Advertisement
ಜೂನ್ 11 ರಂದು ಈ ಘಟನೆ ನಡೆದಿದ್ದು, ನಾಯಿಯ ದಾಳಿಗೆ ಉದ್ಯೋಗಿ ಯುವತಿ ತತ್ತರಿಸಿ ಹೋಗಿದ್ದಾರೆ. ಮಾತ್ರವಲ್ಲದೆ ನಾಯಿ ಎಗ್ಗಿಲ್ಲದೆ ಕಚ್ಚಿದ ಪರಿಣಾಮ ಮುಖ ಮತ್ತು ಕುತ್ತಿಗೆಗೆ ಕನಿಷ್ಠ 15 ಹೊಲಿಗೆಗಗಳನ್ನು ಹಾಕಲಾಗಿದೆ ಎಮದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಸಪ್ನಾ ಎಂಬ ಯುವತಿ ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಬ್ಯೂಟಿಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್-19 ಕಾರಣದಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಧಿಸುವ ಎರಡು ದಿನಗಳ ಮುನ್ನ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಆವರೆಗೂ ಸುಮಾರು ಒಂದೂವರೆ ತಿಂಗಳು ಪಾರ್ಲರ್ ನಲ್ಲಿ ಕೆಲಸ ಮಾಡಿದ್ದರು.
ಆದರೇ ಜೂನ್ 11 ರಂದು ಬಾಕಿ ಕೇಳಲು ಹೋದ ಸಮಯದಲ್ಲಿ ಬ್ಯೂಟಿ ಪಾರ್ಲರ್ ಮಾಲಕಿ ತನ್ನ ಮನೆಗೆ ಬರುವಂತೆ ತಿಳಿಸಿದ್ದರು. ಮಾತ್ರವಲ್ಲದೆ ಮನೆ ಕೆಲಸ ಮಾಡಲು ಒತ್ತಾಯಿಸಿದ್ದರು. ಹಾಗೆ ಮಾಡಲು ನಿರಾಕರಿಸಿದಾಗ ನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದಾರೆ ಎಂದು ಸಂತ್ರಸ್ಥೆ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಈ ಕಾರಣದಿಂದ ಬ್ಯೂಟಿ ಪಾರ್ಲರ್ ಮಾಲಕಿ ರಜನಿಯ ಮೇಲೆ ಐಪಿಸಿ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ) ಮತ್ತು ಮತ್ತು ಐಪಿಸಿ ಸೆಕ್ಷನ್ 308ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಎಂದು ಡಿಸಿಪಿ ಅತುಲ್ ಕುಮಾರ್ ಠಾಕೂರ್ ಮಾಹಿತಿ ನೀಡಿದ್ದಾರೆ.