Advertisement
ದೆಹಲಿ ಸರ್ಕಾರ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಡುವಿನ ಗುದ್ದಾಟದಿಂದಾಗಿ ಈ ನಿರ್ಧಾರ ಮುಂದಕ್ಕೆ ಹೋಗಿದೆ. ಈ ನಡುವೆ ಸೋಮವಾರ ದೆಹಲಿ ಸರ್ಕಾರ ಎನ್‌ಜಿಟಿ ಮುಂದೆಯೇ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಲಿದೆ.
Related Articles
Advertisement
ದೆಹಲಿ ಸರ್ಕಾರಕ್ಕೆ ತರಾಟೆ: ಶನಿವಾರ ಬೆಳಗ್ಗೆ ನಡೆದಿದ್ದ ವಿಚಾರಣೆ ವೇಳೆ ನ್ಯಾ.ಸ್ವತಂತ್ರ ಕುಮಾರ್ ನೇತೃತ್ವದ ಎನ್‌ಜಿಟಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. “ನಿಮ್ಮ ಸರ್ಕಾರದ ನಿರ್ಧಾರ ಕೇವಲ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಮಾಡುವಂತೆ ಕಾಣುತ್ತದೆ. ಗಾಳಿಯ ಗುಣಮಟ್ಟ ಹೆಚ್ಚಿಸುವ ರೀತಿಯ ಯಾವ ಕ್ರಮಗಳು ಜಾರಿಯಾಗಿವೆ?’ ಎಂದು ಪ್ರಶ್ನಿಸಿದರು.
ಜತೆಗೆ ಬೆಸ-ಸಮ ಸಂಚಾರ ವ್ಯವಸ್ಥೆ ಕಟ್ಟುನಿಟ್ಟಿನಲ್ಲಿ ಜಾರಿಯಾಗಬೇಕು. ದ್ವಿಚಕ್ರ ವಾಹನ ಬಳಕೆ ಮಾಡುವವರು, ಮಹಿಳೆಯರು, ಸರ್ಕಾರಿ ಅಧಿಕಾರಿಗಳು ಯಾರೇ ಇರಲಿ ಅವರಿಗೆ ವಿನಾಯಿತಿ ಕೊಡಲು ಸಾಧ್ಯವೇ ಇಲ್ಲ ಎಂದು ಮಂಡಳಿ ಸಾರಿತ್ತು. ಆದರೆ, ಸಿಎನ್‌ಜಿ ವಾಹನಗಳು, ತುರ್ತು ಸೇವೆಗಳಾದ ಆ್ಯಂಬ್ಯುಲೆನ್ಸ್ ಮತ್ತು ತ್ಯಾಜ್ಯ ನಿರ್ವಹಣೆಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿತ್ತು.
ಬಸ್‌ಗಳಿಂದ ಕರ್ಕಶ ಶಬ್ದ: ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎನ್‌ಜಿಟಿ, ದೆಹಲಿ ಬಸ್‌ಗಳು ಕರ್ಕಶ ಶಬ್ದ ಮಾಡುತ್ತವೆ. ಯಾಕೆ ಅವುಗಳ ನಿರ್ವಹಣೆಗೆ ಒತ್ತು ಕೊಡುತ್ತಿಲ್ಲ. ಬಸ್‌ಗಳು ಒಂದೋ ಪ್ರಯಾಣಿಕರಿಲ್ಲದೆ ಖಾಲಿ ಸಂಚರಿಸುತ್ತಿರುತ್ತವೆ ಅಥವಾ ವಿಪರೀತ ತುಂಬಿ ತುಳುಕುತ್ತಿರುತ್ತವೆ ಎಂದು ನ್ಯಾ. ಸ್ವತಂತ್ರ ಕುಮಾರ್ ಆಕ್ಷೇಪಿಸಿದ್ದಾರೆ.
ವಿಮಾನ ರದ್ದುಗೊಳಿಸಿದ ಸಂಸ್ಥೆಮಂಜು ಹಾಗೂ ಧೂಮ ಮಿಶ್ರಿತ ಹೊಗೆಯ ಪರಿಸ್ಥಿತಿಯಿಂದಾಗಿ ದೆಹಲಿಗೆ ವಿಮಾನ ಹಾರಾಟ ನಡೆಸದಿರಲು ಅಮೆರಿಕ ಮೂಲಕ ನಾಗರಿಕ ವಿಮಾನಯಾನ ಸಂಸ್ಥೆ ಯುನೈಟೆಡ್ ಏರ್‌ಲೈನ್ಸ್ ನಿರ್ಧರಿಸಿದೆ. ನವೆಂಬರ್ 18ರವರೆಗೆ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ರದ್ದತಿ ಶುಲ್ಕ ಭರಿಸದೇ ಪ್ರಯಾಣಿಕರು ಇತರ ವಿಮಾನಗಳಿಗೆ ಬುಕ್ ಮಾಡಬಹುದಾಗದೆ ಎಂದು ಸಂಸ್ಥೆ ತಿಳಿಸಿದೆ. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲವೇ ಇಲ್ಲ. ಸರ್ಕಾರಿ ಅಧಿಕಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ವಿನಾಯಿತಿ ನೀಡಬೇಕು ಎಂದು ಕೇಳಿದ್ದನ್ನು ಎನ್‌ಜಿಟಿ ಒಪ್ಪಿಲ್ಲ. ಅದರ ಆದೇಶದ ಬಗ್ಗೆ ಗೌರವ ಇದೆ.
– ಕೈಲಾಶ್ ಗೆಹೊÉàಟ್, ದೆಹಲಿ ಸಾರಿಗೆ ಸಚಿವ