Advertisement

ದಿಲ್ಲಿ ಶೂಟಿಂಗ್‌ ವಿಶ್ವಕಪ್‌ ರದ್ದು

10:34 PM Apr 06, 2020 | Sriram |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮೇ ತಿಂಗಳಲ್ಲಿ ನಡೆಯಲಿದ್ದ ಶೂಟಿಂಗ್‌ ವಿಶ್ವಕಪ್‌ ಕೂಟವನ್ನು ಕೋವಿಡ್ 19 ವೈರಸ್‌ನ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

Advertisement

ದಿಲ್ಲಿ ಶೂಟಿಂಗ್‌ ವಿಶ್ವಕಪ್‌ ಈ ಹಿಂದೆ ನಿಗದಿಪಡಿಸಿದಂತೆ ಮಾ. 15ರಿಂದ 26ರ ವರೆಗೆ ನಡೆಯಬೇಕಿತ್ತು. ಕೋವಿಡ್ 19ದಿಂದಾಗಿ ಮುಂದೂಡಲಾಗಿತ್ತು. ಆದರೆ ಕೋವಿಡ್ 19 ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕಾರಣ ಹೊಸದಿಲ್ಲಿ ಸಂಘಟನ ಸಮಿತಿಯು ರೈಫ‌ಲ್‌/ಪಿಸ್ತೂಲ್‌ ಮತ್ತು ಶಾಟ್‌ಗನ್‌ ವಿಶ್ವಕಪ್‌ ಕೂಟವನ್ನು ರದ್ದುಗೊಳಿಸಲು ನಿರ್ಧರಿಸಿತು. ಈ ಎರಡು ಕೂಟ ಹೊಸದಿಲ್ಲಿಯಲ್ಲಿ ನಡೆಯಬೇಕಿತ್ತು ಎಂದು ಶೂಟಿಂಗ್‌ನ ವಿಶ್ವ ಆಡಳಿತ ಮಂಡಳಿ ಐಎಸ್‌ಎಸ್‌ಎಫ್ ಪ್ರಕಟನೆ ಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.