Advertisement

‘JioHotstar’ ಡೊಮೈನ್‌ಗೆ 1 ಕೋಟಿ ಕೊಡಿ: ಟೆಕಿ ಆಫ‌ರ್‌

01:48 AM Oct 25, 2024 | Team Udayavani |

ಹೊಸದಿಲ್ಲಿ: ಜಿಯೋ ಸಿನೆಮಾ ಹಾಗೂ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ವಿಲೀನ ಪ್ರಕ್ರಿಯೆಗಳು ಪ್ರಗತಿಯಲ್ಲಿ ಇರುವಾಗಲೇ “ಜಿಯೋ ಹಾಟ್‌ಸ್ಟಾರ್‌’ ಹೆಸರಿನ ಡೊಮೈನನ್ನು 2021ರಲ್ಲೇ ತಾನು ಖರೀದಿ ಮಾಡಿರುವುದಾಗಿ ಹೊಸದಿಲ್ಲಿ ಮೂಲದ ಟೆಕಿಯೊಬ್ಬರು ಹೇಳಿಕೊಂಡಿದ್ದಾರೆ. ಅದನ್ನು ರಿಲಯನ್ಸ್‌ ಸಂಸ್ಥೆ 1 ಕೋಟಿ ರೂ. ನೀಡಿ ಖರೀದಿ ಮಾಡಬೇಕು. ಆ ಮೊತ್ತದಿಂದ ತಾನು ಕೇಂಬ್ರಿಡ್ಜ್ ವಿವಿಯಲ್ಲಿ ಶಿಕ್ಷಣ ಪಡೆಯಲು ಸಹಾಯವಾಗಲಿದೆ ಎಂದು ಆಫ‌ರ್‌ ನೀಡಿದ್ದಾರೆ. ಈ ಕೋರಿಕೆಯನ್ನು ರಿಲಯನ್ಸ್‌ ಸಂಸ್ಥೆ ತಿರಸ್ಕರಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

Advertisement

ಬೃಹತ್‌ ಕಂಪೆನಿ ವಿರುದ್ಧ ಹೋರಾಟ ಅಸಾಧ್ಯ. ಅದಕ್ಕೆ ತಜ್ಞರು ನೆರವು ನೀಡಬೇಕು ಎಂದು
ಟೆಕಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next