Advertisement

ಜ.1 ರಿಂದ 15 ರವರೆಗೆ ಸರ್ಕಾರಿ ಶಾಲೆಗಳಿಗೆ ಚಳಿಗಾಲದ ರಜೆ: ದೆಹಲಿ ಸರ್ಕಾರದ ಆದೇಶ

08:44 PM Dec 22, 2022 | Team Udayavani |

ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಗಳಿಗೆ ಜನವರಿ 1ರಿಂದ 15 ರವರೆಗೆ ಚಳಿಗಾಲದ ರಜೆ ನೀಡಿ ಸರಕಾರ ಆದೇಶ ಹೊರಡಿಸಿದೆ.

Advertisement

ವಾಯು ಮಾಲಿನ್ಯ ಮತ್ತು ಚಳಿಗಾಲವಾದ ಕಾರಣ ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಬರುವ ಶಾಲೆಗಳನ್ನು ಮುಚ್ಚಲಾಗುವುದು ಎಂದು ಹೇಳಿದೆ.

ಈ ನಿಟ್ಟಿನಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳನ್ನು ವಾರ್ಷಿಕ ಮತ್ತು ಬೋರ್ಡ್ ಪರೀಕ್ಷೆಗಳಿಗೆ ಸಿದ್ಧಪಡಿಸುವ ಸಲುವಾಗಿ ಈ ರಜೆಯಲ್ಲಿ ಪರಿಹಾರ ತರಗತಿಗಳನ್ನು ಸಹ ಆಯೋಜಿಸಲಾಗುವುದು ಎಂದು ಶಿಕ್ಷಣ ನಿರ್ದೇಶನಾಲಯವು ಶಾಲೆಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ.

ಅದರಂತೆ ಈ ತರಗತಿಗಳು ಜನವರಿ 2 ರಿಂದ ಜನವರಿ 14 ರವರೆಗೆ ನಡೆಯಲಿದೆ. ಈ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತು ತರಬೇತಿ ನಡೆಸಲಾಗುತ್ತದೆ ಅಲ್ಲದೆ ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿವೆ ಎಂದು ಹೇಳಿದೆ.

ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30 ರಿಂದ 12:50 ರವರೆಗೆ ತರಗತಿಗಳು ಇರಲಿದ್ದು. ಅದೇ ರೀತಿ ಮಧ್ಯಾಹ್ನ 1:30 ರಿಂದ ಸಂಜೆ 5:50 ರವರೆಗೆ ಎರಡನೇ ಹಂತದಲ್ಲಿ ತರಗತಿಗಳು ನಡೆಯುತ್ತವೆ. ಪ್ರತಿದಿನ ಒಟ್ಟು ನಾಲ್ಕು ವಿಷಯಗಳ ಕುರಿತು ತರಗತಿಗಳು ನಡೆಯಲಿದ್ದು.

Advertisement

9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಯಮಿತ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ತರಗತಿಗಳನ್ನು ನಡೆಸಲಾಗುವುದು. ಅದೇ ಸಮಯದಲ್ಲಿ, ಬೋರ್ಡ್ ಪರೀಕ್ಷೆಗಳ ತಯಾರಿಗಾಗಿ 10 ನೇ-12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರ್ವ-ಬೋರ್ಡ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಅಭ್ಯಾಸ ಮಾಡಲಾಗುವುದು. ಈ ತರಗತಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರದಲ್ಲಿ ಮಾತ್ರ ಬರಬೇಕು.

Advertisement

Udayavani is now on Telegram. Click here to join our channel and stay updated with the latest news.

Next