ಬೀಸಿದ ಖವಾಜಾ 125 ಎಸೆತದಲ್ಲಿ 12 ಬೌಂಡರಿ ಸಹಿತ 81 ರನ್ ಗಳಿಸಿದರು. ಆದರೆ ಜಡೇಜಾ ಎಸೆತದಲ್ಲಿ ರಾಹುಲ್ ಹಿಡಿದ ಅದ್ಭುತ ಕ್ಯಾಚ್ ಗೆ ಖವಾಜಾ ಬಲಿಯಾದರು.

ಖವಾಜಾ ಔಟಾದ ಬಳಿಕ ಆಸೀಸ್ ಪಾಳಿಯನ್ನು ಪೀಟರ್ ಹ್ಯಾಂಡ್ಸ್ ಕಾಂಬ್ ಸಂಭಾಳಿಸಿದರು. ಅವರು ಅಜೇಯ 72 ರನ್ ಮಾಡಿದರು. ಉಳಿದಂತೆ ನಾಯಕ ಕಮಿನ್ಸ್ 33 ರನ್ ಕಾಣಿಕೆ ನೀಡಿದರು.

ಭಾರತದ ಪರ ವೇಗಿ ಶಮಿ ನಾಲ್ಕು ವಿಕೆಟ್ ಕಿತ್ತರೆ, ಅಶ್ವಿನ್ ಮತ್ತು ಜಡೇಜಾ ತಲಾ ಮೂರು ವಿಕೆಟ್ ಉರುಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next